ಸುದ್ದಿಬಿಂದು ಬ್ಯೂರೋ ವರದಿ
Bhatkal/ಭಟ್ಕಳ:ವಿಶ್ವವಿಖ್ಯಾತವಾಗಿರುವ ಮುರುಡೇಶ್ವರ ಕಡಲತೀರದಲ್ಲಿ( Murudeshwara beach) CRZನಿಯಮ ಉಲ್ಲಂಘಿಸಿ ಅನಧಿಕೃತವಾಗಿ ಹಾಕಿಕೊಳ್ಳಲಾಗಿದ್ದ ಗೂಡಂಡಗಿಗಳನ್ನ ಸ್ಥಳೀಯ ಗ್ರಾಮ ಪಂಚಾಯತ್ ಅಧಿಕಾರಿಗಳು ಬೀಗು ಪೊಲೀಸ್ ಬಂದೋಬಸ್ತ್ನಲ್ಲಿ ಬೆಳಂಬೆಳಗ್ಗೆ ಕಡಲತೀರದಲ್ಲಿದ್ದ ಗೂಡಂಗಡಿಗಳನ್ನ ತೆರವು ಮಾಡಿದ್ದಾರೆ.
ಮುರುಡೇಶ್ವರದ ಕಡಲ ತೀರದಲ್ಲಿ CRZನಿಯಮ ಉಲ್ಲಂಘಿಸಿ ಸುಮಾರು 50ಕ್ಕೂ ಹೆಚ್ಚು ಗೂಡಂಗಡಿಗಳನ್ನ ಕಡಲ ತೀರದಲ್ಲಿ ಹಾಕಲಾಗಿತ್ತು. ಮಂಕಾಳು ವೈದ್ಯಅವರು ಸಚಿವರಾದ ಬಳಿಕ ಹಲವರು ಕಡಲತೀರದಲ್ಲಿ ಗೂಡಂಗಡಿ ಹಾಕಲು ಅವಕಾಶ ನೀಡುವಂತೆ ಸಚಿವರಲ್ಲಿ ಮನವಿ ಮಾಡಿಕೊಂಡಿದ್ದರು. ಜನರ ಕಷ್ಟವನ್ನ ಅರಿತ ಸಚಿವ ಮಂಕಾಳು ವೈದ್ಯ ಅವರು ಕಡಲತೀರದಲ್ಲಿ ಗೂಡಂಗಡಿಗಳನ್ನ.ಹಾಕಲು ಅವಕಾಶ ಕಲ್ಪಿಸಿದ್ದರು.
ಡಿಸೆಂಬರ್ 10ರಂದು ಕೋಲಾರ ಜಿಲ್ಲೆಯ ಮುಳುಬಾಗಿಲಿನಿಂದ ವಸತಿ ಶಾಲೆಯ ನಾಲ್ವರು ವಿದ್ಯಾರ್ಥಿನಿಯರು ಕಡಲತೀರದಲ್ಲಿ ಆಟವಾಡುವ ವೇಳೆ ಸಮುದ್ರದ ಅಲೆಗೆ ಸಿಲುಕಿ ಸಾವನ್ನಪ್ಪಿದ್ದರು.ಇದಾದ ನಂತರದಲ್ಲಿ ಮುರುಡೇಶ್ವರ ಕಡಲತೀರಕ್ಕೆ ಪ್ರವಾಸಿಗರಿಗೆ ನಿರ್ಬಂಧ ಹಾಕಲಾಗಿತ್ತು.ಇನ್ನೂ ದಿನ ಕಳೆದಂತೆ ಮುರುಡೇಶ್ವರ ಕಡಲತೀರದಲ್ಲಿ ಗೂಡಂಗಿಗಳು ಹೆಚ್ಚಾಗುತ್ತಿದ್ದು,ಇದರಿಂದ ಇಲ್ಲಿಗೆ ಬರುವ ಪ್ರವಾಸಿಗರಿಗೆ ವಾಹನ ಪಾರ್ಕಿಂಗ್ ಮಾಡಲು ಕಷ್ಟವಾಗುತ್ತಿರುವ ಬಗ್ಗೆ ಸಾರ್ವಜನಿಕರು ಸ್ಥಳೀಯ ಗ್ರಾಮ ಪಂಚಾಯತ ಹಾಗೂ ಸಂಬಂಧಿಸಿದ ಅಧಿಕಾರಿಗಳಿಗೆ ದೂರಿದ್ದರು ಎನ್ನಲಾಗಿದೆ.
ಈ ಹಿನ್ನಲೆಯಲ್ಲಿ ಸ್ಥಳೀಯ ಗ್ರಾಮ ಪಂಚಾಯತ ಅಧಿಕಾರಿಗಳು ಇಂದು ಬೆಳಿಗ್ಗೆಯಿಂದಲೇ ಕಡಲತೀರದಲ್ಲಿ ಕಾನೂನು ಬಾಹಿರವಾಗಿ ಇಟ್ಟುಕೊಳ್ಳಲಾದ ಗೂಡಂಗಡಿಗಳನ್ನ ತೆರವು ಮಾಡಿದ್ದಾರೆ.
ಗಮನಿಸಿ
- Teacher suspended/ವಿದ್ಯಾರ್ಥಿಗೆ ಥಳಿಸಿದ ಪ್ರಕರಣ : ಶಿಕ್ಷಕಿ ಅಮಾನತು.
- Varamahalakshmi Festival, ಶ್ರಾವಣದ ಶುಕ್ರವಾರ, ಮನೆ ಮನೆಗಳಲ್ಲಿ ವರಮಹಾಲಕ್ಷ್ಮಿ ಭಕ್ತಿ ಸಡಗರ
- Teacher/ಪಾಠ ಕಲಿಯಲಿಲ್ಲ ಎಂಬ ಕಾರಣಕ್ಕೆ ವಿದ್ಯಾರ್ಥಿಗೆ ಥಳಿತ : ಬಾಸುಂಡೆ ಮೂಡಿಸಿದ ಶಿಕ್ಷಕಿ
- ಭಟ್ಕಳದ ಹಳೆಯ ಕಾಲ ಮುಕ್ತಾಯ – ನಗರಸಭೆಯ ಹೊಸ ಯುಗ ಆರಂಭ ! ಮಂಕಾಳು ವೈದ್ಯ ಸಚಿವರಾದ ಬಳಿಕ ಭಟ್ಕಳಿಗರ ಕನಸು ನನಸು