ಸುದ್ದಿಬಿಂದು ಬ್ಯೂರೋ ವರದಿ
ಶಿರಸಿ: ಕಾರವಾರದ ಮಹಿಳಾ ಪೊಲೀಸ್ ಠಾಣೆಯಲ್ಲಿ ಪಿಎಸ್‌ಐ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಸಂತೋಷ ಕುಮಾರ ಅವರು ಶಿರಸಿ ಗ್ರಾಮೀಣ ಪೊಲೀಸ್ ಠಾಣೆಯ ಪಿಎಸ್‌ಐ ಕಾನೂನು ಮತ್ತು ಸಂಚಾರ ಹುದ್ದೆಗೆ ವರ್ಗಾವಣೆಯಾಗಿದ್ದು, ಶಿರಸಿ ಠಾಣೆಯಲ್ಲಿ ಅಧಿಕಾರ ಸ್ವೀಕರಿಸಿದ್ದಾರೆ.
- ಕರಾವಳಿ ಉತ್ಸವ:ಕಲಾವಿದರಿಂದ ಅರ್ಜಿ ಆಹ್ವಾನ
- ನೈಟ್ಕ್ಲಬ್ನಲ್ಲಿ ಭೀಕರ ಅವಘಡ : 23 ಮಂದಿ ಸಜೀವ ದಹನ
- ಭಾರತಕ್ಕೆ ಭರ್ಜರಿ ಗೆಲುವು ಸರಣಿ 2-1ರಿಂದ ಭಾರತ ಕೈಸೇರಿಸಿದ ODI
- ರಾಜ್ಯ ಸರಕಾರದ ವಿರುದ್ದ ಮಾತನಾಡಲು ಬಿಜೆಪಿಯಲ್ಲಿ ನಾಯಕರಿಲ್ಲ:ಬಸವನಗೌಡ ಪಾಟೀಲ್ ಯತ್ನಾಳ
ಸಂತೋಷ ಕುಮಾರ ಅವರು ಕಾರವಾರದ ನಗರ ಪೊಲೀಸ್ ಠಾಣೆ ಹಾಗೂ ಮಹಿಳಾ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸಿದ್ದರು. ಸಾರ್ವಜನಿಕರೊಂದಿಗೆ ಸ್ನೇಹದಿಂದ ಇದ್ದ ಅಧಿಕಾರಿ ಎಂದು ಹೆಸರಾಗಿದ್ದ ಇವರು ಈಗ ಶಿರಸಿ ಗ್ರಾಮೀಣ ಠಾಣೆಯಲ್ಲಿ ಅಧಿಕಾರ ಸ್ವೀಕರಿಸಿದ್ದಾರೆ.ಇವರು ಕಾರವಾರ ಸೇರಿದಂತೆ ಜಿಲ್ಲೆಯ ಬೇರೆ ಬೇರೆ ಠಾಣೆಯಲ್ಲಿ ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸಿದ್ದಾರೆ
ಶಿರಸಿ ಗ್ರಾಮೀಣ ಠಾಣೆಯಲ್ಲಿ ಈ ಹಿಂದೆ ಇದ್ದ ಪಿ.ಎಸ್.ಐ.ಪ್ರತಾಪ ಅವರನ್ನು ವರ್ಗಾವಣೆಗೊಳಿಸಲಾಗಿದ್ದು ಐ.ಜಿ. ಕಚೇರಿಯಲ್ಲಿ ವರದಿ ಮಾಡಲು ತಿಳಿಸಲಾಗಿದೆ.


