ಸುದ್ದಿ, ಜಾಹೀರಾತಿಗಾಗಿ ಸಂಪರ್ಕಿಸಿ :9916127361
www.suddibindu.in
Kumta: ಕುಮಟಾ : ಪಟ್ಟಣದ ಜನ ಬಹಳವಾಗಿ ನಿರೀಕ್ಷಿಸುತ್ತಿದ್ದ ಟ್ರೆಂಡ್ಸ್ ಬಟ್ಟೆಯಂಗಡಿ ಕುಮಟಾದಲ್ಲಿ ಸದ್ದಿಲ್ಲದೇ ಗುರುವಾರ ಆರಂಭವಾಗಿದೆ. ಆದರೆ ಟ್ರೆಂಡ್ಸ್ ಆರಂಭವಾದ ಮೊದಲ ದಿನವೇ ಇಲ್ಲಿಗೆ ಬಂದ ಜನ ಬಟ್ಟೆಗಳ ಮೇಲಿನ ದರಪಟ್ಟಿಗಳನ್ನು ನೋಡಿ ಬರಿಗೈಯಲ್ಲಿ ಮನೆಗೆ ತೆರಳಿದ್ದಾರೆ.
ಕುಮಟಾದ ಟ್ರೆಂಡ್ಸ್ ಪಬ್ಲಿಸಿಟಿ ಇಲ್ಲದೆ ಆರಂಭವಾದರೂ ಸಹ ಜನ ಶಾಪಿಗೆ ಬಂದಿದ್ದಾರೆ. ಯಾಕೆಂದರೆ ಇಲ್ಲಿನ ಜನ ತಮಗೆ ಕಡಿಮೆ ದರದಲ್ಲಿ ಬಹು ವಿಧದ ಡಿಸೈನ್ ಬಟ್ಟೆಗಳು ಸಿಗುತ್ತವೆ ಎಂದು ನಿರೀಕ್ಷೆಯಲ್ಲಿದ್ದರು. ಆದರೆ ಮೊದಲ ದಿನವೇ ಜನರ ನಿರೀಕ್ಷೆ ಹುಸಿಯಾಗಿದೆ.
ಇದನ್ನೂ ಓದಿ
- ಅನನ್ಯಾ ನನ್ನ ಮಗಳಲ್ಲ : ಎಸ್ಐಟಿ ಎದುರು ಕಣ್ಣೀರು ಹಾಕಿದ ಸುಜಾತಾ ಭಟ್
- ರಸ್ತೆ ಬಿಟ್ಟು ಚಹಾ ಅಂಗಡಿಗೆ ಬಂದ ಬಸ್ : ಹೆಗಡೆ ರಸ್ತೆಯಲ್ಲಿ ಘಟನೆ
- School holiday/ ನಾಳೆ ಶಾಲೆ-ಅಂಗನವಾಡಿಗೆ ರಜೆ ಘೋಷಣೆ
ಬಟ್ಟೆಯ ದರದ ಬಗ್ಗೆ ಸುದ್ದಿಬಿಂದು'' ಖುದ್ದು ಮಂಗಳೂರು ಮೂಲದ ಶಾಪ್ ಮೆನೇಜರ್ ಅವರಲ್ಲಿ ವಿಚಾರಿಸಿದಾಗ
ಈಗಾಗಲೇ ಕೆಲ ಗ್ರಾಹಕರು ಬೆಲೆ ದುಬಾರಿ ಎಂದು ಹೇಳಿಹೋಗಿದ್ದಾರೆ. ಆದರೆ ನಮಗೆ ಬಂದ ರೇಟ್ ಟ್ಯಾಗನ್ನು ನಾವು ಹಾಕಿದ್ದೇವೆ. ಇದರಲ್ಲಿ ನಮ್ಮದೆನೂ ಇಲ್ಲ. ನಾವು ಗ್ರಾಹಕರ ಈ ಅಭಿಪ್ರಾಯವನ್ನು ನಮ್ಮ ಮೇಲಾಧಿಕಾರಿಗಳಿಗೆ ತಿಳಿಸುತ್ತೇವೆ” ಎಂದು ತಿಳಿಸಿದ್ದಾರೆ.
ಕುಮಟಾದಲ್ಲಿ ಉತ್ತಮ ಶಾಪಿಂಗ್ ಮಾಲ್ ಇಲ್ಲದ ಕಾರಣ ಫ್ಯಾನ್ಸಿ ಪ್ರಿಯ ಗ್ರಾಹಕರು ಟ್ರೆಂಡ್ಸ್ ಓಪನ್ ಆಗುವುದನ್ನೇ ಹಬ್ಬದಂತೆ ಕಾಯುತ್ತಿದ್ದರು. ಆದರೆ ಮೊದಲ ದಿನವೇ ಚಾತಕ ಪಕ್ಷಿಯಂತೆ ಕಾಯುತ್ತಿದ್ದ ಗ್ರಾಹಕರ ನಿರೀಕ್ಷೆಯನ್ನು ಟ್ರೆಂಡ್ಸ್ “ದುಬಾರಿ ದರ” ಹುಸಿ ಮಾಡಿದೆ.
ನಾನು ಭಟ್ಕಳ, ಅಂಕೋಲಾ, ಶಿರಸಿ, ಬೆಳಗಾವಿ, ಹುಕ್ಕೇರಿ, ಮಂಗಳೂರು ಹಾಗೂ ಇನ್ನೂ ಅನೇಕ ಟ್ರೆಂಡ್ಸ್ ಶಾಪಲ್ಲಿ ವ್ಯಾಪಾರ ಮಾಡಿದ್ದೇನೆ. ಆದರೆ ಯಾವ ಶಾಪಲ್ಲೂ ದರ ಇಷ್ಟು ದುಬಾರಿ ಇರಲಿಲ್ಲ. ಕುಮಟಾ ಟ್ರೆಂಡ್ಸ್ ಶಾಪಲ್ಲಿ ಈ ದರ ಪಟ್ಟಿ ನೋಡಿ ನನಗೆ ಶಾಕ್ ಆಗಿದೆ. ಇತರೇ ಅಂಗಡಿಗೆ ಹೋಲಿಸಿದರೆ ಇಲ್ಲಿ ಶರ್ಟೊಂದರ ಬೆಲೆ ಕನಿಷ್ಟ 300 ರೂಪಾಯಿ (ಹೆಚ್ಚು) ವ್ಯತ್ಯಾಸ ಇದೆ. ಇದೇ ಕ್ವಾಲಿಟಿಯ (ಹಾಫ್ ಪ್ಯಾಂಟ್)
”ಶಾಟ್ರ್ಸ್ “ಜುಡಿಯೋ ಶಾಪಲ್ಲಿ 499 ಇದ್ದರೆ ಟ್ರೆಂಡ್ಸ್ ಶಾಪಲ್ಲಿ ಅದರ ಬೆಲೆ 699 ಇದೆ. ಇದು ನೇರ ಕುಮಟಾ ಗ್ರಾಹಕರಿಗೆ ಟ್ರೆಂಡ್ಸ್ ಟೋಪಿ ಹಾಕಿದಂತೆ” ಎಂದು ಕುಮಟಾದ ಗ್ರಾಹಕರು ಆರೋಪಿಸಿದ್ದಾರೆ.
ಇನ್ನಾದರೂ ಟ್ರೆಂಡ್ಸ್ ಟೀಂ ಸಮಾಲೋಚಿಸಿ ಕುಮಟಾದ ಜನತೆಗೆ ಆಫರ್ ದರ ನಿಗದಿ ಮಾಡುತ್ತದೋ ಅಥವಾ ಗ್ರಾಹಕರಿಲ್ಲದೇ ಬಿಕೋ ಎನ್ನುತ್ತದೋ ಕಾದು ನೋಡಬೇಕಿದೆ