ಸುದ್ದಿಬಿಂದು ಬ್ಯೂರೋ
ಶಿರಸಿ: ಉತ್ತರ ಕನ್ನಡ(uttara Kannda)ಜಿಲ್ಲೆಯಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ (Multispeciality Hospital ) ನಿರ್ಮಾಣ ಆಗಬೇಕು, ಮೆಡಿಕಲ್ ಕಾಲೇಜು ಸ್ಥಾಪನೆಯಾಗಬೇಕು, ಇದು ಜಿಲ್ಲೆಯ ಪ್ರತಿಯೊಬ್ಬ ಜನರಿಗೂ ಅವಶ್ಯಕವಾಗಿದೆ ಅದಕ್ಕಾಗಿಯೇ ನಾವು ನಿಮ್ಮ ಪರವಾಗಿ ಪಾದಯಾತ್ರೆ ಹಮ್ಮಿಕೊಂಡಿದ್ದೇವೆ ಎಂದು ಅನಂತಮೂರ್ತಿ ಹೆಗಡೆ ಹೇಳಿದರು. ಅವರ ಪಾದಯಾತ್ರೆ ರಾಗಿಹೊಸಳ್ಳಿ ತಲುಪಿದಾಗ ಸ್ಥಳೀಯ ಯುವಕರು,ಮಹಿಳೆಯರು ಸೇರಿದಂತೆ ಅಪಾರ ಪ್ರಮಾಣಲ್ಲಿ ಜನ ಬರಮಾಡಿಕೊಂಡರು.
ಅನಂತಮೂರ್ತಿ ಹೆಗಡೆ(Ananthamurthy Hegde) ಚಾರಿಟೇಬಲ್ ಟ್ರಸ್ಟ್ ವತಿಯಿಂದ ಹಮ್ಮಿಕೊಂಡ ಶಿರಸಿಯಿಂದ ಕಾರವಾರದವರೆಗೆ(karwar) ಪಾದಯಾತ್ರೆಯ ಎರಡನೇ ದಿನವಾದ ಇಂದು ರಾಗಿಹೊಸಳ್ಳಿಗೆ ತಲುಪಿದಾಗ ತಮ್ಮ ಅಭಿಪ್ರಾಯ ಹಂಚಿಕೊಂಡರು.ಜಿಲ್ಲೆಯಲ್ಲಿ ಸುಸಜ್ಜಿತ ಆಸ್ಪತ್ರೆ ಕೊರತೆ ಇದೆ. ವೈದ್ಯರ ಕೊರತೆ ಇದ್ದು ಹೃದಯಾಘಾತ, (Heart Attack,)ಅಪಘಾತವಾದಾಗ ತಕ್ಷಣದಲ್ಲಿ ಚಿಕಿತ್ಸೆ ದೊರೆಯದೇ ಎಷ್ಟೋ ಜನ ಜೀವ ಕಳೆದುಕೊಂಡಿದ್ದಾರೆ.
ಹೀಗಾಗಿ ಜಿಲ್ಲೆಯಲ್ಲಿ ಸುಸಜ್ಜಿತ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಆಗಬೇಕು. ಅದಕ್ಕಾಗಿ ನಾವು ಪಾದಯಾತ್ರೆ ಮೂಲಕ ಹೋರಾಟ ಪ್ರಾರಂಭಿಸಿದ್ದೇವೆ.ನಿನ್ನೆ ಶಿರಸಿ ಮಾರಿಕಾಂಬಾ ದೇವಸ್ಥಾನದಲ್ಲಿ ಚಾಲನೆಗೊಂಡ ನಮ್ಮ ಪಾದಯಾತ್ರೆ ಇಂದು ರಾಗಿಹೊಸಳ್ಳಿ ಮಾರ್ಗವಾಗಿ ದೇವಿಮನೆವರೆಗೆ ತಲುಪಲಿದ್ದೇವೆ. ಮಾರ್ಗ ಮಧ್ಯ ಸ್ಥಳೀಯ ಜನರ ಅಪಾರ ಬೆಂಬಲ ವ್ಯಕ್ತವಾಗುತ್ತಿದ್ದು,ಅನೇಕರು ನಮ್ಮ ಪಾದಯಾತ್ರೆಗೆ ಕೈಜೋಡಿಸಿ ತಾವು ಕೂಡ ಜೊತೆಯಾಗುತ್ತಿದ್ದಾರೆ ಎಂದರು.
ನಾಳೆ(ಅಕ್ಟೋಬರ್ 04)ರಂದು ನಾವು ದೇವಿಮನೆಯಿಂದ ಕುಮಟಾ ತಾಲೂಕನ್ನು ಪ್ರವೇಶಿಸುತ್ತಿದ್ದು, ಈಗಾಗಲೇ ಅಲ್ಲಿಯ ಸ್ಥಳೀಯರು ಪಾದಯಾತ್ರೆಗೆ ಕೈಜೋಡಿಸುವುದಾಗಿ ಹೇಳಿದ್ದಾರೆ.ದಿನದಿಂದ ದಿನಕ್ಕೆ ತಮ್ಮ ಹೋರಾಟದ ಬಲ ಹೆಚ್ಚಾಗುತ್ತಲಿದೆ ಇದು ನಮಗೆ ಇನ್ನೂ ಹೋರಾಟದ ಮನೋಭಾವ ಹೆಚ್ಚಿಸುತ್ತದೆ. ಅಕ್ಟೋಬರ್ 5ರಂದು ಬೆಳಿಗ್ಗೆ ಕುಮಟಾ ನಗರವನ್ನು ನಮ್ಮ ಪಾದಯಾತ್ರೆ ತಲಿಪಲಿದ್ದು ನಗರದ ಬಸ್ ನಿಲ್ದಾಣದ ಮುಂಭಾಗದಲ್ಲಿ ಬೃಹತ್ ಸಾರ್ವಜನಿಕ ಸಭೆ ನಡೆಯಲಿದೆ ಎಂದರು.
ಅಲ್ಲಿಂದ ಮುಂದೆ ಸಾಗಲಿದ್ದು, ರವಿವಾರ ರಾತ್ರಿ ಬರ್ಗಿಯಲ್ಲಿ ವಾಸ್ತವ್ಯ ಮಾಡಲಿದ್ದೇವೆ ಹೀಗೆ ಹೊರಡುವ ನಮ್ಮ ಪಾದಯಾತ್ರೆ ಅಕ್ಟೋಬರ್ 9ರಂದು ಕಾರವಾರ ತಲುಪಲಿದ್ದು, ಅಲ್ಲಿ ಸಹ ಬೃಹತ್ ಸಮಾವೇಶ ನಡೆಯಲಿದೆ ಎಂದಿದ್ದಾರೆ. ಈ ಹೋರಾಟ ಇಲ್ಲಿಗೆ ನಿಲ್ಲುವುದಲ್ಲ. ಆಸ್ಪತ್ರೆ ನಿರ್ಮಾಣದ ತನಕ ಹೋರಾಟ ನಿರಂತರ ಎಂದಿದ್ದಾರೆ.




