ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್‌ನಲ್ಲಿ ಅಭ್ಯರ್ಥಿ ಘೋಷಣೆ ವಿಳಂಬವಾದ ಸಂದರ್ಭದಲ್ಲಿ ಪಕ್ಷದ ಸಭೆಯಲ್ಲಿ ಮಾತನಾಡಿದ ಅನಂಕುಮಾರ ಹೆಗಡೆ ಕಾಂಗ್ರೆಸ್ ನಲ್ಲಿ ಸ್ಪರ್ಧೆ ಮಾಡಲು ಯಾರಿಲ್ಲ.ಅಲ್ಲಿ ಕರಿಮಣಿಕಟ್ಟೋರು ಇಲ್ಲ. ಕಟ್ಟಿಸಿಕೊಳ್ಳುವವರು ಇಲ್ಲ ಎಂದಿ ಗೇಲಿ ಮಾಡಿದ್ದರು.
ಇದನ್ನೂ ಓದಿ
- ಆರ್ಎಸ್ಎಸ್ ನಿಷೇಧ ಹೇಳಿಕೆ ಪ್ರಚಾರದ ತೆವಲು: ಪ್ರಿಯಾಂಕ ಖರ್ಗೆಗೆ ಹೇಳಿಕೆಗೆ ರೂಪಾಲಿ ನಾಯ್ಕ ತಿರುಗೇಟು
- ಶಾಲಾ ಮೈದಾನದಲ್ಲಿ ವ್ಯಕ್ತಿ ಓರ್ವನ ಶವ ಪತ್ತೆ
- ಕೆಡಿಸಿಸಿ ಬ್ಯಾಂಕ್ ಎಲೆಕ್ಷನ್’ಗೆ ಕೌಂಟ್ ಡೌನ್!! ರಂಗೇರಿದ ಕದನ ಕಣ
ಆದರೆ ಏಳು ಬಾರಿ ಉತ್ತರಕನ್ನಡ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಆರು ಬಾರಿ ಗೆದ್ದಿದ್ದ ಇವರಿಗೆ ಈ ಭಾರಿ ಹೈಕಮಾಂಡ ಟಿಕೆಟ್ ನೀಡದೆ ಹೊರಗಿಟ್ಟಿದೆ. ಅತ್ತ ಕಾಂಗ್ರೆಸ್‌ನವರಿಗೆ ಟಿಕೆಟ್ ಘೊಷಣೆಗೆ ವಿಳಂಬವಾಗಿದ್ದಕ್ಕೆ, ಅಲ್ಲಿ ಕರಿಮಣಿ ಕಟ್ಟಿಸಿಕೊಳ್ಳಲು, ಕಟ್ಟಿಸಿಕೊಳ್ಳಲು ಯಾರು ಇಲ್ಲ ಎಂದು ಟೀಕಿಸಿದರು. ಆದರೆ ದುರಂತ ಬಿಜೆಪಿಯಲ್ಲಿ ತಾನೇ ಕರಮಣಿ ಮಾಲೀಕ ಎಂದು ಓಡಾಡಿಕೊಂಡಿದ್ದರು, ಪಕ್ಷ ಮಾತ್ರ ಇವರಿಗೆ ಕರಮಣಿಕಟ್ಟೋಕೆ ಅವಕಾಶ ನೀಡಿಲ್ಲ.(ಟಿಕೆಟ್ ನೀಡಿಲ್ಲ) ಎಂದು ಕಾಂಗ್ರೆಸ್ಸಿಗರು ಆಡಿಕೊಳ್ಳುತ್ತಿದ್ದಾರೆ.




