ಸುದ್ದಿಬಿಂದು ಬ್ಯೂರೋ ವರದಿ
ಬೆಂಗಳೂರೂ :ಅಮೇರಿಕಾದಲ್ಲಿ ಚಿಕಿತ್ಸೆಗೆ ಒಳಗಾಗಿದ್ದ ಹ್ಯಾಟ್ರಿಕ್ ಹೀರೋ ಶಿವರಾಜಕುಮಾರ ಅವರಿಗೆ ಆರುಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ನಡೆಸಲಾಗಿದ್ದು, ಚಿಕಿತ್ಸೆ ಯಶಸ್ವಿಯಾಗಿದೆ ಅಂತಾ ಅಲ್ಲಿ ಚಿಕಿತ್ಸೆ ನಡೆಸಿದ ವೈದ್ಯರಾದ ಡಾ.ಮುರುಗೇಶ ವಿಡಿಯೋ ಮೂಲಕ ಹೇಳಿಕೊಂಡಿದ್ದಾರೆ.
ಚೇತರಿಕೆಗೆ ನೆರವಾಗಲು ಅಗತ್ಯ ಚಿಕಿತ್ಸೆ ಮುಂದುವರೆಸಲಾಗಿದೆ. ನುರಿತ ವೈದ್ಯರು ಹಾಗೂ ಆರೋಗ್ಯ ಸಿಬ್ಬಂದಿಯ ತಂಡದಿಂದ ಅತ್ಯುತ್ತಮ ಆರೈಕೆ ನಡೆಯುತ್ತಿದೆ. ಫ್ಲೋರಿಡಾದ ಮಿಯಾಮಿಯಲ್ಲಿ ಶಸ್ತ್ರಚಿಕಿತ್ಸೆ ನಡೆದಿದೆ. ಕೆಲ ದಿನಗಳ ಕಾಲ ವಿಶ್ರಾಂತಿ ಪಡೆದು ಜನವರಿ ಅಂತ್ಯದ ವೇಳೆಗೆ ಅವರು ಬೆಂಗಳೂರಿಗೆ ವಾಪಸಾಗಲಿದ್ದಾರೆ. ಸದ್ಯ ಅವರ ಜೊತೆಯಲ್ಲಿ ಪತ್ನಿ ಗೀತಾ ಶಿವರಾಜಕುಮಾರ,ಬಾಮೈದ ಮಧು ಬಂಗಾರಪ್ಪ ಹಾಗೂ ಡಾ. ಶಿವರಾಜಕುಮಾರ ಕುಟುಂಬಸ್ಥರು ಜೊತೆಯಲ್ಲಿದ್ದಾರೆ..
ಗಮನಿಸಿ