suddibindu.in
Karwar:ಕಾರವಾರ : ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತವಾಗಿರುವ ಹಿನ್ನಲೆಯಲ್ಲಿ ಉತ್ತರಕನ್ನಡ ಜಿಲ್ಲೆಯ ಕರಾವಳಿಯಲ್ಲಿ ಸಹ ಮೇ 22ರ ತನಕ ಮೀನುಗಾರಿಕೆಗೆ ತೆರಳದಂತೆ ಜಿಲ್ಲಾಡಳಿತ ಆದೇಶ ನೀಡಿದೆ.
- ಕೊನೆಗೂ ಬುರುಡೆ ಮೂಳೆ ರಹಷ್ಯ ಬಯಲು: ಇಬ್ಬರ ಬಂಧನ
- ಬಂಗ್ಲೆಗುಡ್ಡೆಯಲ್ಲಿ ಮತಷ್ಟು ಮೂಳೆಗಳು ಪತ್ತೆ : ಧರ್ಮಸ್ಥಳ ಕೇಸ್ಗೆ ಬಿಗ್ ಟ್ವಿಸ್ಟ್..!
- Kumta/ಕುಮಟಾದಲ್ಲಿ ಇಂದಿರಾ ಕ್ಯಾಂಟಿನ್ ಉದ್ಘಾಟಿಸಿದ ಸಚಿವ ಮಂಕಾಳ್ ವೈದ್ಯ
ಈ ವರ್ಷದಲ್ಲಿ ಜನವವರಿ ತಿಂಗಳಿನಿಂದ ಹೆಚ್ಚಿನ ಮೀನು ಸಿಗದೇ ಮತ್ಸತ್ರ್ಯಕ್ಷಾಮ ಎದುರಾಗಿತ್ತು. ಈ ಹಿನ್ನೆಲೆಯಲ್ಲಿ ಹೆಚ್ಚಿನ ಬೋಟ್ಗಳು ಸಮುದ್ರಕ್ಕೆ ಇಳಿಯಲಿಲ್ಲ. ಮುಂಗಾರಿನ ಆರಂಭಕ್ಕೂ ಮುನ್ನ ಉತ್ತಮ ಮೀನುಗಾರಿಕೆಯ ನಿರೀಕ್ಷೆಯಲ್ಲಿದ್ದ ಮೀನುಗಾರರಿಗೂ ವಾಯುಭಾರ ಕುಸಿತವು ಅಡ್ಡಿಯಾಗಿದೆ. .
ಹೀಗಾಗಿ ಜೂನ್ ತಿಂಗಳ ಆರಂಭಕ್ಕೆ ಇನ್ನೂ 10ದಿನ ಬಾಕಿ ಇರುವಾಗಲೇ ಎಲ್ಲಾ ಬೋಟ್ಗಳು ಬಂದರುಗಳಲ್ಲಿ ಲಂಗರು ಹಾಕುವಂತಾಗಿದೆ.ಹವಾಮಾನದ ವೈಪರೀತ್ಯದಿಂದ ಈ ಬಾರಿ ಮುಂಗಾರಿನ ಆರಂಭಕ್ಕೂ ಮುನ್ನವೇ ಮೀನುಗಾರಿಕೆಗೆ ಹೊಡೆತ ಬಿದ್ದಿದೆ.ಉತ್ತರಕನ್ನಡ ಜಿಲ್ಲೆಯ ಕಾರವಾರ ಸೇರಿದಂತೆ ಕರಾವಳಿ ತಾಲೂಕಿನಲ್ಲಿ ಇರುವ ಎಲ್ಲಾ ಬೋಟ್ಗಳನ್ನ ವಾಪಸ್ ದಡಕ್ಕೆ ಕರೆಸಿಕೊಳ್ಳಲಾಗಿದೆ.
ಸದಾ ಒಂದಲ್ಲ ಒಂದು ಕಾರಣದಿಂದಾಗಿ ಪ್ರತಿ ಬಾರಿಯೂ ಮೀನುಗಾರಿಕೆ ನಡೆಸಲು ಸಮಸ್ಯೆ ಉಂಟಾಗುತ್ತಿದೆ.ಸಾಲ ಮಾಡಿ ಬೋಟ್ ಮಾಡಿದವರು ಸಾಲ ಮರುಪಾವತಿ ಮಾಡಲು ಸಾಧ್ಯವಾಗದ ಪರಿಸ್ಥಿತಿ ಉಂಟಾಗಿದೆ. ಹೀಗಾಗಿ ಸರಕಾರ ರೈತರಿಗೆ ನೀಡುವ ಸವಲತ್ತುಗಳನ್ನ ಮೀನುಗಾರರಿಗೂ ನೀಡುವಂತಾಗಬೇಕು ಎಂದು ವಿನಾಯಕ ಹರಿಕಾಂತ ಸರಕಾರಕ್ಕೆ ಆಗ್ರಹಿಸಿದ್ದಾರೆ.