suddibindu.in
ಯಲ್ಲಾಪುರ : ಇಲ್ಲಿನ ಪಟ್ಟಣ ಪಂಚಾಯತ್ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ಇಂದು ನಡೆದಿದೆ. ಈ ಎರಡೂ ಸ್ಥಾನಕ್ಕೂ ಅವಿರೋಧವಾಗಿ ಆಯ್ಕೆ ನಡೆದಿದೆ.
ಯಲ್ಲಾಪುರ ಪಟ್ಟಣ ಪಂಚಾಯತ್ ನೂತನ ಅಧ್ಯಕ್ಷರಾಗಿ ಉತ್ತರ ಕನ್ನಡ ಜಿಲ್ಲಾ ಕಾಂಗ್ರೆಸ್ ನ ಕಾರ್ಯದರ್ಶಿಯಾಗಿದ್ದ ನರ್ಮದಾ ನಾಯ್ಕ ಹಾಗೂ ಉಪಾಧ್ಯಕ್ಷರಾಗಿ ಅಮಿತ್ ಅಂಗಡಿ ಆಯ್ಕೆಯಾಗಿದ್ದಾರೆ. ಆಗಸ್ಟ್ 21ರಂದು ನಡೆದ ಪಟ್ಟಣ ಪಂಚಾಯತ್ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ನರ್ಮದಾ ನಾಯ್ಕ್ ಹಾಗೂ ಉಪಾಧ್ಯಕ್ಷರಾಗಿ ಅಮಿತ್ ಅಂಗಡಿ ಆಯ್ಕೆಯಾಗಿದ್ದಾರೆ.
ಇದನ್ನೂ ಓದಿ
- ಮೀನುಗಾರ ಯುವಕನ ನಿಧನಕ್ಕೆ ರೂಪಾಲಿ ನಾಯ್ಕ ಸಂತಾಪ, ಹೆಚ್ಚಿ ಪರಿಹಾರಕ್ಕೆ ಆಗ್ರಹ
- RSS/ಆರ್ಎಸ್ಎಸ್ ಪ್ರಾಯೋಜಿತ ದುಷ್ಕರ್ಮಿಗಳ ಬೆದರಿಕೆ ಪದಗಳನ್ನ ಖಂಡಿಸುತ್ತೇವೆ:ನಿವೇದಿತ್ ಆಳ್ವಾ
- ಎಷ್ಟೇ ಅಪಪ್ರಚಾರ ಮಾಡಿದರೂ ಸ್ಫರ್ಧೆಯಿಂದ ಹಿಂದೆ ಸರಿಯುವುದಿಲ್ಲ: ಸರಸ್ವತಿ ಎನ್. ರವಿ
ನೂತನವಾಗಿ ಆಯ್ಕೆಯಾದ ಈ ಸಂದರ್ಭದಲ್ಲಿ ಅಧ್ಯಕ್ಷರನ್ನು ಉಪಾಧ್ಯಕ್ಷರನ್ನು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎನ್ ಕೆ ಭಟ್ರವರು,ಮಾಜಿ ಶಾಸಕರು ಹಾಗೂ ಕಾಂಗ್ರೆಸ್ ಉಸ್ತುವಾರಿಗಳಾದ ವಿ ಎಸ್ ಪಾಟೀಲ್ ರವರು. ಕೆಪಿಸಿಸಿ ಸದಸ್ಯರಾದ ವಿವೇಕ ಹೆಬ್ಬಾರ್ ರವರು ಹಾಗೂ ಪಕ್ಷದ ಪ್ರಮುಖರು ಕಾರ್ಯಕರ್ತರು ಅಭಿನಂದಿಸಿ ಹರ್ಷ ವ್ಯಕ್ತಪಡಿಸಿದ್ದಾರೆ.