ಬೆಂಗಳೂರು : ಅಪರಿಚಿತ ಮಹಿಳೆ ಓರ್ವಳ ಅಶ್ಲೀಲ ವಿಡಿಯೋ, ಪೋನ್ ಕಾಲ್ ಕಾಟಕ್ಕೆ ಬೇಸತ್ತು ಸಂಸದರೊಬ್ಬರು ಆ ಮಹಿಳೆ ವಿರುದ್ಧ ದಾವಣಗೆರೆ ಸಂಸದ ಸಿದ್ದೇಶ್ವರ ಪೊಲೀಸ್ ಠಾಣೆ ಮೆಟ್ಟಿಲೇರಿರುವ ಘಟನೆ ನಡೆದಿದೆ.

ಬಿಜೆಪಿ ಸಂಸದ ಜಿಎಂ ಸಿದ್ದೇಶ್ವರ (MP GM Siddeshwar) ಅವರು ಬೆಂಗಳೂರಿನ ನಿವಾಸದಲ್ಲಿ ಇದ್ದಾಗ, ವಿಡಿಯೋ ಕಾಲ್ನಲ್ಲಿ ಅಶ್ಲೀಲವಾಗಿ ವರ್ತಿಸಿದ್ದಾಳೆ. ಕಳೆದ 20ರಂದು ರಾತ್ರಿ ಸುಮಾರು 10-16ರಹೊತ್ತಿಗೆ ಅಪರಿಚಿತ ಮಹಿಳೆ Hi How Are You ಎಂದು ಮೆಸೇಜ್ ಮಾಡಿದ್ದಾಳಂತೆ. ಆದರೆ ಆಕೆಯ ಮೆಸೇಸ್ ಗೆ ಸಂಸದರು ಯಾವುದೇ ರೀತಿಯಲ್ಲಿ ಪ್ರತಿಕ್ರಿಯೆ ನೀಡಿಲ್ಲ ಎನ್ನಲಾಗಿದ್ದು,, ಇದಾದ ಕೆಲ ಗಂಟೆ ಬಳಿಕ ಅದೆ ದಿನ ರಾತ್ರಿ 10-22ರ ಸುಮಾರಿಗೆ ರಾಜಸ್ಥಾನದಿಂದ ಕರೆ ಮಾಡುತ್ತಿರುವುದಾಗಿ ಮಹಿಳೆ ಹೇಳಿಕೊಂಡಿದ್ದು, ಸಂಸದರ ಮೊಬೈಲ್ ಗೆ ವಿಡಿಯೋ ಕಾಲ್ ಮಾಡಿದ ಮಹಿಳೆ ಅಶ್ಲೀಲವಾಗಿ ಮಾತನಾಡಿದ್ದಾಳೆ ಎನ್ನಲಾಗಿದೆ.
ವೀಡಿಯೋ ಕಾಲ್ ನಲ್ಲಿ ಮಾಡಿದ ಆಮಹಿಳೆ. ಅಶ್ಲೀಲ ವಾಗಿ ನಡೆದುಕೊಂಡಿದ್ದಾಗಿ ದೂರಿದ್ದಾರೆ.ವಿಡಿಯೋ ಕಾಲ್ ಮಾಡಿ ಅಶ್ಲೀಲವಾಗಿ ಮಾತನಾಡಿದ ಮಹಿಳೆಗೆ ಸಂಸದರು ಬೈಯುತ್ತಿದ್ದಂತೆ ಮಹಿಳೆ ನೀವು ನನ್ನ ಜೊತೆ ಮಾತ್ನಾಡಿರುವ ವಿಡಿಯೋ ವನ್ನ ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಡೋದಾಗಿ ಧಮ್ಮಿ ಹಾಕಿದ್ದಾಳೆ ಎಂದು ಸಂಸದರು ದೂರಿದ್ದಾರೆ.
ಈ ಕುರಿತು ಕಮರ್ಷಿಯಲ್ ಸ್ವೀಟ್ ಠಾಣೆಯಲ್ಲಿ ದೂರು ನೀಡಿದ್ದು, ದೂರು ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.