suddibindu.in
ಕಾರವಾರ : ರಾಷ್ಟಿಯ ಹೆದ್ದಾರಿ 66ರ ಉತ್ತರಕನ್ನಡ ಜಿಲ್ಲೆಯ ಕಾರವಾರದ ಕಾಳಿ ನದಿಯ ಸೇತುವೆ ಕುಸಿದು ಬಿದ್ದು ನದಿಯಲ್ಲಿ ಮುಳುಗಡೆಯಾಗಿದ್ದ ತಮಿಳುನಾಡು ಮೂಲದ ಲಾರಿಯನ್ನ ಜಿಲ್ಲಾಡಳಿತ ಹಾಗೂ IRB ಒಂದು ವಾರದ ಬಳಿಕ ಮೇಲಕ್ಕೆ ಎತ್ತಲಾಗಿದೆ.
ಕಾಳಿ ನದಿಗೆ ಅಡ್ಡಲಾಗಿ ಕಟ್ಟಲಾಗಿದ್ದ ಸೇತುವೆ ಅಗಷ್ಟ್ 7ರಂದು ರಾತ್ರಿ ಒಂದು ಗಂಟೆ ಸುಮಾರಿಗೆ ಕುಸಿದು ಕಾಳಿ ನದಿಯ ಪಾಲಾಗಿತ್ತು. ಇದೇ ವೇಳೆ ಗೋವಾಕಡೆಯಿಂದ ಕಾರವಾರ ಕಡೆಗೆ ಚಲಿಸುತ್ತಿದ್ದ ತಮಿಳುನಾಡು ಮೂಲದ ಲಾರಿ ಸೇತುವೆಯ ಮೇಲಿನಿಂದ ಕಾಳಿ ನದಿಗೆ ಬಿದ್ದು ಮುಳುಗಡೆಯಾಗಿತ್ತು.ಈ ವೇಳೆ ಲಾರಿ ಚಾಲಕ ಬಾಲಮುರುಗನ್ ಎಂಬಾತನ್ನ ಸ್ಥಳೀಯ ಮೀನುಗಾರರು ಹಾಗೂ ಪೊಲೀಸರು ಲಾರಿ ಚಾಲಕನನ್ನ ರಕ್ಷಣೆ ಮಾಡಿದ್ದರು..
ಇದನ್ನೂ ಓದಿ
- ಮರಕ್ಕೆ ಡಿಕ್ಕಿ ಹೊಡೆದ ಸಾರಿಗೆ ಬಸ್ : ವಿದ್ಯಾರ್ಥಿಗಳು ಸೇರಿ 15ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಂಭೀರ ಗಾಯ
- ಅಪರೂಪದ ಕಾಯಿಲೆಯಿಂದ ಬಳಲುತ್ತಿರುವ ಮಗುವಿನ ನೆರವಿನ ಕೈ ಚಾಚುವಂತೆ ಮನವಿ
- ಹೊನ್ನಾವರದಲ್ಲಿ ಭೀಕರ ದುರಂತ: ಕಾರಿಗೆ ಬೆಂಕಿ, ಇಬ್ಬರು ಸಜೀವ ದಹನ
ಘಟನೆ ನಂತರದಲ್ಲಿ ಮಳೆ ಸಹ ಸುರಿಯುತ್ತಿರುವ ಕಾರಣ ಲಾರಿಯನ್ನ ಮೇಲೆತ್ತಲು ಸಾಧ್ಯವಾಗಿರಲಿಲ್ಲ. ಆದರೆ ಇದೀಗ ಮಳೆ ಸಹ ಕಡಿಮೆಯಾಗಿದ್ದು, ನದಿಯಲ್ಲಿ ಮುಳುಗಡೆಯಾಗಿದ್ದ ಲಾರಿಯನ್ನ ಮೇಲಕ್ಕೆ ಎತ್ತಲಾಗಿದೆ.
ಈಶ್ವರ ಮಲ್ಪೆ ಯಶಸ್ವಿ ಕಾರ್ಯಚರಣೆ
ಕಾರವರ ಕಾಳಿ ನದಿಯಲ್ಲಿ ಮುಳುಗಡೆಯಾಗಿದ್ದ ತಮಿಳನಾಡು ಮೂಲದ ಲಾರಿಯನ್ನ ನದಿಯಿಂದ ಮೇಲಕ್ಕೆತ್ತುವಲ್ಲಿ ಈಶ್ವರ ಮಲ್ಪೆ ಸಹ ಯಶಸ್ವಿ ಕಾರ್ಯಚರಣೆ ಮಾಡಿದ್ದಾರೆ. ಲಾರಿ ನದಿ ಆಳದಲ್ಲಿ ಮುಳುಗಡೆಯಾಗಿತ್ತು. ಅದನ್ನ ಕ್ರೇನ್ ಮೂಲಕ ಮೇಲಕ್ಕೆತ್ತುವ ಕಾರ್ಯ ಮಾಡಲಾಗಿತ್ತಾದರೂ. ಮುಳುಗಡೆಯಾಗಿರುವ ಲಾರಿಗೆ ನದಿ ಆಳದಲ್ಲಿ ಹೋಗಿ ರೋಪ್ ಕಟ್ಟುವುದು ಅಷ್ಟು ಸುಲಭವಾಗಿರಲಿಲ್ಲ. ಜೊತೆಗೆ ನದಿಯಲ್ಲಿ ಲಾರಿಯನ್ನ ಎಳೆದು ತರುವಾಗ ಯಾವ ಭಾಗದಲ್ಲಿ ಕಲ್ಲು ಬಂಡೆಗಳಿವೆ ಅದನ್ನ ಯಾವ ರೀತಿಯಲ್ಲಿ ತಪ್ಪಿಸಿಕೊಂಡು ಲಾರಿ ಎಳೆಯಬೇಕು ಎನ್ನುವ ಬಗ್ಗೆ ಕ್ಷಣ ಕ್ಷಣಕ್ಕೂ ಮಾಹಿತಿ ನೀಡಿ ಲಾರಿಯನ್ನ ಮೇಲಕ್ಕೆತ್ತುವಲ್ಲಿ ಯಶಸ್ವಿಯಾಗಿದ್ದಾರೆ.







