suddibindu.in
ಶಿರಸಿ: ತಾಲೂಕಿನ ಬಿಸಲಕೊಪ್ಪ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಲಳಗಾಂವ ಗ್ರಾಮದಲ್ಲಿ ಕಾಡು ಕೋಣಗಳು ರೈತರ ಬೆಳೆ ಹಾನಿ ಮಾಡುತ್ತಿದ್ದು, ಕಾಡು ಕೋಣಗಳನ್ನ ಓಡಿಸಲು ರೈತರು ಅರಣ್ಯಾಧಿಕಾರಿಗಳ ಸಹಕಾರದೊಂದಿಗೆ ಪಟಾಕಿ ಸಿಡಿಲು ಮುಂದಾಗಿದ್ದಾರೆ.
ಕಳೆದ ಅನೇಕ ತಿಂಗಳುಗಳಿಂದ ಮಳಲಗಾಂವ ಅರಣ್ಯದ ಅಂಚಿನಲ್ಲಿರುವ ರೈತರ ಜಮೀನಿಗೆ ನುಗ್ಗುತ್ತಿರುವ ಕಾಡುಕೋಣಗಳು ಬೆಳೆದ ಭತ್ತ,ಕಬ್ಬು, ಜೋಳ, ಅಡಿಕೆ, ಬೆಳೆಯನ್ನು ಹಾಳು ಮಾಡುತ್ತಿವೆ. ಇದರಿಂದಾಗಿ ರೈತರಿಗೆ ಲಕ್ಷಾಂತರ ರೂಪಾಯಿ ನಷ್ಟ ಉಂಟಾಗುತ್ತಿದೆ. ಅದೇಷ್ಟೆ ಪ್ರಯತ್ನ ಮಾಡಿದರು ಬೆಳೆದ ಬೆಳೆಯನ್ನ ಉಳಿಸಿಕೊಳ್ಳು ರೈತರಿಂದ ಸಾಧ್ಯವಾಗತ್ತಿಲ್ಲ.
ಇದನ್ನೂ ಓದಿ
- Murder/200ರೂ ಕೂಲಿ ಹಣಕ್ಕೆ ಬೀದಿಯಲ್ಲಿ ಬಿತ್ತು ಹೆಣ : ಉತ್ತರ ಕನ್ನಡದಲ್ಲಿ ಭೀಕರ ಘಟನೆ
- ಕಡಲತೀರದಲ್ಲಿ ಜಿಂಕೆಯ ಮೃತದೇಹ ಪತ್ತೆ
- ಹಟ್ಟಿಕೇರಿಯಲ್ಲಿ ಗ್ರಾಮೀಣ ಕ್ರೀಡೆಗೆ ಜೀವ ತುಂಬಿದ ಕೇಸರುಗದ್ದೆ ಕ್ರೀಡಾಕೂಟ
ಕಾಡುಕೋಣಗಳ ದಾಳಿಯಿಂದ ಬೆಸೆತ್ತ ರೈತರು ಅರಣ್ಯ ಅಧಿಕಾರಿಗಳಿಗೆ ಮನವಿ ಮಾಡಿದರು. ಎಚೆತ್ತು ಕೊಂಡ ಅರಣ್ಯ ಅಧಿಕಾರಿಗಳು ಅರಣ್ಯ ಅಧಿಕಾರಿ ಬೋಜು ಚಾವ್ವಣ್ಣ ನೇತೃತ್ವದಲ್ಲಿ ಮತ್ತು ಅರಣ್ಯಇಲಾಖೆ ಸಿಬ್ಬಂದಿಗಳು ಹಾಗೂ ಮಳಲಗಾಂವ ಭಾಗದ ಸಾರ್ವಜನಿಕರ ಸಹಾಯದೊಂದಿಗೆ ಕಾಡು ಕೋಣಗಳನ್ನು ಬೇರೆ ಅರಣ್ಯ ಪ್ರದೇಶಕ್ಕೆ ಓಡಿಸಲು ಕಾಡಿನೊಳಗೆ ಹೋಗಿ ಪಟಾಕಿ ಸಿಡಿಸಿ ಓಡಿಸುವ ವಿಶಿಷ್ಟ ಕಾರ್ಯ ನಡೆಸಿದರು. ಈ ಸಂದರ್ಭದಲ್ಲಿ ಅರಣ್ಯಇಲಾಖೆ ಅಧಿಕಾರಿ ಬೋಜು ಚವ್ವಾನ,ಅವರ ಸಿಬ್ಬಂದಿಗಳು, ಮಲಳಗಾಂವ ಗ್ರಾಮದ ರೈತರು ಇದ್ದರು.