www.suddibindu.in
Karwar:ಕಾರವಾರ: ನಗರದ ಲಂಡನ್ ಸೇತುವೆಯ ಬಳಿ ಇಂದು ಶುಕ್ರವಾರ ಮೂರು ಕಾರುಗಳ ನಡುವೆ ಸರಣಿ ಅಪಘಾತ ಸಂಭವಿಸಿದ್ದು ಕಾರುಗಳು ಜಖಂ ಗೊಂಡಿವೆ.
ನಗರದ ರಾಷ್ಟ್ರೀಯ ಹೆದ್ದಾರಿ 66 ರ ಟನಲ್ ಬಳಿ ಘಟನೆ ನಡೆದಿದೆ. ಬಿಣಗಾ ಕಡೆಯಿಂದ ಬರುವಾಗ ಲಂಡನ್ ಸೇತುವೆಯ ಬಳಿ ಗೋವಾ ರಾಜ್ಯದ ನೊಂದಣಿ ಇರುವ ಕಾರಿನ ಚಾಲಕ ಬ್ರೇಕ್ ಹಾಕಿದ್ದಾನೆ. ತಕ್ಷಣ ಅದರ ಹಿಂಬದಿ ಇದ್ದ ಕರ್ನಾಟಕ ನೊಂದಣಿಯ ತವೇರಾ ಕಾರಿನ ಚಾಲಕ ಕೂಡ ಬ್ರೇಕ್ ಹಾಕಿ ವೇಗವನ್ನು ಕಡಿಮೆ ಮಾಡಿದ್ದಾನೆ.
ಇದನ್ನೂ ಓದಿ
- ಬೆಂಕಿ ಅವಘಡ : ಎ.ಎಸ್.ಪಿ ಮಹಾಂತೇಶ್ವರ ಜಿದ್ದಿ ಗಂಭೀರ
- ಹೆದ್ದಾರಿಯಲ್ಲಿ ಸ್ಕೂಟಿ–ಬೈಕ್ ಅಪಘಾತ: ಓರ್ವ ಸಾವು
- ಪೋಕ್ಸೋ ಪ್ರಕರಣದಲ್ಲಿ ಯಡಿಯೂರಪ್ಪಗೆ ಹೈಕೋರ್ಟ್ನಿಂದ ಬಿಗ್ ಶಾಕ್
ಆದರೆ ಹಿಂದಿನಿಂದ ಬಂದ ತೆಲಂಗಾಣ ನೊಂದಣಿಯ ಮಹೇಂದ್ರಾ ಕಾರು ಚಾಲಕನ ನಿಯಂತ್ರಣಕ್ಕೆ ಸಗದೇ ತವೇರಾ ಕಾರಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ತವೇರಾ ಕಾರು ಮುಂದಿನ ಕಾರಿಗೆ ಬಡಿದು ಮೂರು ಕಾರುಗಳು ಕೂಡ ಜಖಂ ಆಗಿವೆ.ಅದೃಷ್ಟವಶಾತ್ ಅಪಘಾತದಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಸ್ಥಳಕ್ಕೆ ಕಾರವಾರದ ಸಂಚಾರ ಠಾಣೆಯ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.





