suddibindu.in
Karwar:ಕಾರವಾರ : ಸಿಲಿಂಡರ್ ಸ್ಪೋಟಗೊಂಡು (Cylinder Spota) ಕಾರ್ಮಿಕರ ಕಾಲೋನಿಯಲ್ಲಿದ್ದ(Labor Shed,) ಮನೆಗಳಿಗೆ ಬೆಂಕಿ(Fire) ಬಿದ್ದಿರುವ ಘಟನೆ ಮುದಗಾದ ನೌಕಾನೆಲೆ ಲೇಬರ್ ಕಾಲೋನಿಯಲ್ಲಿ ನಡೆದಿದೆ.
- gold rate/ ಚಿನ್ನ, ಬೆಳ್ಳಿ ದರ ದಸರಾ ವೇಳೆ ಇಳಿಕೆ ಸಾಧ್ಯತೆ
- ಏರ್ ಇಂಡಿಯಾ ವಿಮಾನ ದುರಂತ : ಗೋಕರ್ಣದಲ್ಲಿ ಪಿಂಡಪ್ರದಾನ
- Accident /ಘನಘೋರ ಅಪಘಾತ: ಲಾರಿ ಹರಿದು 8ಮಂದಿ ಸಾವು : 20ಕ್ಕೂ ಹೆಚ್ಚು ಜನ ಗಂಭೀರ
ನೌಕಾನೆಯ ಲೇಬರ್ ಕಾಲೋನಿಯಲ್ಲಿ ಎನ್‌ಸಿಸಿ( ncc) ಗುತ್ತಿಗೆ ಕಾರ್ಮಿಕರು ಶೇಡ್ ನಲ್ಲಿ ಉಳಿದುಕೊಂಡಿದ್ದರು.ಈ ವೇಳೆ ಶೇಡ್ ಒಳಗೆ ಇದ್ದ ಅಡುಗೆ ಸಿಲಿಂಡರ್ ಸ್ಪೋಟಗೊಂಡಿದೆ. ಇದರಿಂದಾಗಿ ಶೆಡ್‌ಗೆ ಭಾರೀ ಪ್ರಮಾಣದಲ್ಲಿ ಬೆಂಕಿ ಹೊತ್ತಿಕೊಂಡು ಉರಿದಿದ್ದು, ಸ್ಪೋಟದ ಸದ್ದು ಕೇಳಿ ಬರುತ್ತಿದ್ದಂತೆ ಒಳಗಿದ್ದ ಕಾರ್ಮಿಕರು ಹೊರಗಡೆ ಓಡಿಹೋಗಿದ್ದಾರೆ.
ಕಾರ್ಮಿಕ ಕಾಲೋನಿಯಲ್ಲಿ 150ಕ್ಕೂ ಹೆಚ್ಚು ಶೆಡ್ ಗಳಿದ್ದು, ಇದರಲ್ಲಿ ನಾಲ್ಕೈದು ಶೆಡ್ ಗಳಿಗೆ ಬೆಂಕಿ ತಗುಲಿದೆ. ಬೆಂಕಿ ಬಿದ್ದಿರುವ ಸುದ್ದಿ ತಿಳಿದ ಅಗ್ನಿಶಾಮಕ ದಳ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿದ್ದಾರೆ