suddibindu.in
Karwar:ಕಾರವಾರ :ಉತ್ತರಕನ್ನಡ ಲೋಕಸಭಾ ಚುನಾವಣೆಗೆ ಈ ಬಾರಿ ಹಾಲಿ ಸಂಸದ ಅನಂತಕುಮಾರ ಹೆಗಡೆ ಅವರಿಗೆ ಟಿಕೆಟ್ ಕೈ ತಪ್ಪುವ ಸಾಧ್ಯತೆ ಇದೆ ಎನ್ನಲಾಗುತ್ತಿದ್ದು, ಒಂದೊಮ್ಮೆ ಟಿಕೆಟ್ ಕೈ ತಪ್ಪಿದ್ದರೆ ಬಿಜೆಪಿ ಅಭ್ಯರ್ಥಿ ಯಾರಾಗಬಹುದು ಎನ್ನುವ ಚರ್ಚೆ ಜೋರಾಗುತ್ತಿದ್ದು,ಅಚ್ಚರಿಯ ಬೆಳವಣಿಗೆಯಲ್ಲಿ ಜಿಲ್ಲೆಯ ಖ್ಯಾತ ವೈದ್ಯರಾಗಿರುವ ಡಾ.ಜಿ,ಜಿ,ಹೆಗಡೆ ಅವರ ಹೆಸರು ಇದೀಗ ಮುನ್ನೆಲೆಗೆ ಬಂದಿದೆ.
ಹೌದು ಉತ್ತರಕನ್ನಡ ಜಿಲ್ಲೆಯಿಂದ ಕಳೆದ ಏಳು ಬಾರಿ ಬಿಜೆಪಿಯಿಂದ ಸ್ಪರ್ಧೆ ಮಾಡಿ ಆರು ಬಾರಿ ಗೆದ್ದಿದ್ದ ಹಾಲಿ ಸಂಸದ ಅನಂತಕುಮಾರ ಹೆಗಡೆ ಅವರಿಗೆ ಬಿಜೆಪಿ ಟಿಕೆಟ್ ಕೈ ತಪ್ಪಲಿದೆ ಎನ್ನುವ ಬಗ್ಗೆ ಬಿಜೆಪಿಯೊಳಗೆ ಚರ್ಚೆಯಾಗುತ್ತಿದೆ.ಇದರಿಂದಾಗಿ ಹಿಂದೆಂದೂ ಉತ್ತರಕನ್ನಡ ಬಿಜೆಪಿಯಲ್ಲಿ ಇರದಷ್ಟು ಟಿಕೆಟ್ ಆಕಾಂಕ್ಷಿಗಳು ಈ ಬಾರಿ ಹುಟ್ಟಿಕೊಂಡಿದ್ದರು. ಟಿಕೆಟ್‌ಗಾಗಿ ಅರ್ಜಿ ಸಲ್ಲಿಸಿದ ಬಹುತೇಕ ಆಕಾಂಕ್ಷಿಗಳು ಲೋಕಸಭಾ ಟಿಕೆಟ್ ತಮ್ಮಗೆ ಎಂದು ಓಡಾಡಿಕೊಂಡಿದ್ದಾರೆ.
ಇದನ್ನೂ ಓದಿ:-
- “ಚಿನ್ನದ ಬೆಲೆ ಕುಸಿತದ ನಿರೀಕ್ಷೆ: ಜಾಗತಿಕ ಹೂಡಿಕೆದಾರರ ಗಮನ ಫೆಡ್ ಸಭೆಯತ್ತ” ಬಂಗಾರದ ಪ್ರಿಯರಿಗೆ ‘ಬಂಗಾರ’ ದ ಸುದ್ದಿ
- ನಾಳೆ ಕುಮಟಾದಲ್ಲಿ ಇಂದಿರಾ ಕ್ಯಾಂಟೀನ್ ಉದ್ಘಾಟನೆ
- ಕರ್ನಾಟಕ ಎಲೆಕ್ಟ್ರಾನಿಕ್ ಮೀಡಿಯಾ ಜರ್ನಲಿಸ್ಟ್ ಅಸೋಸಿಯೇಷನ್ ಉದ್ಘಾಟಿಸಿದ ಸಿಎಂ
ಆದರೆ ಇದೀಗ, ಕುಮಟಾದ ಕೆನರಾ ಹೆಲ್ತ್‌ಕೇರ್‌ನ ಖ್ಯಾತ ವೈದ್ಯರಾಗಿರುವ ಡಾ. ಜಿ ಜಿ ಹೆಗಡೆ ಅವರ ಹೆಸರು ಮುನ್ನೆಲೆಗೆ ಬಂದಿದೆ..ಇವರು ವೈದ್ಯಕೀಯ ಸೇವೆಗಷ್ಟೆ ಸೀಮಿತರಾಗಿದ್ದವರಲ್ಲ. ರಾಜಕೀಯ ಹಿನ್ನಲೆಯಿಂದಲ್ಲೆ ಬಂದವರಾಗಿದೆ. ಡಾ. ಜಿ ಜಿ ಹೆಗಡೆ, ದಿ.ಎಸ್ ಬಂಗಾರಪ್ಪ ಅವರ ಸಮಾಜವಾಧಿ ಪಕ್ಷದ ಮೂಲಕ ತಮ್ಮ ರಾಜಕೀಯಕ್ಕೆ ಎಂಟ್ರಿಕೊಟ್ಟವರು, 2008ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಇವರು ಕುಮಟಾ ವಿಧಾನಸಭಾ ಕ್ಷೇತ್ರದಿಂದ ಸಮಾಜವಾಧಿ ಪಕ್ಷದಿಂದ ಸ್ಪರ್ಧೆ ಮಾಡಿ ಸುಮಾರು 8 ಸಾವಿರದಷ್ಟು ಮತಗಳನ್ನ ಪಡೆದು ಕಾರಣಾಂತರಗಳಿಂದ ಸೋಲುವಂತಾಗಿತ್ತು.,
ಅದಾದ ಬಳಿಕ ಅವರು ಸಮಾಜವಾದಿ ಪಕ್ಷದಿಂದ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿ ಕ್ಷೇತ್ರದಲ್ಲಿ ಕಾಂಗ್ರೆಸ್ ಸಂಘಟನೆಯಲ್ಲಿ ಬಹುಮುಖ್ಯ ಪಾತ್ರವನ್ನ ವಹಿಸಿದ್ದರು. ಇನ್ನೂ 2013ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕುಮಟಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದ ಶಾರದಾ ಮೋಹನ್ ಶೆಟ್ಟಿ ಅವರ ಗೆಲುವಿನಲ್ಲಿ ಡಾ.ಜಿ ಜಿ ಹೆಗಡೆ ಅವರ ಕೊಡುಗೆ ಸಾಕಷ್ಟಿದೆ. ಅವರು ತಮ್ಮ ವೃತ್ತಿಯ ಮೂಲಕ ಜನರ ಮಸ್ಸಿನೊಳಗೆ ಇದ್ದರೆ. ಇನ್ನೂ ರಾಜಕೀಯ ಹಾಗೂ ಸಾಮಾಜಿಕ ಕಾರ್ಯಗಳ ಮೂಲಕ ಕ್ಷೇತ್ರದ ತುಂಬಾ ಪರಿಚಿತರಾಗಿದ್ದಾರೆ.
ಇನ್ನೂ ಕಳೆದ ವರ್ಷ ನಡೆದ ವಿಧಾನಸಭಾ ಚುನಾವಣೆಯಲ್ಲಿಯೂ ಸಹ ಅವರು ಕುಮಟಾ ಕ್ಷೇತ್ರದಿಂದ ಸ್ಪರ್ಧೆ ಬಯಸಿದ್ದರು. ಆದರೆ ಹಾಲಿ ಶಾಸಕರು ಬಿಜೆಪಿಯವರೆ ಇರುವ ಕಾರಣ ಟಿಕೆಟ್ ಸಿಕ್ಕಿರಲಿಲ್ಲ. ಹೀಗಾಗಿ ಈ ಭಾರಿಯ ಲೋಕಸಭಾ ಟಿಕೆಟ್ ನೀಡುವಂತೆ ಡಾ.ಜಿ ಜಿ ಹೆಗಡೆ ಅವರು ಅರ್ಜಿಸಲ್ಲಿಸಿದ್ದರು, ಟಿಕೆಟ್‌ಗಾಗಿ ಅರ್ಜಿಸಲ್ಲಿಸಿದರೂ ಕೂಡ ಯಾವ ನಾಯಕರ ಮೇಲೂ ಕೂಡ ತಮ್ಮ ಟಿಕೆಟ್ ಕೊಡಿಸುವಂತೆ ಒತ್ತಡ ಹಾಕಿರಲಿಲ್ಲ. ಆದರೆ ಇದೀಗ ದೆಹಲಿ ಮಟ್ಟದ ನಾಯಕರೆ ಇವರನ್ನ ಗುರುತಿಸಿದ್ದು, ಈ ಭಾರಿ ಉತ್ತರಕನ್ನಡ ಲೋಕಸಭಾ ಕ್ಷೇತ್ರದಿಂದ ಡಾ. ಜಿ ಜಿ ಹೆಗಡೆ ಅವರನ್ನ ಕಣಕ್ಕಿಳಿಸಲು ಬಿಜೆಪಿ ಮುಂದಾಗಿರುವುದಾಗಿ ತಿಳಿದು ಬಂದಿದೆ.