Suicide case of three
suddibindu.in
ಧಾರವಾಡ : ನವಲಗುಂದ ತಾಲೂಕಿನ ಮೊರಬ ಗ್ರಾಮದಲ್ಲಿ ಹೆತ್ತ ತಾಯಿಯೇ ತನ್ನ ಇಬ್ಬರೂ ಮಕ್ಕಳ ಕತ್ತುಹಿಸುಕಿ ತಾನೂ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ನಿನ್ನೆಯಷ್ಟೆ ಸುದ್ದಿಯಾಗಿತ್ತು. ಆದರೆ ಇದೀಗ ಆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು ಇಬ್ಬರನ್ನ ಬಂಧಿಸಲಾಗಿದೆ.
ಮೊರಬ ಗ್ರಾಮದ ಸಾವಿತ್ರಿ ಸರಕಾರ ಎಂಬ ಮಹಿಳೆ ತನ್ನ ಒಂದು ಗಂಡು ಹಾಗೂ ಒಂದು ಹೆಣ್ಣು ಮಗುವನ್ನು ಹತ್ಯೆ ಮಾಡಿ ಕೊನೆಗೆ ತಾನೂ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಳು.ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾವಿತ್ರಿಯ ಗಂಡ, ಅತ್ತೆ ಹಾಗೂ ಮಾವನ ಮೇಲೆ ನವಲಗುಂದ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಗೋಪಾಲ ಬ್ಯಾಕೋಡ್ ತಿಳಿಸಿದ್ದಾರೆ..
- ಕುಮಟಾ ತಾಲೂಕಾ ಪಂಚಾಯತ್ ಕಾಮಗಾರಿ ಟೆಂಡರ್ನಲ್ಲಿ ಅವ್ಯವಹಾರ ಆರೋಪ
- ಡಿಸೆಂಬರ್ 6ಕ್ಕೆ ಉತ್ತರ ಕನ್ನಡಕ್ಕೆ ಕೇಂದ್ರ ಸಚಿವ ಕುಮಾರಸ್ವಾಮಿ ಭೇಟಿ
- ಕಾಂಗ್ರೇಸ್ ವಿರುದ್ಧ ಕಾರವಾರದಲ್ಲಿ ಬಿಜೆಪಿ ಪ್ರತಿಭಟನೆ
ಮೊರಬ ಗ್ರಾಮದಲ್ಲಿ ದರ್ಶನ್ (4), ಸುಮಾ (5) ಹತ್ಯೆಯಾದವರಾಗಿದ್ದಾರೆ.ತಾಯಿ ಸಾವಿತ್ರಿ ಸರಕಾರ (32) ಮೃತಪಟ್ಟಿದ್ದರು. ಕೌಟುಂಬಿಕ ಸಮಸ್ಯೆಗಳಿಂದ ಬೇಸತ್ತು ಈ ಕೃತ್ಯ ಮಾಡಿದ್ದಾಳೆಂದು ಹೇಳಲಾಗಿತ್ತು.ಆದರೆ ಇದೀಗ ಮೂವರ ವಿರುದ್ಧ ಎಫ್ಐಆರ್ ದಾಖಲಾಗಿದ್ದು ಇಬ್ಬರನ್ನ ಬಂಧಿಸಲಾಗಿದೆ. ಆರೋಪಿಗಳೆ ಈಕೃತ್ಯವನ್ನ ಎಸೆಗಿ ಆಕೆಯೆ ತನ್ನ ಮಕ್ಕಳ ಕತ್ತು ಹಿಸುಕಿ ಕೊಲೆ ಮಾಡಿ ಆತ್ಮಹತ್ಯೆ ಮಾಡಿಕೊಂಡಿರುವ ನಾಟಕ ಮಾಡಿ ಪ್ರಕರಣದಿಂದ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡಿದ್ದಾರ ಎನ್ನುವ ಅನುಮಾತ ಆರೋಪಿಗಳ ಬಂಧನ ಬಳಿಕ ಕೇಳಿಬರುತ್ತಿದೆ.







