ಸುದ್ದಿಬಿಂದು ಬ್ಯೂರೋ ವರದಿ
Kumta:ಕುಮಟಾ: ತಾಲೂಕಿನ ಕುಡ್ಲೆ ಬೀಚ್‌ನಲ್ಲಿ (Gokarna Kudle beach) ಸಮುದ್ರದ ಅಲೆಗೆ ಕೊಚ್ಚಿ ಹೋಗುತ್ತಿದ್ದ ಪ್ರವಾಸಿ ಯುವತಿ ಓರ್ವಳನ್ನ ಲೈಪ್ ಗಾರ್ಡ್ ಸಿಬ್ಬಂದಿಗಳು ರಕ್ಷಣೆ (rescue)ಮಾಡಿದ್ದಾರೆ.
ಪ್ರಿಯಾಂಕಾ ನಿರ್ಮಲ ಕುಮಾರ್ ಎಂಬಾಕೆಯನ್ನ ರಕ್ಷಣೆ ಮಾಡಲಾಗಿದೆ.15ಮಂದಿ ಸ್ನೇಹಿತರೊಂದಿಗೆ ಗೋಕರ್ಣ ಪ್ರವಾಸಕ್ಕೆ ಬಂದಿದ್ದ ಹೈದ್ರಬಾದ್( Hyderabad) ಮೂಲದ ಯುವತಿ ಇಲ್ಲಿನ ಕುಡ್ಲೆ ಬೀಚ್ ಸಮುದ್ರದಲ್ಲಿ ಈಜಲು ಹೋಗಿದ್ದ ವೇಳೆ ಸಮುದ್ರದಲ್ಲಿ ಈಜಲು ಹೋಗಿದ್ದಳು.ಈ ವೇಳೆ ಅಲೆಯ ಅಬ್ಬರಕ್ಕೆ ಸಿಲುಕಿ ಅಪಾಯಕ್ಕೆ ಸಿಲುಕಿದ್ದಳು. ಇದನ್ನ ಗಮನಿಸಿದ ಲೈಪ್ ಗಾರ್ಡ್ ಸಿಬ್ಬಂದಿಗಳು ಯುವತಿಯನ್ನ ರಕ್ಷಣೆ ಮಾಡಿದ್ದಾರೆ.
ಹೈದರಾಬಾದ್ ಮೂಲದ 15 ಜನ ಕುಡ್ಲೆ ಬೀಚ್ ಪ್ರವಾಸಕ್ಕೆಂದು ಬಂದಿದ್ದರು, ಅಪಾಯಕ್ಕೆ ಸಿಲುಕಿದ ಯುವತಿ ಸಹಾಯಕ್ಕೆ ಎಂದು ಅಂಗಲಾಚುತಿದ್ದಾಗ ಅದನ್ನು ಗಮನಿಸಿದ ಜೀವ ರಕ್ಷಕ ಸಿಬ್ಬಂದಿಗಳಾದ ನಾಗೇಂದ್ರ ಎಸ್ kurle ಮಂಜುನಾಥ್ ಹರಿಕಂತ್ರ, ಪ್ರವಾಸಿ ಮಿತ್ರ ಶೇಖರ್ ಹರಿಕಂತ್ರ ಮತ್ತು ಮೈ ಸ್ಟಿಕ್ ಗೋಕರ್ಣ ಅಡ್ವೆಂಚರ್ಸ್ ತಕ್ಷಣ ರಕ್ಷಣೆ ಮಾಡಿದ್ದಾರೆ. ಗೋಕರ್ಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಗಮನಿಸಿ