suddibindu.in
ಕಾರವಾರ: ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಇಂದು ನಾಮಪತ್ರ ಸಲ್ಲಿಕೆ ಹಿನ್ನಲೆಯಲ್ಲಿ ಕಾರವಾರ ನಗರದಲ್ಲಿ ಮೆರವಣಿಗೆ ನಡೆಸಿದ್ದು , ಸೂರಜ್ ನಾಯ್ಕ ಸೋನಿ ಅಭಿಮಾನಿಗಳು ಅಸಮಧಾನ ಹೊರಹಾಕಿದ್ದಾರೆ. ಬಳಿಕ ಸೋನಿ ಅವರು ಮೆರವಣಿಗೆಯಿಂದ ಅರ್ಧದಲ್ಲಿಯೇ ಜೆಡಿಎಸ್ ಮುಖಂಡ ವಾಪಾಸ್ ತೆರಳಿದ ಘಟನೆ ನಡೆದಿದೆ.
ಇಂದು ನಗರದ ದೈವಜ್ಞ ಭವನದಿಂದ ವಿಶ್ವೇಶ್ವರ ಹೆಗಡೆ ಕಾಗೇರಿ ನಾಮಪತ್ರ ಸಲ್ಲಿಕೆ ಹಿನ್ನಲೆಯಲ್ಲಿ ಮೆರವಣಿಗೆ ಪ್ರಾರಂಭಿಸಿದರು. ಈ ವೇಳೆ ಜೆಡಿಎಸ್ ಮುಖಂಡ ಸೂರಜ್ ನಾಯ್ಕ ಸೋನಿ ಪಾಲ್ಗೊಂಡರು. ಆದರೆ ಮೆರವಣಿಗೆ ವಾಹನದಲ್ಲಿ ಸೂರಜ್ ನಾಯ್ಕ ಸೋನಿ ಅವರ ಫೋಟೋ ಕೈ ಬಿಟ್ಟ ಬಿಜೆಪಿ ನಾಯಕರು ಬೆಂಬಲ ಕೊಡದ ಆನಂದ್ ಅಸ್ನೋಟಿಕರ್ ಸೇರಿ ಹಲವರ ಫೋಟೋವನ್ನ ಹಾಕಿದ್ದರು. ಸೂರಜ ನಾಯ್ಕ ಸೋನಿ ಅವರು ಉತ್ತರಕನ್ನಡ ಲೋಕಸಭಾ ಕ್ಷೇತ್ರದ ಜೆಡಿಎಸ್ ಉಸ್ತುವಾರಿ ಜೊತೆಗೆ ರಾಜ್ಯ ಜೆಡಿಎಸ್ ಕೋರಕಮಿಂಟಿ ಸದಸ್ಯರೂ ಕೂಡ ಆಗಿದ್ದಾರೆ. ರಾಜ್ಯದ ಮಟ್ಟದ ಮುಖಂಡ ಸೋನಿ ಅವರ ಪೊಟೋ ಹಾಕದೆ ಬಿಜೆಪಿ ಯಡವಟ್ಟು ಮಾಡಿಕೊಂಡಿದೆ.
ಇದನ್ನೂ ಓದಿ
- ವಿದ್ಯಾರ್ಥಿಗಳ ಸೌಲಭ್ಯಕ್ಕಾಗಿ ಬಸ್ ಸಂಚಾರಕ್ಕೆ ರೂಪಾಲಿ ನಾಯ್ಕ ಮನವಿ
- ಬನವಾಸಿ,ಸಿದ್ದಾಪುರ ಸಾಗರಕ್ಕೆ ಸೇರ್ಪಡೆ ತಿರುಕನ ಕನಸು: ಶಾಸಕ ಶಿವರಾಮ ಹೆಬ್ಬಾರ
- “ಚಿನ್ನದ ಬೆಲೆ ಕುಸಿತದ ನಿರೀಕ್ಷೆ: ಜಾಗತಿಕ ಹೂಡಿಕೆದಾರರ ಗಮನ ಫೆಡ್ ಸಭೆಯತ್ತ” ಬಂಗಾರದ ಪ್ರಿಯರಿಗೆ ‘ಬಂಗಾರ’ ದ ಸುದ್ದಿ
ಇನ್ನು ಮೆರವಣಿಗೆ ಮುಗಿಯುವ ವೇಳೆ ಸೂರಜ್ ಬೆಂಬಲದಿಂದ ಕುಮಟಾದಿಂದ ಬಂದಿದ್ದ ಜೆಡಿಎಸ್ ಕಾರ್ಯಕರ್ತರು ಸೂರಜ್ ನಾಯ್ಕ ಸೋನಿ ಫೋಟೋ ಹಾಕದೇ ಇರುವ ಬಗ್ಗೆ ಅವರ ಹೆಸರನ್ನ ಎಲ್ಲೂ ಉಲ್ಲೇಖಿಸದ ಬಗ್ಗೆ ಆಕ್ರೋಶ ಹೊರಹಾಕಿದರು.
ಈ ವೇಳೆ ಬೇಸರಗೊಂಡ ಸೂರಜ್ ನಾಯ್ಕ ಸೋನಿ ಅರ್ಧದಲ್ಲಿಯೇ ಮೆರವಣಿಗೆ ಮೊಟಕು ಗೊಳಿಸಿ ವಾಪಾಸ್ ಕುಮಟಾದತ್ತ ಹೊರಟರು. ಬಿಜೆಪಿಗರ ನಡೆ ಈ ಬಾರಿ ಚುನಾವಣೆಯ ಮೇಲೆ ಪರಿಣಾಮ ಬೀಳುತ್ತದೆ ಎಂದು ಸೂರಜ್ ನಾಯ್ಕ ಅವರ ಬೆಂಬಲಿಗರು ಈ ವೇಳೆ ಕಿಡಿಕಾರಿದರು.