suddibindu.in
ಅಂಕೋಲಾ: ಕಳೆದ ಎಂಟುದಿನಗಳ ಹಿಂದೆ ಶಿರೂರು ಬಳಿ ಗುಡ್ಡಕುಸಿತವಾಗಿ ಹನ್ನೊಂದು ಜನ ಮೃತಪಟ್ಟಿದ್ದು ಇಂದು ಬೆಳಿಗ್ಗೆ ಓರ್ವ ಮಹಿಳೆಯ ಶವ ಗಂಗಾವಳಿ ನದಿಯ ಗಂಗೆಕೋಳ್ಳ ನದಿ ತೀರದಲ್ಲಿ ಪತ್ತೆಯಾಗಿದೆ.
ಶಿರೂರು ಗುಡ್ಡಕುಸಿತದಿಂದ ಗಂಗಾವಳಿ ನದಿಯ ಇನ್ನೊಂದು ಪಕ್ಕದಲ್ಲಿದ್ದ ಉಳುವರೆ ಗ್ರಾಮದ ಸುಮಾರು ಐದಕ್ಕೂ ಹೆಚ್ಚು ಮನೆಗಳು ನೆಲಸಮವಾಗಿ ಸಣ್ಣೀ ಗೌಡ ನದಿ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದು, ಇನ್ನೂ ಹತ್ತಕ್ಕೂ ಹೆಚ್ಚು ಮಂದಿ ಆಸ್ಪತ್ರೆಗೆ ದಾಖಲಾಗಿದ್ದರು.
ಇದನ್ನೂ ಓದಿ
- ಬಾವಿಗೆ ಹಾರಿ ಯುವತಿ ಆತ್ಮಹತ್ಯೆ : ಗುಂಡಿಬೈಲ್ನಲ್ಲಿ ದುರ್ಘಟನೆ
- ಆಶ್ರಯದಿಂದ ಅಕ್ಷಯವರೆಗೆ—ಜನರ ಜೀವನ ಬದಲಿಸಿದ ಬಂಗಾರಪ್ಪ ಅವರ ಯೋಜನೆಗಳು ಇಂದಿಗೂ ಜೀವಂತ
- ಕೆಡಿಸಿಸಿ ಬ್ಯಾಂಕ್ ನಿರ್ದೇಶಕ ಮಂಡಳಿ ಚುನಾವಣೆ : ಶಿವರಾಮ ಹೆಬ್ಬಾರ್ ಬಣಕ್ಕೆ ಗೆಲುವು
ನಾಪತ್ತೆಯಾಗಿದ್ದ ಸಣ್ಣೀ ಗೌಡ ಪತ್ತೆಗಾಗಿ ಕಳೆದ ಏಂಟು ದಿನಗಳಿಂದ ನಿರಂತರವಾಗಿ ಕಾರ್ಯಚರಣೆ ಮಾಡಲಾಗಿದ್ದು, ಇಂದು ಬೆಳಿಗ್ಗೆ ಆಕೆಯ ಶವ ಗಂಗೆಕೋಳ್ಳದ ನದಿ ತೀರದಲ್ಲಿ ಪತ್ತೆಯಾಗಿದೆ.ಸ್ಥಳಕ್ಕೆ ಸ್ಥಳೀಯ ಪೊಲೀಸರು,NDRF-SDRF ತಂಡಗಳು ಆಗಮಿಸಿದ್ದು ಮೃತ ದೇಹವನ್ನ ಹೊರ ತೆಗೆಯಲಾಗಿದೆ.




