www.suddibindu in
ಕುಮಟಾ: ರಾಜ್ಯ ಸರಕಾರ ಸರಕಾರಿ ಕನ್ನಡ ಪ್ರಾಥಮಿಕ ಶಾಲೆಗಳಲ್ಲಿ ಹಾಲಿ ಇರುವ ಕನ್ನಡ ಮಾಧ್ಯಮ ತರಗತಿಗಳ ಜತೆಗೆ ಆಂಗ್ಲಮಾಧ್ಯಮಗಳನ್ನ ಆರಂಭಿಸಿದ್ದು, ಈ ಬಾರಿ ಶತಮಾನ ಪೊರೈಸಿರುವ ಬರ್ಗಿ ಶಾಲೆ ಸೇರಿ ತಾಲೂಕಿನ ಮೂರು ಶಾಲೆಗಳಲ್ಲಿ ಹೊಸದಾಗಿ ಆಂಗ್ಲಮಾಧ್ಯಮ ಆರಂಭಕ್ಕೆ ಸರಕಾರ ಹಸಿರು ನಿಶಾನೆ ತೋರಿದೆ.
ಸರಕಾರಿ ಶಾಲೆಯಲ್ಲಿ ಆಗ್ಲಮಾಧ್ಯ ಆರಂಭವಾದ ದಿನದಿಂದಲ್ಲೆ ಬರ್ಗಿ ಶಾಲೆಗೂ ಒಂದನೆ ತರಗತಿಯಿಂದ ಆಗ್ಲ ಮಾಧ್ಯಮ ತರಗತಿ ಆರಂಭಿಸಬೇಕು ಎನ್ನುವುದು ಎಲ್ಲರ ಒತ್ತಾಯವಾಗಿತ್ತು. ಆದರೆ ಕಾರಣಾಂತರಗಳಿಂದ ಆರಂಭದಲ್ಲಿ ಸಿಕ್ಕಿರಲಿಲ್ಲ. ಇದೀಗ ಬರ್ಗಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಈ ವರ್ಷದಿಂದ ಆಗ್ಲ ಮಾಧ್ಯಮ ಶಾಲೆ ಆರಂಭವಾಗಿದೆ.
ಇದನ್ನೂ ಓದಿ
- ರೇಬೀಸ್ ಹೋರಿಯಿಂದ ರಂಪಾಟ: ವ್ಯಕ್ತಿಗೆ ತಿವಿತ
- 85 ಸಾವಿರ ನಗದು, ಚಿನ್ನ ಕದ್ದ ಆರೋಪಿ ಬಂಧನ
- ಅರ್ಪಿತಾಗೆ ವಿಟಿಯುನಿಂದ ಡಾಕ್ಟರೇಟ್
ಈಗಾಗಲೇ ತರಗತಿ ಸಹ ಆರಂಭವಾಗಿದ್ದು, ವಿದ್ಯಾರ್ಥಿಗಳ ಸಂಖ್ಯೆಯು ಸಹ ಉತ್ತಮವಾಗಿಯೇ ಇದೆ. ಸದ್ಯ ಬರ್ಗಿ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲ ಸರಕಾರದ ಆಗ್ಲಮಾಧ್ಯಮ ಶಾಲೆಗಳು ಒಂದೆ ಇದೆ.ಯಾರೇ ತಮ್ಮ ಮಕ್ಕಳನ್ನ ಸರಕಾರಿ ಆಗ್ಲಮಾಧ್ಯಮ ತರಗತಿಗೆ ಸೇರ್ಪಡೆ ಮಾಡಿಸಲು ಇನ್ನೂ ಸಹ ಕಾಲಾವಕಾಶ ಇದೆ..