suddibindu.in
ಕುಮಟಾ:ತಾಲೂಕಿನ ಕೋಡ್ಕಣಿ ಗ್ರಾಮದಲ್ಲಿ ಒಣಗಿದ ಮರ ವಿದ್ಯುತ್ ಕಂಬದ ಮೇಲೆ ಬಿದ್ದು ಎರಡು ಕಂಬಗಳು ನೆಲಕ್ಕುರುಳಿದ್ದು, ಇನ್ನಷ್ಟು ಕಂಬಗಳು ಯಾವುದೇ ಕ್ಷಣದಲ್ಲಿ ನೆಲಕ್ಕುರುವ ಸಾಧ್ಯತೆ ಹೆಚ್ಚಾಗಿದ್ದು, ಆದರೆ ಸಂಬಂಧಿಸಿದ ಅಧಿಕಾರಿಗಳು ಸಾರ್ವಜನಿಕರ ಸಮಸ್ಯೆ ಸ್ಪಂಧಿಸುತ್ತಿಲ್ಲ ಎನ್ನುವ ಆರೋಪ ಸ್ಥಳೀಯರಿಂದ ಕೇಳಿ ಬರುತ್ತಿದೆ.
ಮಳೆಗಾಲ ಪ್ರಾರಂಭದಿಂದಲೂ ವಿದ್ಯುತ್ ಸಂಪರ್ಕ ನಿಡುವಲ್ಲಿ ವಿಫಲವಾಗುತ್ತಿರುವ ಕುಮಟಾ KEB ಅಧಿಕಾರಿಗಳು ಜನರ ಮಾತನ್ನು ನಿರ್ಲಕ್ಷಿಸಿ ತಮಗೆ ಸಿಕ್ಕ ಆಸನದಲ್ಲಿ ಜಡ್ಡು ಹಿಡಿದು ಕುತಿದ್ದಾರೆ.ಜನರು ಸಮಸ್ಯೆಗಳ ಬಗ್ಗೆ ಕರೆ ಮಾಡಿದರೆ ಪೋನ್ ಸ್ವೀಕರಿಸಲು ನಮಗೆ ಸಮಯವಿಲ್ಲ,ನಿಮ್ಮದೊಂದೇ ಸಮಸ್ಯೆ ನೋಡುತ್ತಾ ಕುಳಿತರೆ ಹೇಗೆ ಎಂಬ ಹಾರಿಕೆ ಉತ್ತರ ಅಧಿಕಾರಿಗಳಿಂದ ಬರುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಇದನ್ನೂ ಓದಿ
- ಅಧ್ಯಯನಪೂರ್ಣ ವರದಿಗಾರಿಕೆ ಅಗತ್ಯ- ಪತ್ರಕರ್ತರ ಶ್ರಮ ದೊಡ್ಡದು : ಜಿಲ್ಲಾಧಿಕಾರಿ ಲಕ್ಷ್ಮಿಪ್ರಿಯಾ
- ಜನಸ್ನೇಹಿ ಪರಿಸರಸ್ನೇಹಿ ‘ಗಣಪ’
- Keni Port/ಕೇಣಿ ಬಂದರು ಅಹವಾಲು ಸಭೆಯಲ್ಲಿ ದಬ್ಬಾಳಿಕೆ – ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ
‘ಐದು ತಿಂಗಳ ಹಿಂದೆಯೇ ಅಪಾಯದಲ್ಲಿರುವ ಒಣಗಿರುವ ಮರ ತೆರವು ಗೊಳಿಸುವಂತೆ ಸ್ಥಳಿಯರೊಬ್ಬರು ಗ್ರಾಮಪಂಚಾಯತ ಗಮನಕ್ಕೆ ತಂದಿದ್ದು, ಪಂಚಾಯತದವರನ್ನ ಕೇಳಿದರೆ ತಾವು ಈ ವಿಚಾರವನ್ನ ಈಗಗಾಲೆ KEB ಅವರ ಗಮನಕ್ಕೆ ತಂದಿದ್ದೆವೆ ಎನ್ನುತ್ತಿದ್ದಾರೆ. .ಆದರೆ ಮಳೆಗಾಲ ಸಮಿಪಿಸುವ ವರೆಗೆ ಜನರ ಸಮಸ್ಯೆಗೆ ಸ್ಪಂದಿಸದ KEB ಮರ ತೆಗೆಯುವುದು ನಮ್ಮ ಕೆಲಸವಲ್ಲ.ಕಂಬದ ಮೇಲೆ ಬಿದ್ದರೆ ನಾವೇನು ಮಾಡುವುದು ಎಂಬ ಹಾರಿಕೆ ಉತ್ತರ ನೀಡಿ ಕೈ ನುಣುಚಿಕೊಳ್ಳುತ್ತಿದ್ದಾರೆನ್ನಲಾಗಿದೆ.ಇದು, ದಿನದಲ್ಲಿ 10 ಗಂಟೆಯೂ ವಿದ್ಯುತ್ ಸಂಪರ್ಕ ನೀಡಲಾಗದ ಹೆಸ್ಕಾಂನ ತಪ್ಪೇ ಅಥವಾ ಜಡ್ಡು ಹಿಡಿದು ಕುರ್ಚಿಯಲ್ಲಿ ಕುತು ತಮ್ಮ ಕೆಲಸವನ್ನೇ ಮರೆತಿರುವ ಇಂತ ಅಧಿಕಾರಿಗಳ ತಪ್ಪೇ ಅಂತ ಅರ್ಥವಾಗದ ಪರಿಸ್ಥಿತಿಯಲ್ಲಿ ಸಾರ್ವಜನಿಕರು ಗೊಂದಲಕ್ಕಿಡಾಗಿದ್ದಾರೆ.
ಇನ್ನೂದರೂ ಸಂಬಂಧಿಸಿದ ಹಿರಿಯ ಅಧಿಕಾರಿಕಾರಿಗಳು ಸಾರ್ವಜನಿಕರ ಸಮಸ್ಯೆ ಸ್ಪಂಧನೆ ನೀಡತ್ತಾರ ಇಲ್ಲ. ಹಾರಿಕೆ ಉತ್ತರ ನೀಡುವುದರಲ್ಲೆ ಕಾಲ ಕಳೆಯಲಿದ್ದಾರ ಎನ್ನುವುದನ್ನ ಕಾದು ನೋಡಬೇಕಿದೆ.
ಮರ ಕಡಿಯುವ ಕೆಲಸ ನಮ್ಮದಲ್ಲಿ
ಲೈನ್ ಸಂಪರ್ಕ ನೀಡುವುದಷ್ಟೇ ನಮ್ಮ ಕೆಲಸ.ಲೈನ್ ಮೇಲೆ ಬಿಳುವಂತ ಹತ್ತಕ್ಕೂ ಹೆಚ್ಚು ಮರಗಳು ಈ ರಸ್ತೆಯ ಅಕ್ಕ ಪಕ್ಕದಲ್ಲಿದೆ.ಲೈನ್ ಮೇಲೆ ಬಿದ್ದು ಕಂಬ ಮುರಿದರೆ ಬೇರೆ ಕಂಬ ಹಾಕುತ್ತೇವೆ.ಮರ ಬೇಕಾದರೆ ನಿವೇ ತೆಗೆಸಿಕೊಳ್ಳಿ.ಅದು ನಮ್ಮ ಇಲಾಖೆಗೆ ಸಂಬಂದಿಸುವುದಿಲ್ಲ.
ಭರತ್ ಮಿರ್ಜಾನ್ ಲೈನ್ ಮೆನ್