suddibindu.in
Khapri God Temple
Karwar :ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕೋಡಿಭಾಗದಲ್ಲಿ ವರ್ಷಕ್ಕೊಮ್ಮೆನಡೆಯುವ ಖಾಪ್ರಿ ದೇವರ ಜಾತ್ರೆ ವಿಭಿನ್ನವಾಗಿದೆ. ಮತ್ತೇರಿಸುವ ಮದ್ಯದಿಂದಲೇ ಈ ದೇವರಿಗೆ ಅಭಿಷೇಕ, ಬೀಡಿ-ಸಿಗರೇಟ್‌ನಿಂದಲೇ ಆರತಿ ಬೆಳಗಲಾಗುತ್ತದೆ.ಈ ಜಾತ್ರೆಯಲ್ಲಿ ಸಾವಿರಾರು ಭಕ್ತರು ಆಗಮಿಸಿ ಖಾಪ್ರಿ ದೇವರಿಗೆ ಪೂಜೆ ಸಲ್ಲಿಸುತ್ತಾರೆ.
ಇಲ್ಲಿಗೆ ಬರುವ ಭಕ್ತರು ಹೂವ,ಹಟ್ಟಿನ ಬದಲಿದೆ ಈ ದೇವರಿಗೆ ಸಿಗರೇಟ್,(Cigarettes) ಕ್ಯಾಂಡಲ್‌ನಿಂದ ಆರತಿ ಮಾಡಿ ಮದ್ಯದಿಂದಲೇ ಅಭಿಷೇಕವನ್ನೂ ಮಾಡುತ್ತಾರೆ. ಅಷ್ಟೇ ಅಲ್ಲ, ದೇವರಿಗೆ ಕೋಳಿ ಬಲಿ ಕೊಟ್ಟು ರಕ್ತದಿಂದ ನೈವೇದ್ಯ ಮಾಡುತ್ತಾರೆ.ಈ ಜಾತ್ರೆ ನೂರಾರು ವರ್ಷಗಳಿಂದ ನಡೆಯುತ್ತಾ ಬಂದಿದ್ದು. ಪ್ರತೀ ವರ್ಷ ಇದೇ ರೀತಿ ದೇವರಿಗೆ ಫಲ ಪುಷ್ಪ ಸಮರ್ಪಿಸುವ ಜತೆಗೆ ಸಾರಾಯಿ, ಸಿಗರೇಟ್ ಮತ್ತು ಕೋಳಿಯನ್ನೂ ಭಕ್ತರು ಅರ್ಪಿಸುತ್ತಾರೆ.
ಇದನ್ನೂ ಓದಿ
- Bhatkal/ಭಟ್ಕಳ ರಾಶಿ ರಾಶಿ ಮೂಳೆ ಪತ್ತೆ ಪ್ರಕರಣ : ಸುದ್ದಿ ಪ್ರಸಾರವಾಗುತಿದ್ದಂತೆ ಎಚ್ಚೆತ್ತ ಅಧಿಕಾರಿಗಳು
- ದಿನಕರರು ದೇಶ ವಿದೇಶಗಳಲ್ಲಿ ಕನ್ನಡವನ್ನು ಪಸರಿಸಿದ ಕನ್ನಡದ ಕಟ್ಟಾಳು : ರಮೇಶ್ ಗೌಡ ಕಡಮೆ
- ಶಾಸಕ ಸತೀಶ್ ಸೈಲ್ ಗೆ ಮಧ್ಯಂತರ ಜಾಮೀನು
ಸಾಮಾನ್ಯವಾಗಿ ದೇವರಿಗೆ ನೈವೇದ್ಯವಾಗಿ ತಿಂಡಿ-ತಿನಿಸು ಹಾಗೂ ಹಣ್ಣು, ಹಂಪಲುಗಳನ್ನು ಸಮರ್ಪಿಸುತ್ತಾರೆ. ಈ ಜಾತ್ರೆಗೆ ಕಾರವಾರದಿಂದ ಅಷ್ಟೆ ಅಲ್ಲದೆ ಪಕ್ಕದ ಗೋವಾ ಹಾಗೂ ಮಹಾರಾಷ್ಟ್ರದಿಂದಲ್ಲೂ ನೂರಾರು ಭಕ್ತರು ಆಗಮಿಸಿ ತಮ್ಮ ಹರಕೆ ಸಲ್ಲಿಸುತ್ತಾರೆ.
ಆಫ್ರಿಕಾ ಮೂಲದ ಖಾಪ್ರಿ ದೇವರು
ಶಕ್ತಿ ದೇವರಾಗಿರುವುದರಿಂದ ತಮ್ಮ ಇಷ್ಟಾರ್ಥಗಳನ್ನು ಈಡೇರಿಸುವಂತೆ ಈ ರೀತಿಯ ಹರಕೆ ಭಕ್ತರು ಈಡೇರಿಸುತ್ತಾರೆ. ಖಾಪ್ರಿ ದೇವರು ಆಫ್ರಿಕಾ ಮೂಲದೆನ್ನಲಾಗುತ್ತದೆ. ಆಫ್ರಿಕಾ ಮೂಲದ ವ್ಯಕ್ತಿಯೊಬ್ಬ 300 ವರ್ಷಗಳ ಹಿಂದೆ ಇಲ್ಲಿಗೆ ಬಂದು ದೇವರನ್ನ ತಂದು ಪೂಜಿಸುತ್ತಿದ್ದನಂತೆ. ಬಳಿಕ ಇದ್ದಕ್ಕಿದ್ದಂತೆ ಒಂದು ದಿನ ಕಣ್ಮರೆಯಾಗಿರುವುದಾಗಿ ಇತಿಹಾಸವಿದೆ.
ಮದ್ಯ ಸೇವನೆ ಕೊಟ್ಟರೆ ಮದ್ಯ ಬಿಡತ್ತಾರಂತೆ
ಖಾಪ್ರಿ ದೇವರಲ್ಲಿ ಕೆಲಸದ ಸಮಸ್ಯೆ ಬಗ್ಗೆ, ಸಂತಾನ ಭಾಗ್ಯದ ಬಗ್ಗೆ, ಕೌಟುಂಬಿಕ ಕಲಹ ಹೀಗೆ ಹಲವು ಸಮಸ್ಯೆಗಳ ಬಗ್ಗೆ ಕೇಳಿಕೊಂಡರೆ ಬಗೆಹರಿಯುತ್ತವೆ ಎನ್ನುವ ನಂಬಿಕೆ ಇದೆ. ಹಾಗೆ ನೆರವೇರಿದ ಸಾಕಷ್ಟು ಉದಾಹರಣೆಗಳು ಇಲ್ಲಿ ಕಂಡ ಬಂದಿವೆ… ಇನ್ನು ಮನೆಯಲ್ಲಿ ಅತಿಯಾದ ಮದ್ಯವ್ಯಸನಿಗಳು ಇದ್ದರೆ ದುಶ್ಚಟಗಳಿಗೆ ದಾಸರಾಗಿದ್ದರೆ ಅಂತಹವರು ಬಂದು ಖಾಪ್ರಿ ದೇವರಿಗೆ ಬೇಡಿಕೊಂಡು ಹೆಂಡ, ಸಿಗರೇಟ್ ನೈವೇದ್ಯ ನೀಡಿದರೆ ಅಂತಹವರು ಹೆಂಡ ಕುಡಿಯುವುದನ್ನ, ಸಿಗರೇಟ್ ಸೇದುವುದನ್ನ ಬಿಟ್ಟಿದ್ದಾರಂತೆ