ಬೆಂಗಳೂರು: ಚಿನ್ನ (Gold Price) ಮತ್ತು ಬೆಳ್ಳಿ ಬೆಲೆಯಲ್ಲಿ(Silver price) ಇಂದು (25) ಹೆಚ್ಚಿನ ಪ್ರಮಾಣದಲ್ಲಿ ಏರಿಳಿತವಾಗದೆ ಯಥಾಸ್ಥಿತಿಯಲ್ಲಿ ಮುಂದುವರೆದಿದೆ. ನೀವು ಕೂಡ ಬೆಳ್ಳಿ, ಬಂಗಾರ ಖರೀದಿ ಮಾಡಬೇಕು ಅನ್ನೋ ಆಲೋಚನೆಯಲ್ಲಿದ್ದರೆ ಇದನ್ನ ಸಂಪೂರ್ಣವಾಗಿ ಓದಿ.

ಬೆಂಗಳೂರಿನಲ್ಲಿ 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ (Gold Price) 60,160 ರೂಪಾಯಿ ಇದೆ. ಇನ್ನೂ 22 ಕ್ಯಾರೆಟ್‌ 10 ಗ್ರಾಂ ಚಿನ್ನದ ಬೆಲೆ 55,150 ರೂಪಾಯಿಗೆ ಬಂದು ನಿಂತಿದೆ. ಒಂದು ಕೆಜಿ ಬೆಳ್ಳಿ ಬೆಲೆ ಇಂದು 76,500 ರೂಪಾಯಿ ಇದೆ. ಬೆಳ್ಳಿ ಬೆಲೆಯೂ ಸಹ ಯಥಾಸ್ಥಿತಿಯಲ್ಲಿದೆ. ರಾಜ್ಯದ ಪ್ರಮುಖ ನಗರಗಳಾದ ಮೈಸೂರು, ದಾವಣಗೆರೆ, ಹುಬ್ಬಳ್ಳಿ-ಧಾರವಾಡ ಸೇರಿದಂತೆ ಬಹುತೇಕ ಎಲ್ಲಾ ಕಡೆ ಇದೇ ದರ ಮುಂದುವರೆದಿದೆ.

ವಾಣಿಜ್ಯ ನಗರ ಮುಂಬೈ
22 ಕ್ಯಾರೆಟ್ ಚಿನ್ನದ ಬೆಲೆ 55,150 ರೂಪಾಯಿ ಆಗಿದ್ದರೆ, 24 ಕ್ಯಾರೆಟ್ ಚಿನ್ನದ ಬೆಲೆ 60,160 ರೂಪಾಯಿ ಇದೆ. ದೇಶದ ವಾಣಿಜ್ಯ ನಗರಿಯಲ್ಲಿ ಬೆಳ್ಳಿ ಬೆಲೆ 78,000 ರೂಪಾಯಿ ಇದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 55,300 ರೂ., 24 ಕ್ಯಾರೆಟ್ ಚಿನ್ನದ ಬೆಲೆ 60,320 ರೂಪಾಯಿಯಲ್ಲಿ ವ್ಯಾಪಾರ ಮುಂದುವರೆಯುತ್ತಿದೆ. ಇಲ್ಲಿ ಬೆಳ್ಳಿ ಬೆಲೆ 78,000 ರೂಪಾಯಿಗೆ ವ್ಯಾವಾರವಾಗುತ್ತಿದೆ.

ಚೆನ್ನೈನಲ್ಲಿ ಹೇಗಿದೆ..?
ಚಿನ್ನದ ಬೆಲೆಯಲ್ಲಿ ವ್ಯತ್ಯಾಸವಿದೆ. ಚೆನ್ನೈನಲ್ಲಿ 22 ಕ್ಯಾರೆಟ್ ಆಭರಣ ಚಿನ್ನದ ಬೆಲೆ 55,550 ರೂಪಾಯಿಗೆ ತಲುಪಿದೆ. 24 ಕ್ಯಾರೆಟ್ ಚಿನ್ನದ ಬೆಲೆ 60,600 ರೂಪಾಯಿ ಇದೆ, ನಿನ್ನೆ ಕೂಡ ಇದೇ ಬೆಲೆಯಲ್ಲಿ ವ್ಯವಹಾರ ನಡೆಸಿತ್ತು. ಚೆನ್ನೈನಲ್ಲೂ ಕೆಜಿ ಬೆಳ್ಳಿ 80,500 ರೂಪಾಯಿ ಇದೆ.ಜುಲೈ 21 ರಂದು 10 ಗ್ರಾಂ 22 ಕ್ಯಾರಟ್ ಚಿನ್ನದ ಬೆಲೆಯಲ್ಲಿ 100 ರೂಪಾಯಿ ಏರಿಕೆಯಾಗಿದ್ದರೆ 10 ಗ್ರಾಂ 24 ಗ್ಯಾರಟ್ ಚಿನ್ನದ ಬೆಲೆಯಲ್ಲಿ 100 ರೂಪಾಯಿ ಹೆಚ್ಚಳಗೊಂಡಿತ್ತು. ಜುಲೈ 20 ರಂದು 10 ಗ್ರಾಂ 22 ಕ್ಯಾರಟ್ ಚಿನ್ನದ ಬೆಲೆಯಲ್ಲಿ 500 ರೂಪಾಯಿ ಏರಿಕೆಯಾಗಿದ್ದರೆ 10 ಗ್ರಾಂ 24 ಗ್ಯಾರಟ್ ಚಿನ್ನದ ಬೆಲೆಯಲ್ಲಿ 550 ರೂಪಾಯಿ ಹೆಚ್ಚಳಗೊಂಡಿತ್ತು.

ಜುಲೈ 23 ರಂದು 10 ಗ್ರಾಂ 22 ಕ್ಯಾರಟ್ ಚಿನ್ನದ ಬೆಲೆಯಲ್ಲಿ 250 ರೂಪಾಯಿ ಕಡಿಮೆಯಾಗಿದ್ದು 10 ಗ್ರಾಂ 24 ಗ್ಯಾರಟ್ ಚಿನ್ನದ ಬೆಲೆಯಲ್ಲಿ 280 ರೂಪಾಯಿ ಇಳಿಕೆಯಾಗಿತ್ತು. ಜುಲೈ 22 ರಂದು 10 ಗ್ರಾಂ 22 ಕ್ಯಾರಟ್ ಚಿನ್ನದ ಬೆಲೆಯಲ್ಲಿ 300 ರೂಪಾಯಿ ಕಡಿಮೆಯಾಗಿದ್ದರೆ 10 ಗ್ರಾಂ 24 ಗ್ಯಾರಟ್ ಚಿನ್ನದ ಬೆಲೆಯಲ್ಲಿ 310 ರೂಪಾಯಿ ಇಳಿಕೆಯಾಗಿತ್ತು.