suddibindu.in
ಅಂಕೋಲಾ: ಕಳೆದ ಇಪ್ಪತ್ತೈದು ದಿನಗಳ ಹಿಂದೆ ಶಿರೂರು ಗುಡ್ಡಕುಸಿತ ಉಂಟಾಗಿ ಸಾಕಷ್ಟು ಸಾವು ನೋವುಗಳು ಉಂಟಾಗಿದೆ. ಶಿರೂರು ಪಕ್ಕದಲ್ಲಿನ ಉಳುವರೆ ಗ್ರಾಮದಲ್ಲಿಯೂ ಸಹ ದೊಡ್ಡ ಮಟ್ಟದಲ್ಲಿ ಹಾನಿ ಉಂಟಾಗಿದೆ. ಈ ಎರಡು ಸ್ಥಳಕ್ಕೂ ನಾಳೆ ಅ.13ರಂದು ಧರ್ಮಸ್ಥಳದ ಧರ್ಮಾಧಿಕಾರಿಯಾಗಿರುವ ಡಾ. ವಿರೇಂದ್ರ ಹೆಗಡೆ ಅವರು ಆಗಮಿಸಲಿದ್ದಾರೆ.
ಶಿರೂರು ಗುಡ್ಡಕುಸಿತದಿಂದಾಗಿ ಹನ್ನೊಂದು ಮಂದಿ ಮೃತಪಟ್ಟಿದ್ದು, ಐದಕ್ಕೂ ಹೆಚ್ಚು ಮನೆಗಳು ನೆಲಸಮವಾಗಿದೆ. ಘಟನೆ ನಡೆದಿರುವ ಬಗ್ಗೆ ಆರಂಭದ ದಿನದಲ್ಲೇ ಘಟನೆಯ ಬಗ್ಗೆ ಮಾಹಿತಿ ಪಡೆದುಕೊಂಡಿರುವ ಡಾ. ವೀರೇಂದ್ರ ಹೆಗಡೆ ಅವರು ನಾಳೆ ಬೆಳಿಗ್ಗೆ 11ಗಂಟೆ ಸುಮಾರಿಗೆ ಧರ್ಮಸ್ಥಳದಿಂದ ನೇರವಾಗಿ ಶಿರೂರು ಗುಡ್ಡಕುಸಿತದಿಂದ ಮನೆ ಕಳೆದುಕೊಂಡಿರುವ ಉಳುವರೆ ಗ್ರಾಮಕ್ಕೆ ಭೇಟಿ ನೀಡಿ ಸಂತ್ರಸ್ತರ ಕಷ್ಟಗಳನ್ನ ತಿಳಿದುಕೊಳ್ಳಲಿದೆ.
ಇದನ್ನೂ ಓದಿ
- ಕಾರವಾರ ದೇವಭಾಗ ಬೀಚ್ನಲ್ಲಿ ಅದ್ಭುತ ನೋಟ! ರಾಶಿ ರಾಶಿ ಮೀನು ದಡಕ್ಕೆ
- Bigg Boss/ಬಿಗ್ ಬಾಸ್ ಮನೆಗೆ ತಾತ್ಕಾಲಿಕ ಬೀಗ ಜಡಿದ ಅಧಿಕಾರಿಗಳು
- “105 ವರ್ಷಗಳ ಬಳಿಕ ಕೆಡಿಸಿಸಿ ಬ್ಯಾಂಕ್ನ ಇತಿಹಾಸದಲ್ಲಿ ದಿಟ್ಟ ಮಹಿಳೆಯ ಹೊಸ ಅಧ್ಯಾಯ”
ಬಳಿಕ ಅಲ್ಲಿಂದ ಶಿರೂರು ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಏನು ಗುಡ್ಡಕುಸಿತವಾಗಿದೆ. ಅಲ್ಲಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ ಎನ್ನಲಾಗಿದೆ. ಘಟನೆಯಿಂದ ಮನೆ,ಮಠ,ಹಾಗೂ ಜೀವ ಹಾನಿ ಆಗಿರುವ ಕುಟುಂಬಕ್ಕೆ ಮುಂದಿನ ದಿನದಲ್ಲಿ ಟ್ರಸ್ಟ್ ಮೂಲಕ ನೆರವು ನೀಡುವ ಸಾಧ್ಯತೆ ಇದೆ.