suddibindu.in
Karwar: ಕಾರವಾರ: ಗೇರುಹಣ್ಣು ತಿನ್ನುತ್ತಿರುವಾಗ ಹಣ್ಣು ಗಂಟಲಲ್ಲಿ ಸಿಕ್ಕಿಕೊಂಡು ಉಸಿರಾಟ ಸಮಸ್ಯೆ ಉಂಟಾಗಿ ವ್ಯಕ್ತಿಯೋರ್ವ ಮೃತಪಟ್ಟಿರುವ ಉತ್ತರಕನ್ನಡ(uttarkannada)ಜಿಲ್ಲೆಯ ಕಾರವಾರ ತಾಲೂಕಿನ ಅಮದಳ್ಳಿಯ ಚರ್ಚವಾಡಾದಲ್ಲಿ ನಡೆದಿದೆ.
ಕೆರಲ್ ಅಂತೋನ(46) ಮೃತ ವ್ಯಕ್ತಿಯಾಗಿದ್ದಾನೆ.ಈತ ಸ್ನೇಹಿತನೊಂದಿಗೆ ಕಳೆದ ಎರಡು ದಿನಗಳ ಹಿಂದೆ ಸಂಜೆ ಹೊರಗೆ ಹೋಗಿದ್ದರು. ಬಳಿಕ ಅಮದಳ್ಳಿಯ ರೈಲ್ವೆ ಸೇತುವೆಯ ಬಳಿ ಮರದಿಂದ ಬಿದ್ದಿದ್ದ ಗೇರು ಹಣ್ಣನ್ನು ಒಮ್ಮೆಲೆ ತಿಂದ್ದಿದ್ದಾರೆ.ಈ ವೇಳೆ ಹಣ್ಣು ಗಂಟಲ್ಲಿ ಸಿಕ್ಕಿಕೊಂಡು ಉಸಿರಾಟಕ್ಕೆ ತೊಂದರೆಯಾಗಿದ್ದು ಅಸ್ವಸ್ಥನಾಗಿ ಬಿದ್ದಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ
- ದಿನಕರರು ದೇಶ ವಿದೇಶಗಳಲ್ಲಿ ಕನ್ನಡವನ್ನು ಪಸರಿಸಿದ ಕನ್ನಡದ ಕಟ್ಟಾಳು : ರಮೇಶ್ ಗೌಡ ಕಡಮೆ
- ಶಾಸಕ ಸತೀಶ್ ಸೈಲ್ ಗೆ ಮಧ್ಯಂತರ ಜಾಮೀನು
- ಭಟ್ಕಳದಲ್ಲಿ ರಾಶಿ ರಾಶಿ ಮೂಳೆ ಪತ್ತೆ
ಕಾರವಾರದ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದರೆ ವೈದ್ಯರು ವ್ಯಕ್ತಿಯು ಮೃತಪಟ್ಟ ಬಗ್ಗೆ ಖಚಿತಪಡಿದ್ದಾರೆ ಎಂದು ಮೃತರ ಪತ್ನಿ ಲತಾ ಅಂತೋನ ದೂರಿನಲ್ಲಿ ತಿಳಿಸಿದ್ದಾರೆ. ಕಾರವಾರ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.