suddibindu.in
ಕುಮಟಾ : ಅಂಕೋಲಾ ತಾಲೂಕಿನ ಶಿರೂರು ಗುಡ್ಡಕುಸಿತದಿಂದಾಗಿ ಜಿಲ್ಲೆಯ ಜನ ಬೆಚ್ಚಿಬಿದ್ದಿದ್ದು, ಇದೀಗ ಹಲವೆಡೆ ಗುಡ್ಡಕುಸಿಯುವ ಆತಂಕ ಎದುರಾಗಿದೆ. ಈ ನಡುವೆ ಕುಮಟಾ ತಾಲೂಕಿ ಧಾರೇಶ್ವರ ಶಾಲೆಗೆ ಗುಡ್ಡಕುಸಿಯುವ ಭೀತಿ ಎದುರಾಗಿದ್ದು, ಅಪಾಯ ಎದುರಾದರೆ ಮಕ್ಕಳೆ ಹೊಣೆ ಯಾರು ಎನ್ನುವ ಪ್ರಶ್ನ ಎದುರಾಗಿದೆ.
ಕುಮಟಾ ತಾಲೂಕಿನಾದ್ಯಂತ ಇಂದು ಬೆಳಗ್ಗೆಯಿಂದ ಮಳೆ ಅಬ್ಬರ ಜೋರಾಗಿದ್ದು, ಜನ ಜೀವನ ಅಸ್ತವ್ಯವಾಗಿದೆ. ಮಳೆ ಇದೇ ರೀತಿಯಲ್ಲಿ ಮುಂದುವರೆದರೆ ಇನ್ನೂ ಹಲವು ಕಡೆ ಗುಡ್ಡಕುಸಿಯುವ ಸಾಧ್ಯತೆ ಇದೆ. ಅನೇಕ ಕಡೆಯಲ್ಲಿ ಶಾಲೆಯ ಅಕ್ಕಪಕ್ಕದಲೇ ಗುಡ್ಡಗಳು ಬಾಯ್ ತೆರೆದಿಕೊಂಡಿದೆ. ಧಾರೇಶ್ವರ ಜನತಾ ವಿದ್ಯಾಲಯದ ಸಮೀಪ ಇರುವ ಗುಡ್ಡ ಸಹ ಬಾಯ್ ಬಿಟ್ಟಿದ್ದು, ಯಾವುದೇ ಕ್ಷಣದಲ್ಲಿ ಕುಸಿತ ಉಂಟಾಗುವ ಸಾಧ್ಯತೆ ಇದೆ.ಈ ಬಗ್ಗೆ ಸ್ಥಳೀಯರು ಕಳೆದ ಒಂದು ವರ್ಷದಿಂದ ಶಿಕ್ಷಣ ಇಲಾಖೆಗೆ ಮನವಿ ಸಲ್ಲಿಸುತ್ತಾ ಬಂದಿದ್ದಾರೆ. ಇದುವರಗೆ ಸಮಸ್ಯೆಗ ಪರಿಹಾರ ದೊರೆತಿಲ್ಲವೆಂದು ಸ್ಥಳೀಯರು ಸುದ್ದಿ ಬಿಂದು ಡಿಜಿಟಲ್ ಗೆ ತಿಳಿಸಿದ್ದಾರೆ.
ಇದನ್ನೂ ಓದಿ
- Teacher suspended/ವಿದ್ಯಾರ್ಥಿಗೆ ಥಳಿಸಿದ ಪ್ರಕರಣ : ಶಿಕ್ಷಕಿ ಅಮಾನತು.
- Varamahalakshmi Festival, ಶ್ರಾವಣದ ಶುಕ್ರವಾರ, ಮನೆ ಮನೆಗಳಲ್ಲಿ ವರಮಹಾಲಕ್ಷ್ಮಿ ಭಕ್ತಿ ಸಡಗರ
- Teacher/ಪಾಠ ಕಲಿಯಲಿಲ್ಲ ಎಂಬ ಕಾರಣಕ್ಕೆ ವಿದ್ಯಾರ್ಥಿಗೆ ಥಳಿತ : ಬಾಸುಂಡೆ ಮೂಡಿಸಿದ ಶಿಕ್ಷಕಿ
ಈ ಹಿಂದೆ ಯಾರೋ “ಮಣ್ಣು ಕಳ್ಳರು” ಶಾಲೆಯ ಹಿಂಬಾಗದಲ್ಲಿ ಭಾರೀ ದೊಡ್ಡ ಪ್ರಮಾಣದಲ್ಲಿ ಗುಡ್ಡ ಕೊರೆದಿದ್ದರು. ಹೀಗಾಗಿ ಕಳೆದ ವರ್ಷದಿಂದ ಈ ಗುಡ್ಡದಲ್ಲಿ ಸಣ್ಣದಾಗಿ ಕುಸಿಯುತ್ತಲೆ ಇದೆ. ಆದರೆ ಈ ಭಾರೀ ಭಾರೀ ಮಳೆಯಾಗುತ್ತಿರುವ ಕಾರಣ ಗುಡ್ಡ ಇನ್ನಷ ಬಿರುಕು ಬಿಟ್ಟಿದೆ. ಹೀಗಾಗಿ ಅಲ್ಲಿನ ಜನರಲ್ಲಿ ಸಹಜವಾಗಿ ಗುಡ್ಡಕುಸಿಯುವ ಆತಂಕ ಎದುರಾಗಿದೆ. ಪ್ರೌಢಶಾಲೆ ಕನ್ನಡ ಮತ್ತು ಆಂಗ್ಲ ಮಾಧ್ಯಮ ಮತ್ತು ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಯಲ್ಲಿ ಒಟ್ಟು 416 ವಿದ್ಯಾರ್ಥಿಗಳು ವ್ಯಾಸಾಂಗ ಮಾಡುತ್ತಿದ್ದಾರೆ.
ಹೀಗಾಗಿ ಆದಷ್ಟು ಶೀಘ್ರದಲ್ಲಿ ಮುಂಜಾಗ್ರತವಾಗಿ ಸೂಕ್ತ ಕ್ರಮ ತೆಗೆದುಕೊಳ್ಳುವ ಮೂಲಕ ಮುಂದೆ ಆಗುವ ದುರಂತದಿಂದ ವಿದ್ಯಾರ್ಥಿಗಳನ್ನ ಪಾರು ಮಾಡಬೇಕೆಂದು ಸ್ಥಳೀಯರು ಹಾಗೂ ಶಾಲಾಭಿವೃದ್ದಿ ಕಮಿಟಿ ಸಂಬಂಧಿಸಿದ ಅಧಿಕಾರಿಗಳಲ್ಲಿ ಒತ್ತಾಯಿಸಿದ್ದಾರೆ.