suddibindu.in
ಅಂಕೋಲಾ : ಉತ್ತರಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಶಿರೂರು ಗುಡ್ಡಕುಸಿತ ಸ್ಥಳಕ್ಕೆ ಭೇಟಿದ ಸಚಿವ ಮಧು ಬಂಗಾರಪ್ಪ ಅವರು ಬಳಿಕ ಘಟನೆಯಲ್ಲಿ ನಾಪತ್ತೆಯಾಗಿರುವ ಜಗನ್ನಾಥ ನಾಯ್ಕ ಮನೆಗೆ ತೆರಳಿ ಸಾಂತ್ವನ ಹೇಳಿದ್ದರು
ಶಿರೂರು ಗುಡ್ಡಕುಸಿತದ ವೇಳೆ ಲಕ್ಷ್ಮಣ ನಾಯ್ಕ ಹೊಟೇಲ್‌ನಲ್ಲೆ ಇದ್ದ ಜಗನ್ನಾಥ ನಾಯ್ಕ ನಾಪತ್ತೆ ಆಗಿದ್ದರು. ಇದುವರಗೆ ಆತನ ಶವ ಸಹ ಪತ್ತೆಯಾಗಿಲ್ಲ.ಇಂದು ಘಟನಾ ಸ್ಥಳಕ್ಕೆ ಬಂದ ಸಚಿವ ಮಧು ಬಂಗಾರಪ್ಪ ಅವರು ಗುಡ್ಡಕುಸಿತವಾಗಿರುವ ಸ್ಥಳ ಪರಿಶೀಲನೆ ನಡೆಸಿದರು ಬಳಿಕ ಜಗನ್ನಾಥ ನಾಯ್ಕ ಅವರ ಮನೆಗೆ ತೆರಳಿ ಜಗನ್ನಾಥ ಪತ್ನಿ ಹಾಗೂ ಮೂವರು ಹೆಣ್ಣು ಮಕ್ಕಳಿಗೆ ಸಾಂತ್ವಾನ ಹೇಳಿದ ಸಚಿವರು ಘಟನೆಯಲ್ಲಿ ಸಿಲುಕಿರುವ ಕುಟುಂಬಕ್ಕೆ ಸರಕಾರದಿಂದ ಹೆಚ್ಚಿನ ಪರಿಹಾರ ಕೊಡಿಸುವುದಾಗಿ ಭರವಸೆ ನೀಡಿದ್ದಾರೆ. ಅಲ್ಲದೆ ಜಗನ್ನಾಥ ಕುಟುಂಬಕ್ಕೆ ವೈಯಕ್ತಿಕವಾಗಿ 1.5ಲಕ್ಷ ಹಣ ನೆರವು ಸಹ ನೀಡಿದರು.
ಇದನ್ನೂ ಓದಿ
- ಯಲ್ಲಾಪುರ ಬಳಿ ಭೀಕರ ರಸ್ತೆ ದುರಂತ: ಬಸ್–ಲಾರಿ ಡಿಕ್ಕಿ, ಮೂವರು ಸಾವು – ಏಳು ಮಂದಿ ಗಂಭೀರ”
- Murder/200ರೂ ಕೂಲಿ ಹಣಕ್ಕೆ ಬೀದಿಯಲ್ಲಿ ಬಿತ್ತು ಹೆಣ : ಉತ್ತರ ಕನ್ನಡದಲ್ಲಿ ಭೀಕರ ಘಟನೆ
- ಕಡಲತೀರದಲ್ಲಿ ಜಿಂಕೆಯ ಮೃತದೇಹ ಪತ್ತೆ
ಇನ್ನೂ ಗುಡ್ಡಕುಸಿತದಿಂದಾಗಿ ಉಳುವರೆ ಗ್ರಾಮದಲ್ಲಿ ಮನೆಕಳೆದುಕೊಂಡವರಿಗೆ ಶೀಘ್ರದಲ್ಲಿ ಬೇರೆಕಡೆಯಲ್ಲಿ ಮನೆಕಟ್ಟಿಸಿಕೊಂಡುವುದಾಗಿ ಭರವಸೆ ನೀಡಿದರು. ಬಳಿಕ ಮಾತನಾಡಿದ ಸಚಿವ ಮಧು ಬಂಗಾರಪ್ಪ ಅವರು ಜಗನ್ನಾಥ ಮೃತದೇಹ ಸಿಗದಿದ್ದರೂ ಸರ್ಕಾರದ ನಿಯಮಗಳನ್ವಯ NDRFಅಡಿ ಸರ್ಕಾರದಿಂದ ಸಿಗಬೇಕಾದ ನೆರವು ಒದಗಿಸುವ ಭರವಸೆ ನೀಡಿದರು. ಗುಡ್ಡಕುಸಿದ ನೆರೆಯಿಂದಾಗಿ ಮನೆ ಕಳೆದುಕೊಂಡ ಉಳುವರೆಯ 6 ಕುಟುಂಬಗಳಿಗೂ ಸರ್ಕಾರದಿಂದ ಮನೆ ಸಿಗಲಿದೆ. ಸಂಪೂರ್ಣ ಮನೆ ಹಾನಿಯಾದವರಿಗೆ ಹಿಂದಿನ ಸರ್ಕಾರದಲ್ಲಿ ಸೂಕ್ತ ಪರಿಹಾರ ಒದಗಿಸಿರಲಿಲ್ಲ. ನಮ್ಮ ಸರ್ಕಾರದಲ್ಲಿ ಮನೆ ಕಳೆದುಕೊಂಡವರಿಗೆ ಸೂರು ಒದಗಿಸಲಾಗುವುದು.1.20 ಲಕ್ಷ ಹಣ ನೀಡುವ ಜೊತೆಗೆ ಮನೆ ಮಂಜೂರು ಮಾಡಿಕೊಡುತ್ತೇವೆ.ಸಂಕಷ್ಟದ ಸಂದರ್ಭದಲ್ಲಿ ಸರ್ಕಾರ ಸಂತ್ರಸ್ತರ ನೆರವಿಗೆ ನಿಲ್ಲಲಿದೆ. ವೈಯಕ್ತಿಕವಾಗಿಯೂ ಜಗನ್ನಾಥ ಕುಟುಂಬಕ್ಕೆ ನೆರವು ನೀಡಲಾಗುವುದು. ಇಂತಹ ಸಂದರ್ಭದಲ್ಲಿ ಸರ್ಕಾರ ಯಾವುದೇ ರಾಜಕೀಯ ಮಾಡದೇ ಕರ್ತವ್ಯ ನಿಭಾಯಿಸುತ್ತದೆ ಎಂದರು
ಸಾಯಿ ಗಾಂವ್ಕರ್ ಅವರಿಂದಲ್ಲೂ ಸಹಾಯ ಹಸ್ತ
ಶಿರೂರು ಗುಡ್ಡಕುಸಿತದಲ್ಲಿ ನಾಪತ್ತೆಯಾಗಿರುವ ಜಗನ್ನಾಥ ನಾಯ್ಕ ಅವರ ಮನೆಗೆ ಸಚಿವ ಮಧು ಬಂಗಾರಪ್ಪ ಅವರು ಭೇಟಿ ನೀಡಿ 1.5 ಲಕ್ಷ ನೇರವು ನೀಡಿದರು. ಈ ವೇಳೆ ಹಾಜರಿದ್ದ ಕಾಂಗ್ರೆಸ್‌ನ ಜಿಲ್ಲಾಧ್ಯಕ್ಷರಾಗಿರುವ ಸಾಯಿ ಗಾಂವ್ಕರ ಸಹ ವೈಯಕ್ತಿಕವಾಗಿ ಜಗನ್ನಾಥ ನಾಯ್ಕ ಕುಟುಂಬಕ್ಕೆ 50ಸಾವಿರ ಸಹಾಯ ಧನ ನೀಡಿದರು. ಜೊತೆಗೆ ಮುಂದೆ ಸಹ ತಾವು ನಿಮ್ಮ ಜೊತೆ ಇರುವುವುದಾಗಿ ಸಾಯಿ ಗಾಂವ್ಕರ್ ಜಗನ್ನಾಥ ಕುಟುಂಬಕ್ಕೆ ಭರವಸೆ ನೀಡಿದರು.
ಸಚಿವರಿಗೆ ಶಾಸಕ ಭೀಮಣ್ಣ ನಾಯ್ಕ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಾಯಿ ಗಾಂವ್ಕರ, ಪ್ರದೀಪ ನಾಯಕ, ಸೇರಿದಂತೆ ಮೊದಲಾದವರು ಹಾಜರಿದ್ದರು.