ಉತ್ತರ ಕನ್ನಡ ಜಿಲ್ಲೆಯಾದ್ಯಂತ ಮೀಟರ್ ಬಡ್ಡಿ ಹಾಗೂ ಮೈಕ್ರೋಫೈನಾನ್ಸ್ ಕಿರುಕುಳ ನೀಡುವವರ ಮೇಲೆ ಕಟ್ಟು ನಿಟ್ಟಿನ ಕಾನೂನು ಕ್ರಮ ಕೈಗೊಂಡಿದ್ದು, ಈಗಾಗಲೇ ಜಿಲ್ಲೆಯ ಹಲವು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಇದರಿಂದ ಹಲವು ಅಕ್ರಮ ಬಡ್ಡಿಕೋರರು ಊರು ಬಿಟ್ಟು ಕಣ್ಮರೆಯಾಗಿದ್ದಾರೆ, ಮೈಕ್ರೋಫೈನಾನ್ಸ್ ಸಿಬ್ಬಂದಿಯಿಂದ ಕಿರುಕುಳ, ಮೀಟರ್ ಬಡ್ಡಿಯಿಂದ ತೊಂದರೆಗೊಳಗಾದವರು ದೈರ್ಯವಾಗಿ ಠಾಣೆಗೆ ಬಂದು ದೂರು ದಾಖಲಿಸಲು ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಪ್ರಕಟಣೆ ಮೂಲಕ ತಿಳಿಸಿದೆ.

ಕಿರುಕುಳಕ್ಕೆ ಒಳಗಾದವರು. ದೈರ್ಯವಾಗಿ ಠಾಣೆಗೆ ಬಂದು.ಮೈಕ್ರೋಫೈನಾನ್ಸ್ ಸಿಬ್ಬಂದಿಗಳೆನಾದರೂ ಮನೆ ಬಂದು ಕಿರುಕುಳ ಮಾಡುತ್ತಿದ್ದರೆ, ತಕ್ಷಣ ಲೊಕೇಶನ್ ಸಮೇತ ವಿವರಗಳನ್ನು ಪೊಲೀಸ್ ಅಧೀಕ್ಷಕರ (ಎಸ್.ಪಿ.) ಮೊಬೈಲ್ ನಂ. 9480805201 ಗೆ ಕಳುಹಿಸಲು ಕೋರಿದೆ.

ಕಿರುಕುಳ ಅನುಭವಿಸುವವರು 112ಗೆ ಕರೆಮಾಡಿ ಹತ್ತಿರದ ಪೊಲೀಸ ಠಾಣೆಗೆ ಬಂದು ದೂರು ಕೊಡಬಹುದು.ಬಡ್ಡಿ ಕಿರುಕುಳ ಮಾಡುವವರ ವಿವರಗಳನ್ನು ಕೂಡ ಶೇರ್ ಮಾಡಬಹುದು.

ಮಾಹಿತಿದಾರರ ಮಾಹಿತಿಯನ್ನು ಗೌಪ್ಯವಾಗಿ ಇಡಲಾಗುವುದು ಎಂದು ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಪ್ರಕಟಣೆ ಮೂಲಕ ತಿಳಿಸಿದೆ..

ಇದನ್ನೂ ಓದಿ