suddibindu.in
Karwar ಕಾರವಾರ : ಉತ್ತರಕನ್ನಡ ಜಿಲ್ಲೆಯ ಬಹುತೇಕ ಸ್ಥಳೀಯಾಡಳಿತ ಸಂಸ್ಥೆಗಳ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ಸಂಪೂರ್ಣಗೊಂಡಿದ್ದು, ಇಂದು ಕುಮಟಾ ಪುರಸಭೆಯ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ ನಡೆಯುವುದಿತ್ತು. ಆದರೆ ಕಾಂಗ್ರೆಸ್ ಸದಸ್ಯೆ ವಿನಯಾ ಜಾರ್ಜ್ ಮೀಸಲಾತಿ ವಿರುದ್ಧ ಕೋರ್ಟ್ ನಿಂದ ತಡೆಯಾಜ್ಞೆ ತಂದ ಕಾರಣ ಆಯ್ಕೆ ಪ್ರಕ್ರಿಯೆ ಸಾಧ್ಯವಾಗಿಲ್ಲ.
ಇದನ್ನೂ ಓದಿ
- ಕಾಂಗ್ರೇಸ್ ವಿರುದ್ಧ ಕಾರವಾರದಲ್ಲಿ ಬಿಜೆಪಿ ಪ್ರತಿಭಟನೆ
- ಆಸ್ಪತ್ರೆಗೆ ಉಪಕರಣ ಕೊಡಿ, ನಂತರ ಉದ್ಘಾಟನೆಗೆ ಬನ್ನಿ: ಕಾಂಗ್ರೇಸ್ ಸರಕಾರಕ್ಕೆ ರೂಪಾಲಿ ನಾಯ್ಕ ಖಡಕ್ ಎಚ್ಚರಿಕೆ”
- ಭಾರತ ಸುತ್ತಲು ನೇಪಾಳದಿಂದ ಬಂದ ಸೈಕಲ್ ಯಾತ್ರಿ : ಕಾರವಾರದಲ್ಲಿ ಬಿಡಾರ
ಬಿಜೆಪಿ ಪಕ್ಷವು ತನ್ನ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ ಅಂತಿಮಗೊಳಿಸಿದ್ದು, ಸುಮತಿ ಭಟ್ ಅಧ್ಯಕ್ಷರಾಗಿ, ಮಹೇಶ ನಾಯ್ಕ ಉಪಾಧ್ಯಕ್ಷರಾಗಿ ಆಯ್ಕೆ ಮಾಡಲಾಗಿತ್ತು ಎಂದು ವಿಶ್ವಸನೀಯ ಮೂಲಗಳು ತಿಳಿಸಿತ್ತು. ಆದರೆ ನ್ಯಾಯಾಲಯದ ತಡೆಯಾಜ್ಞೆಯಿಂದಾಗಿ ಬಿಜೆಪಿಗರ ಕನಸು ಭಗ್ನಗೊಂಡಂತಾಗಿದೆ.





