ಸುದ್ದಿಬಿಂದು ಬ್ಯೂರೋ‌ ವರದಿ
ಅಂಕೋಲಾ:ತಾಲೂಕಿನ ಅವರ್ಸಾ ಗ್ರಾಮದ ವಾಹನ ಚಾಲಕರು ಮಾಲಕರು, ವ್ಯಾಪಾರಸ್ಥರ ಹಾಗೂ ಸಾರ್ವಜನಿಕರ ಸಂಘಟನೆಯಿಂದ ದುರ್ಗಾದೇವಿ ಪ್ರತಿಷ್ಠಾಪಿಸಿ ನವರಾತ್ರಿ ಉತ್ಸವ ಆಚರಣೆ ಮಾಡಲಾಗುತ್ತಿದೆ…

ಒಂಬತ್ತು ದಿನಗಳ ಕಾಲ ನಡೆಯುವ ನವರಾತ್ರಿ ಉತ್ಸವ ಇಲ್ಲಿ ವಿಜೃಂಭಣೆಯಿಂದ ಆಚರಣೆ ಮಾಡಲಾಗುತ್ತಿದೆ, ಪ್ರತಿ ವರ್ಷವೂ ಕೂಡಾ ವಿಭಿನ್ನವಾಗಿ ಉತ್ಸವ ಆಚರಿಸುತ್ತಿದ್ದು ದುರ್ಗಾದೇವಿ ವಿಸರ್ಜನೆ ದಿನ ವಿವಿಧ ಸ್ಥಬ್ಧ ಚಿತ್ರಗಳು ಇಲ್ಲಿ ಗಮನ ಸೆಳೆಯುತ್ತವೆ..ಈ ವರ್ಷವೂ ಕೂಡಾ ವಿಸರ್ಜನಾ ಮೆರವಣಿಗೆಯಲ್ಲಿ ಸ್ಥಬ್ಧ ಚಿತ್ರ ಸ್ಪರ್ಧೆ ಏರ್ಪಡಿಸಲಾಗಿದೆ ಪ್ರಥಮ,ದ್ವಿತೀಯ, ತೃತೀಯ ಮತ್ತು ಸಮಧಾನನಕರ ಬಹುಮಾನ ಇಡಲಾಗಿದೆ ಆಸಕ್ತರು ಸಂಘಟಕರಲ್ಲಿ ತಿಳಿಸಬಹುದಾಗಿದೆ, ಈ ವರ್ಷವೂ ಕೂಡಾ ನವರಾತ್ರಿ ಉತ್ಸವ ಅದ್ಧೂರಿಯಾಗಿ ಆಚರಿಸಲು ಸಂಘಟಕರು ವ್ಯವಸ್ಥೆ ಮಾಡಿಕೊಂಡಿದ್ದಾರೆ.

ಗಮನಿಸಿ