ಸುದ್ದಿಬಿಂದು ಬ್ಯೂರೋ
ಬೆಂಗಂಗಳೂರು :
ಪ್ರವಾಹ, ಕರೋನಾ ಸಂದರ್ಭದಲ್ಲಿ ಜನರ ಸಂಕಷ್ಟ ಆಲಿಸಲು ಬಾರದ ಪ್ರಧಾನಿ ಮೋದಿ ಅವರು ಈಗ ಕೂಲಿಂಗ್ ಗ್ಲಾಸ್ ,ಸಫಾರಿ ಸೂಟ್ ಹಾಕೊಂಡು ಬಂದಿದ್ದಾರೆ. ಇದರಿಂದ ಕನ್ನಡಿಗರಿಗೆ ಅನುಕೂಲವಾಗಲಿದೆಯಾ..ಎನ್ನುವ ಮೂಲಕ ಮೋದಿ ಅವರ ಬಂಡೀಪುರ ಸಫಾರಿ ಕುರಿತಾಗಿ ಮಾಜಿ ಸಿಎಂ ಕುಮಾರಸ್ವಾಮಿ ವ್ಯಂಗ್ಯ ಮಾಡಿದ್ದಾರೆ.

ಈ ಬಗ್ಗೆ ಬೆಂಗಳೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಕುಮಾರಸ್ವಾಮಿ ಅವರು ರಾಜ್ಯದಲ್ಲಿ ಪ್ರವಾಹ ಹಾಗೂ ಕರೋನಾ ಬಂದಾಗ ರಾಜ್ಯದ ಜನತೆ ಸಾಕಷ್ಟು ಸಮಸ್ಯೆಗೆ ಒಳಗಾಗಿದ್ದರು. ಆಗ ರಾಜ್ಯಕ್ಕೆ ಬಾರದೆ ಈಗ ಕೂಲ್ಲಿಂಗ್ ಗ್ಲಾಸ್, ಸೂಟ್ ಹಾಕಿ ಸಫಾರಿ ನಡೆಸಿದ್ದಾರೆ. ಇದರಿಂದಾಗಿ ಜನರಿಗೆ ಏನು ಲಾಭವಾಗಲಿದೆ ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

ವನ್ಯ ಜೀವಿಗಳನ್ನ ರಕ್ಷಣೆ ಮಾಡಬೇಕು. ಆದರೆ ವನ್ಯಜೀವಿಗಳಿಂದಾಗಿ ಅದೆಷ್ಟೋ ಕುಟುಂಬಕ್ಕೆ ಹಾನಿ ಸಹ ಆಗಿದೆ. ಆ ಕುಟುಂಬದ ಸಂಕಷ್ಟವನ್ನ ಕೇಳುವ ಕೆಲಸವನ್ನ ಮೋದಿ ಮಾಡಿಲ್ಲ‌, ವನ್ಯ ಜೀವಿಗಳ ಜೊತೆಗೆ ಮನುಷ್ಯರನ್ನ ಕೂಡ ರಕ್ಷಣೆ ಮಾಬೇಕು. ಸಂತ್ರಸ್ತರಿಗೆ ನೆರವಾಗುವ ಕಾರ್ಯಕ್ರಮ ಮಾಡಲಿ, ಮೋದಿ ಪ್ರವಾಸದ ಬಗ್ಗೆ ರಾಜ್ಯದ ಜನ ನಿರ್ಧಾರ ಮಾಡಬೇಕು.