ಸುದ್ದಿಬಿಂದು ಬ್ಯೂರೋ ವರದಿ
ಹೊಸದಿಲ್ಲಿ: ಕೇಂದ್ರ ಸರ್ಕಾರ ಶುಕ್ರವಾರ ಕರ್ನಾಟಕ ಸರ್ಕಾರಕ್ಕೆ ತೆರಿಗೆ ಹಂಚಿಕೆಯ ಕಂತಾಗಿ ₹6,310.40 ಕೋಟಿ ಬಿಡುಗಡೆ ಮಾಡಿದೆ. ಕೇಂದ್ರ ಸರ್ಕಾರ 28 ರಾಜ್ಯಗಳಿಗೆ ಒಟ್ಟಾರೆಯಾಗಿ ₹1,73,030 ಕೋಟಿ ಬಿಡುಗಡೆ ಮಾಡಿದೆ.
15ನೇ ಹಣಕಾಸು ಆಯೋಗದ ಶಿಫಾರಸುಗಳ ಪ್ರಕಾರ, ಹಣಕಾಸು ವರ್ಷದಲ್ಲಿ ಕೇಂದ್ರ ಸರ್ಕಾರ ಸಂಗ್ರಹಿಸುವ ತೆರಿಗೆಯ 41% ಅನ್ನು 14 ಕಂತುಗಳಲ್ಲಿ ರಾಜ್ಯ ಸರ್ಕಾರಗಳಿಗೆ ಹಂಚಿಕೆ ಮಾಡಲಾಗುತ್ತದೆ. 2024ರ ಡಿಸೆಂಬರ್ ತಿಂಗಳ ಕಂತಿನಲ್ಲಿ ₹89,086 ಕೋಟಿ ಬಿಡುಗಡೆ ಮಾಡಲಾಗಿದೆ.
ರಾಜ್ಯಗಳು ಅಭಿವೃದ್ಧಿ ಮತ್ತು ಬಂಡವಾಳ ವೆಚ್ಚಗಳಿಗೆ ಹೆಚ್ಚು ಹಣ ಹೂಡಿಕೆ ಮಾಡಲು ಈ ಕಂತು ಬಿಡುಗಡೆ ಮಾಡಲಾಗಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯ ತಿಳಿಸಿದೆ.
ಯಾವ ಯಾವ ರಾಜ್ಯಗಳಿಗೆ ಎಷ್ಟು ಹಣ
- ಆಂಧ್ರ ಪ್ರದೇಶ – ₹7,002.52 ಕೋಟಿ
- ಅರುಣಾಚಲ ಪ್ರದೇಶ – ₹3,040.14 ಕೋಟಿ
- ಅಸ್ಸಾಂ – ₹5,412.38 ಕೋಟಿ
- ಬಿಹಾರ – ₹17,403.36 ಕೋಟಿ
- ಛತ್ತೀಸ್ಗಡ – ₹5,895.13 ಕೋಟಿ
- ಗೋವಾ – ₹667.91 ಕೋಟಿ
- ಗುಜರಾತ್ – ₹6,017.99 ಕೋಟಿ
- ಹರಿಯಾಣ – ₹1,891.22 ಕೋಟಿ
- ಹಿಮಾಚಲ ಪ್ರದೇಶ – ₹1,436.16 ಕೋಟಿ
- ಜಾರ್ಖಂಡ್ – ₹5,722.10 ಕೋಟಿ
- ಕರ್ನಾಟಕ – ₹6,310.40 ಕೋಟಿ
- ಕೇರಳ – ₹3,330.83 ಕೋಟಿ
- ಮಧ್ಯಪ್ರದೇಶ – ₹13,582.86 ಕೋಟಿ
- ಮಹಾರಾಷ್ಟ್ರ – ₹10,930.31 ಕೋಟಿ
- ಮಣಿಪುರ – ₹1,238.90 ಕೋಟಿ
- ಮೇಘಾಲಯ – ₹1,327.13 ಕೋಟಿ
- ಮಿಜೋರಾಂ – ₹865.15 ಕೋಟಿ
- ನಾಗಾಲ್ಯಾಂಡ್ – ₹984.54 ಕೋಟಿ
- ಒಡಿಶಾ – ₹7,834.80 ಕೋಟಿ
- ಪಂಜಾಬ್ – ₹3,126.65 ಕೋಟಿ
- ರಾಜಸ್ಥಾನ – ₹10,426.78 ಕೋಟಿ
- ಸಿಕ್ಕಿಂ – ₹2,671.35 ಕೋಟಿ
- ತಮಿಳುನಾಡು – ₹7,057.89 ಕೋಟಿ
- ತೆಲಂಗಾಣ – ₹3,637.09 ಕೋಟಿ
- ತ್ರಿಪುರಾ – ₹1,225.04 ಕೋಟಿ
- ಉತ್ತರ ಪ್ರದೇಶ – ₹31,039.84 ಕೋಟಿ
- ಉತ್ತರಾಖಂಡ್ – ₹1,934.47 ಕೋಟಿ
- ಪಶ್ಚಿಮ ಬಂಗಾಳ – ₹13,017.06 ಕೋಟಿ.
- ಗಮನಿಸಿ