suddibindu.in
ಕಾರವಾರ : ಲೋಕಸಭೆಯಲ್ಲಿ (Lok Sabha) ಬಿಜೆಪಿಗೆ (bjp) ಬಹುಮತ ಬರಲಿ..ಆ ಆಮೇಲೆ ನೋಡಿ ಮಾರಿಹಬ್ಬ ಹೇಗಿರಲಿದೆ ಅಂತ. ಆಗ, ಜಾತ್ರೆಗೆ ಒಂದು ಕಳೆ ಬರಲಿದೆ.ಕಾಂಗ್ರೆಸ್ (Congress) ಹೆಚ್ಚು ಇದ್ದರೆ ಏನೇ ತಿದ್ದುಪಡಿ ತಂದರೂ ಪಾಸ್ ಆಗಲ್ಲ. ಸಿಎಎ(CAA) ಜಾರಿಗೆ ರಾಜ್ಯಗಳಿಂದ ಒಪ್ಪಿಗೆ ಬಂದಿಲ್ಲ. ಸಿಎಎ ತರದಿದ್ದರೆ ದೇಶದಲ್ಲಿ ಕಾನೂನು ಸುವ್ಯವಸ್ಥೆ ನಮ್ಮ ಕೈಯಲ್ಲಿ ಇರಲ್ಲ. ಇದು ದೇಶದ್ರೋಹಿಗಳ ಆಡಂಬರ ಆಗುತ್ತದೆ ಎಂದು ಸಂಸದ ಅನಂತಕುಮಾರ (MP Anantakumar Hegde)ಗುಡುಗಿದ್ದಾರೆ..
ಸಿದ್ದಾಪುರದ ಹಲಗೇರಿ ಗ್ರಾಮದಲ್ಲಿ ಕಾರ್ಯಕರ್ತರ ಸಭೆಯನ್ನ ಉದ್ದೇಶಿಸಿ ಮಾತನಾಡಿದ ಅವರು ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 400 ಸ್ಥಾನಗಳನ್ನು ಗೆದ್ದರೆ ಸಂವಿಧಾನ ತಿದ್ದುಪಡಿ ಮಾಡಬಹುದು ಸಂವಿಧಾನ ತಿದ್ದುಪಡಿ ಮಾಡುವುದಾದರೆ ಬಹುಮತ ಅಗತ್ಯವಿದೆ ಎಂದಿದ್ದಾರೆ.ಲೋಕಸಭೆಯಲ್ಲಿ ಬಿಜೆಪಿಗೆ ಬಹುಮತ ಇದೆ. ಆದರೆ, ರಾಜ್ಯಸಭೆಯಲ್ಲಿ 2/3 ರಷ್ಟು ಬಹುಮತ ಇಲ್ಲ. ಹೀಗಾಗಿ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಈ ಬಾರಿ 400ಕ್ಕೂ ಅಧಿಕ ಕ್ಷೇತ್ರಗಳನ್ನು ಗೆಲ್ಲಬೇಕು. ಆಗ, ಕಾಂಗ್ರೆಸ್ ಪಕ್ಷ ಅನಗ್ಯವಾಗಿ ಹೇರಿದ ವಿಚಾರಗಳನ್ನು ಸಂವಿಧಾನದಿಂದ ತೆಗೆದು ಹಾಕಲು ಬಹುಮತದ ಅಗತ್ಯವಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ
- ವಿದ್ಯಾರ್ಥಿಗಳ ಸೌಲಭ್ಯಕ್ಕಾಗಿ ಬಸ್ ಸಂಚಾರಕ್ಕೆ ರೂಪಾಲಿ ನಾಯ್ಕ ಮನವಿ
- ಬನವಾಸಿ,ಸಿದ್ದಾಪುರ ಸಾಗರಕ್ಕೆ ಸೇರ್ಪಡೆ ತಿರುಕನ ಕನಸು: ಶಾಸಕ ಶಿವರಾಮ ಹೆಬ್ಬಾರ
- “ಚಿನ್ನದ ಬೆಲೆ ಕುಸಿತದ ನಿರೀಕ್ಷೆ: ಜಾಗತಿಕ ಹೂಡಿಕೆದಾರರ ಗಮನ ಫೆಡ್ ಸಭೆಯತ್ತ” ಬಂಗಾರದ ಪ್ರಿಯರಿಗೆ ‘ಬಂಗಾರ’ ದ ಸುದ್ದಿ
ಕಾಂಗ್ರೆಸ್ ಸಂವಿಧಾನದ ಮೂಲರೂಪವನ್ನೇ ತಿರುಚಿದೆ. ಸಂವಿಧಾನದಲ್ಲಿ ಬೇಡದೇ ಇರುವುದನ್ನೆಲ್ಲ ಸೇರ್ಪಡೆ ಮಾಡಿದ್ದಾರೆ.ಇಡೀ ಹಿಂದೂ ಸಮಾಜವನ್ನು ದಮನಿಸುವ ರೀತಿ ಕಾನೂನು ತಂದಿದೆ. ಇದೆಲ್ಲವೂ ಬದಲಾಗಬೇಕಿದ್ದರೆ ಬಹುಮತ ಬೇಕು. ಎಂದು ಅನಂತ್ ಕುಮಾರ್ ಹೆಗಡೆ ಹೇಳಿದ್ದಾರೆ.