suddibindu.in
ಬೆಂಗಳೂರು : ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಜೊತೆ ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದು, ರಾಜ್ಯದಲ್ಲಿ ನಾಲ್ಕು ಕ್ಷೇತ್ರವನ್ನ ಕ್ಣೇತ್ರವನ್ನ ತಮ್ಮಗೆ ಕೊಡುವಂತೆ ಜೆಡಿಎಸ್ ಕೇಳಿದೆ. ಇದರಲ್ಲಿ ಕೋಲಾರ(Kolar)ಕ್ಷೇತ್ರವನ್ನ ಜೆಡಿಎಸ್ ಗೆ ಬಿಟ್ಟುಕೊಡದೆ ಹೋದರೆ ಉತ್ತರಕನ್ನಡ ಕ್ಷೇತ್ರವನ್ನ ಜೆಡಿಎಸ್ಗೆ ಬಿಟ್ಟುಕೊಡುವಂತೆ ಎಚ್ ಡಿ ಕುಮಾರಸ್ವಾಮಿ(HD Kumarswmi)ಕೇಳಿದ್ದಾರೆ.
ಹೌದು ಉತ್ತರಕನ್ನಡ ಲೋಕಸಭಾ ಕ್ಷೇತ್ರದ (Uttara Kannada Lok Sabha Constituency) ಹಾಲಿ ಬಿಜೆಪಿ ಸಂಸದರಾಗಿರುವ ಅನಂತಕುಮಾರ ಹೆಗಡೆ(MP Ananthakumar Hegde,) ಅವರಿಗೆ ಈ ಬಾರಿ ಎಂ ಪಿ ಟಿಕೆಟ್ ಕೈ ತಪ್ಪಲಿದೆ ಎನ್ನಲಾಗುತ್ತಿದೆ. ಹೀಗಿಗಾಗಿ ಒಂದೊಮ್ಮೆ ಮೈತ್ರಿಯಲ್ಲಿ ಕೋಲಾ ಕ್ಷೇತ್ರದಲ್ಲಿ ತಮ್ಮ ಪಕ್ಷದ ಅಭ್ಯರ್ಥಿಗೆ ಅವಕಾಶ ನೀಡದೆ ಹೋದರಲ್ಲಿ ಉತ್ತರಕನ್ನಡ ಜಿಲ್ಲೆಯನ್ನ ತಮ್ಮ ಪಕ್ಷಕ್ಕೆ ಬಿಟ್ಟುಕೊಡುವಂತೆ ಕೇಳಿದ್ದಾರೆನ್ನಲಾಗಿದೆ.
ಇದನ್ನೂ ಓದಿ:-
- gold rate/ ಚಿನ್ನ, ಬೆಳ್ಳಿ ದರ ದಸರಾ ವೇಳೆ ಇಳಿಕೆ ಸಾಧ್ಯತೆ
- ಏರ್ ಇಂಡಿಯಾ ವಿಮಾನ ದುರಂತ : ಗೋಕರ್ಣದಲ್ಲಿ ಪಿಂಡಪ್ರದಾನ
- Accident /ಘನಘೋರ ಅಪಘಾತ: ಲಾರಿ ಹರಿದು 8ಮಂದಿ ಸಾವು : 20ಕ್ಕೂ ಹೆಚ್ಚು ಜನ ಗಂಭೀರ
ಈ ಕ್ಷೇತ್ರವನ್ನ ಬಿಟ್ಟುಕೊಟ್ಟರೆ ನಮ್ಮ ಪಕ್ಷದಿಂದ ಸೂರಜ್ ನಾಯ್ಕ ಸೋನಿ ಅವರನ್ನ ಕಣಕ್ಕಿಳಿಸುವುದಾಗಿ ಕುಮಾರಸ್ವಾಮಿ ಅವರು ಹೇಳಿದ್ದಾರೆ. ಸೂರಜ್ ಸೋನಿ ಕೂಡ ಹಿಂದುತ್ವದ ಹೋರಾಟದ ಮೂಲಕವೆ ಜಿಲ್ಲೆಯಲ್ಲಿ ಗುರುತಿಸಿಕೊಂಡಿದ್ದಾರೆ. ಕಳೆದ ವರ್ಷ ನಡೆದ ವಿಧಾನಸಭಾ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿಯಾಗಿದ್ದ ಸೂರಜ್ ಸೋನಿ ಅವರು ಅಲ್ಪ ಮತಗಳ ಅಂತರದಲ್ಲಿ ಗೆಲುವಿನ ಕೈ ತಪ್ಪಿದೆ. ಹೀಗಾಗಿ ಕೋಲಾರ ಕೈತಪ್ಪಿದರೆ ದಳಪತಿಳು ಇದೀಗ ಉತ್ತರಕನ್ನಡದ ಮೇಲೆ ಕಣ್ಣಿಟ್ಟಿದ್ದಾರೆ. ಆದರೆ ಇದು ಎಷ್ಟರ ಮಟ್ಟಿಗೆ ಯಶಸ್ವಿಯಾಗಲಿದೆ ಎನ್ನುವದು ಕಾದು ನೋಡಬೇಕಿದೆ.