suddibindu.in
Honnavar:ಹೊನ್ನಾವರ : ಬಸ್ಗೆ ಬೈಕ್ ಸವಾರ ಡಿಕ್ಕಿ ಹೊಡೆದು ಸವಾರ ಸ್ಥಳದಲ್ಲೆ ಮೃತಪಟ್ಟಿರುವ ಘಟನೆ ಉತ್ತರಕನ್ನಡ(uttara Kannada) ಜಿಲ್ಲೆಯ ಹೊನ್ನಾವರ ತಾಲೂಕಿನ ಹಳದಿಪುರ ಸಮೀಪದ ಅಗ್ರಹಾರ ಬಳಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ( National Highway 66) ನಡೆದಿದೆ.
- ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕರ ಪುರಸ್ಕಾರಕ್ಕೆ ಶಿರಸಿ ಶೈಕ್ಷಣಿಕ ಜಿಲ್ಲೆಯ ಪುರಸ್ಕೃತರ ಹೆಸರು ಪ್ರಕಟ
- ಪತ್ರಕರ್ತೆ ರಾಧ ಹಿರೇಗೌಡರ್ಗೆ ಅವಮಾನಿಸಿದ R V ದೇಶ್ಪಾಂಡೆ ವಿರುದ್ಧ ಮಾಜಿ ಶಾಸಕ ಸುನೀಲ್ ಹೆಗಡೆ ಕಿಡಿ
- ರಾಧಾ ಹಿರೇಗೌಡರ್ಗೆ “ಹೆರಿಗೆ ಮಾಡಸ್ತಿನಿ ಹೇಳಿಕೆ ವಿಚಾರ” : ಕಾಂಗ್ರೆಸ್ನ ಕಿಳುಮಟ್ಟದ ಮನಸ್ಥಿತಿ ಎಂದ ಬಿಜೆಪಿ
ಅಪಘಾತದಲ್ಲಿ ಬೈಕ್ ಸವಾರ ಶಂಕರ ಹೆಗಡೆ (50) ಎಂಬಾತ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕೆಎಸ್ಆರ್ಟಿಸಿ ಬಸ್ ಹೊನ್ನಾವರ ಕಡೆಯಿಂದ ಕುಮಟ ಕಡೆ ಚಲಿಸುತ್ತಿತ್ತು ಎನ್ನಲಾಗಿದೆ. ಇದೆ ವೇಳೆ ಏಕ ಮುಖ ಹೆದ್ದಾರಿಯಲ್ಲಿ ಬೈಕ್ ಸವಾರ ಶಂಕರ ಹೆಗಡೆ ಬಸ್ ಎದುರಿಗೆ ಬೈಕ್ ಚಲಿಸಿಕೊಂಡು ಬಂದು ನೇರವಾಗಿ ಬಸ್ಗೆ ಡಿಕ್ಕಿ ಹೊಡೆದಿದ್ದಾರೆ ಎನ್ನಲಾಗಿದೆ. ಪರಿಣಮ ಬೈಕ್ ಸವಾರನ ತಲೆಗೆ ಗಂಭೀರವಾಗಿ ಗಾಯವಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎನ್ನಲಾಗಿದೆ.
ಅಪಘಾತದ ಸುದ್ದಿ ತಿಳಿದ ಹೊನ್ನಾವರ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಅಪಘಾತ ಕುರಿತು ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.