ಸುದ್ದಿಬಿಂದು ಬ್ಯೂರೋ ವರದಿ : (Suddibindu (Digital News)
ಬೆಂಗಳೂರು: ಬಿಜೆಪಿಯ ನಾಯಕನ ಎಂಬಾತನ ವಿರುದ್ದ ಮಹಿಳೆ ನೀಡಿದ ದೂರು ಹಿನ್ನೆಲೆಯಲ್ಲಿ, ಬಿಜೆಪಿ ನಾಯಕ ಸೋಮಶೇಖರ್ ಅಲಿಯಾಸ್ ಜಿಮ್ ಸೋಮ ವಿರುದ್ಧ ಬಲಾತ್ಕಾರ ಪ್ರಕರಣ ದಾಖಲಾಗಿದ್ದು. ಪೊಲೀಸರು ಸೋಮಶೇಖರ ಪತ್ತೆಗೆ ಶೋಧ ಕಾರ್ಯ ನಡೆಸುತ್ತಿದ್ದಾರೆ.
ಪೊಲೀಸ್ ಅಧಿಕಾರಿಗಳ ಮಾಹಿತಿ ಪ್ರಕಾರ, ದೂರುದಾರ ಮಹಿಳೆ ಮತ್ತು ಸೋಮ ಒಬ್ಬ ಸಾಮಾನ್ಯ ಸ್ನೇಹಿತನ ಮೂಲಕ ಪರಿಚಿತರಾಗಿದ್ದರು. ಮಹಿಳೆಯ ಮದುವೆಗೆ ಆರ್ಥಿಕ ಸಹಾಯ ಮಾಡುವುದಾಗಿ ಸೋಮ ಭರವಸೆ ನೀಡಿದ್ದು. ಕೆಲವು ತಿಂಗಳ ಹಿಂದೆ, ಹಣ ನೀಡುವ ನೆಪದಲ್ಲಿ ಸೋಮಶೇಖರ್ ಮಹಿಳೆಯನ್ನು ಪಿಜೆ ನಿವಾಸದಿಂದ ತನ್ನ ಫ್ಲ್ಯಾಟ್ಗೆ ಕರೆದುಕೊಂಡು ಹೋಗಿದ್ದಾರೆ ಎಂದು ಆರೋಪಿಸಲಾಗಿದೆ.
ಪೊಲೀಸ್ ಮೂಲಗಳ ಪ್ರಕಾರ, ಮಹಿಳೆ ಕಳೆದ ವರ್ಷ ನಿಶ್ಚಿತಾರ್ಥ ಮಾಡಿಕೊಂಡಿದ್ದರು, ಅದರಿಂದಾಗಿ ಅವರು ಆರ್ಥಿಕ ಸಹಾಯ ಕೇಳಿದ್ದರು. ಸೋಮಶೇಖರ್ ನಗರದಿಂದ ಪರಾರಿಯಾಗಿರುವ ಶಂಕೆ ಇದ್ದು, ಪೊಲೀಸರು ಅವರ ಪತ್ತೆಗೆ ಶೋಧಿಸುತ್ತಿದ್ದಾರೆ. 2018ರ ವಿಧಾನಸಭಾ ಚುನಾವಣೆಯಲ್ಲಿ ಸೋಮಶೇಖರ್ ಸ್ಪರ್ಧಿಸಿ ಸೋತ್ತಿದ್ದರು.
ಗಮನಿಸಿ
- ಮರಕ್ಕೆ ಡಿಕ್ಕಿ ಹೊಡೆದ ಸಾರಿಗೆ ಬಸ್ : ವಿದ್ಯಾರ್ಥಿಗಳು ಸೇರಿ 15ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಂಭೀರ ಗಾಯ
- ಅಪರೂಪದ ಕಾಯಿಲೆಯಿಂದ ಬಳಲುತ್ತಿರುವ ಮಗುವಿನ ನೆರವಿನ ಕೈ ಚಾಚುವಂತೆ ಮನವಿ
- ಹೊನ್ನಾವರದಲ್ಲಿ ಭೀಕರ ದುರಂತ: ಕಾರಿಗೆ ಬೆಂಕಿ, ಇಬ್ಬರು ಸಜೀವ ದಹನ
- ವಿವಾಹಕ್ಕೆ ಒಪ್ಪದ ಪ್ರೇಯಸಿ: ಪವನ್ ಭಟ್ ಆತ್ಮಹತ್ಯೆ
- ಚಿನ್ನ ಕಳೆದು ಕಣ್ಣೀರು ಹಾಕಿದ ಮಹಿಳೆ : ಒಂದು ಗಂಟೆಯಲ್ಲಿ ನಗು ತಂದ ಕುಮಟಾ ಪೊಲೀಸರು




