suddibindu.in
ಮುಂಡಗೋಡ: ಉತ್ತರ ಕನ್ನಡ(uttar kannada) ಜಿಲ್ಲೆಯ ಮುಂಡಗೋಡ ತಾಲೂಕಿನ ಜೋಗೇಶ್ವರ ಹಳ್ಳದ ಸಮೀಪ ಎರಡು ಲಾರಿಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಲಾರಿ ಸಂಪೂರ್ಣ ಜಖಂಗೊಂಡು ಚಾಲಕರಿಬ್ಬರೂ ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ.
ಇದನ್ನೂ ಓದಿ:
- Accident /ಘನಘೋರ ಅಪಘಾತ: ಲಾರಿ ಹರಿದು 8ಮಂದಿ ಸಾವು : 20ಕ್ಕೂ ಹೆಚ್ಚು ಜನ ಗಂಭೀರ
- Kumta/ಶಾಂತಿಕಾ ಪರಮೇಶ್ವರಿ ದೇವಿಗೆ ಲಕ್ಷಾಂತರ ರೂ ಮೌಲ್ಯದ ಹೂವಿನ ಪೂಜೆ
- ನಾಮಧಾರಿ ಸಮಾಜದ ಚಿಂತನ-ಮಂಥನ ಸಭೆಗೆ ಆಹ್ವಾನ
(sirsi) ಶಿರಸಿ ಕಡೆಯಿಂದ ಬರುತ್ತಿದ್ದ ಲಾರಿ, ಮುಂಡಗೋಡ ಕಡೆಯಿಂದ ಹೊರಟಿದ್ದ ಲಾರಿ ನಿಯಂತ್ರಣ ತಪ್ಪಿ ಪರಸ್ಪರ ಮುಖಾಮುಕಿ ಡಿಕ್ಕಿಯಾಗಿದೆ. ಪರಿಣಾಮ ಲಾರಿ ಚಾಲಕರು ಇಬ್ಬರಿಗೂ ಗಾಯವಾಗಿದೆ.
ಇನ್ನು ಗಾಯಗೊಂಡ ಲಾರಿ ಚಾಲಕರನ್ನು ಕಲಬುರ್ಗಿಯ (Kalaburgi) ಮೌನೇಶ್ ಡೋಲಿ, ಶಿರಸಿಯ ಮಹೇಶ್ ಶಂಕರ್ ಪರಪರ್ ಅಂತಾ ಗುರುತಿಸಲಾಗಿದೆ. ಸದ್ಯ ಗಾಯಾಳುಗಳನ್ನು ಮುಂಡಗೋಡ ತಾಲೂಕಾಸ್ಪತ್ರೆಗೆ ದಾಖಲಿಸಲಾಗಿದ್ದು,ಮುಂಡಗೋಡ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಮುಂದಿನ ಕ್ರಮ ಕೈಗೊಂಡಿದ್ದಾರೆ.