Acid attack on female students
suddibindu.in
ಪುತ್ತೂರು: ದ್ವಿತೀಯ ಪಿಯುಸಿ(second PUC) ಓದುತ್ತಿದ್ದ ಮೂವರು ವಿದ್ಯಾರ್ಥಿನಿಯರ ಮೇಲೆ ಯುವಕ ನೋರ್ವ ಆ್ಯಸಿಡ್ ಎರಚಿರುವ ಘಟನೆ ಪುತ್ತೂರಿನ (Puttur)ಕಡಬ ತಾಲೂಕಿನ ಸರಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ನಡೆದಿದೆ.
ಘಟನೆಯಲ್ಲಿ ಕೇರಳ (Kerala,)ಮೂಲದ ವಿದ್ಯಾರ್ಥಿನಿ ಅಲೀನಾ ಸಿಬಿ, ಅಮೃತ ಹಾಗೂ ಅರ್ಚನಾ ಆ್ಯಸಿಡ್ ದಾಳಿಗೆ ಒಳಗಾದ ವಿದ್ಯಾರ್ಥಿನಿಯರಾಗಿದ್ದಾರೆ. ಈ ಮೂವರು ವಿದ್ಯಾರ್ಥಿನಿಯರು ದ್ವೀತಿಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದರು.ಯುವಕನಿ ಓರ್ವ ವಿದ್ಯಾರ್ಥಿನಿ ಮಾತ್ರ ಟಾರ್ಗೆಟ್ ಆಗಿದ್ದಳು. ಆದರೆ ಯುವಕ ಅ್ಯಸಿಡ್ ಎರೆಚುವ ವೇಳೆ ಈ ಮೂವರು ವಿದ್ಯಾರ್ಥಿನಿಯರು ಒಟ್ಟಿಗೆ ಇರುವಾಗ ಮೂವರಿಗೂ ಸಹ ತಗುಲಿದೆ ಇದರಿಂದ ಓರ್ವಳು ಗಂಭೀರವಾಗಿದ್ದು, ಇನ್ನಿಬ್ಬರಿಗೆ ಸಣ್ಣಪುಟ್ಟ ಗಾಯವಾಗಿದೆ. ಆ್ಯಸಿಡ್ ಎರಚಲು ಬಂದಿದ್ದ ಯುವಕ ಮಾಸ್ಕ್ ಹಾಗೂ ತಲೆಗೆ ಟೋಪಿ ಧರಿಸಿ ಬಂದಿದ್ದು ತಕ್ಷಣ ಸ್ಥಳದಿಂದ ಪರಾರಿಯಾಗಲು ಯತ್ನಿಸಿದ್ದ ಸ್ಥಳೀಯರು ಹಿಡಿದು ಕಡಬ ಪೊಲೀಸರಿಗೆ ಒಪ್ಪಿಸಿದ್ದಾರೆ.
ಇದನ್ನೂ ಓದಿ:-
- Bhatkal/ಭಟ್ಕಳ ರಾಶಿ ರಾಶಿ ಮೂಳೆ ಪತ್ತೆ ಪ್ರಕರಣ : ಸುದ್ದಿ ಪ್ರಸಾರವಾಗುತಿದ್ದಂತೆ ಎಚ್ಚೆತ್ತ ಅಧಿಕಾರಿಗಳು
- ದಿನಕರರು ದೇಶ ವಿದೇಶಗಳಲ್ಲಿ ಕನ್ನಡವನ್ನು ಪಸರಿಸಿದ ಕನ್ನಡದ ಕಟ್ಟಾಳು : ರಮೇಶ್ ಗೌಡ ಕಡಮೆ
- ಶಾಸಕ ಸತೀಶ್ ಸೈಲ್ ಗೆ ಮಧ್ಯಂತರ ಜಾಮೀನು
ಆರೋಪಿಯನ್ನು ಕೇರಳ ಮೂಲದ ಅಬಿನ್ ಎಂದು ಗುರುತಿಸಲಾಗಿದೆ. ಈತ ಕೇರಳದಲ್ಲಿ ಎಂಬಿಎ ಓದುತ್ತಿದ್ದು ಕಡಬಕ್ಕೆ ಬಂದು ವಿದ್ಯಾರ್ಥಿನಿ ಮೇಲೆ ಆ್ಯಸಿಡ್ ದಾಳಿ ಮಾಡಿದ್ದಾನೆಂದು ದ.ಕ. ಎಸ್ಪಿ ರಿಷ್ಯಂತ್ ಸಿಂಗ್ ಮಾಹಿತಿ ನೀಡಿದ್ದಾರೆ. ಗಂಭೀರವಾಗಿ ಗಾಯಗೊಂಡ ವಿದ್ಯಾರ್ಥಿನಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆಗೆ ಕಾರಣವೇನು ?
ವಿದ್ಯಾರ್ಥಿನಿಯ ಅಜ್ಜಿಮನೆಯ ಪಕ್ಕದಲ್ಲೇ ಆರೋಪಿ ಮನೆ ಇದೆ. ವಿದ್ಯಾರ್ಥಿನಿ ಆಗಾಗ ತಾಯಿಯ ಜೊತೆ ಕೇರಳದ ಮಲಪ್ಪುರಂ ಜಿಲ್ಲೆಯ ನೇಲಂಬುರ್ಗೆ ಹೋಗಿ ಬರುತ್ತಿದ್ದಳು.ಈ ವೇಳೆ ಆರೋಪಿ ಅಭಿನ್ಗೆ ಆ ಯವತಿಯ ಮೇಲೆ ಪ್ರೇಮ ಉಂಟಾಗಿದೆ. ಆದರೆ ಯುವತಿ ಆತನ ಪ್ರೀತಿಯನ್ನ ಒಪ್ಪಿಕೊಂಡಿರಲಿಲ್ಲ ಎನ್ನಲಾಗಿದೆ. ಹೀಗಾಗಿ ಆರೋಪಿ ಯುವತಿ ತನಗೆ ಸಿಗದೆ ಇದ್ದರೆ ಬೇರೆ ಇನ್ಯಾರಿಗೂ ಸಿಗಬಾರದು ಎಂಬ ಮನಸ್ಥಿತಿಲ್ಲಿ ಈ ಕೃತ್ಯ ಮಾಡಿದ್ದಾನೆ ಎನ್ನಲಾಗಿದೆ. ಈಗಾಗಲೇ ಆರೋಪಿಯನ್ನ ವಶಕ್ಕೆ ಪಡೆದಿರುವ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.