suddibindu.in
ಕುಮಟಾ : ತಾಲೂಕ ಆಡಳಿತ ಸೌಧ ಕಟ್ಟಡ ಉದ್ಘಾಟನೆಯಾಗಿ ಒಂದು ವರ್ಷ ಕಳೆದರು ನೂತನ ಕಟ್ಟಡಕ್ಕೆ ಸ್ಥಳಾಂತರವಾಗಬೇಕಾದ ಸಬ್ ರಿಜಿಸ್ಟರ್ ಕಛೇರಿ ಮಾತ್ರ ಸ್ಥಳಾಂತರವಾಗದೆ ಇರುವುದು ಹಲವರ ಹಲವು ಅನುಮಾನಕ್ಕೆ ಕಾರಣವಾಗಿದೆ.
ಕಂದಾಯ ಇಲಾಖೆ ಸಂಬಂಧಿಸಿದ ಎಲ್ಲಾ ಕಚೇರಿಗಳು ಜನ ಸಾಮಾನ್ಯರಿಗೆ ಒಂದೆ ಕಡೆಯಲ್ಲಿ ಸಿಗುವಂತಾಗಬೇಕೆಂದು ಸರಕಾರ 12ಕೋಟಿ ವೆಚ್ಚದಲ್ಲಿ ಕುಮಟಾದಲ್ಲಿ ತಾಲೂಕಾ ಆಡಳಿತ ಸೌಧ ನಿರ್ಮಾಣ ಮಾಡಿದೆ.ನೂತವಾದ ತಾಲೂಕಾ ಆಡಳಿತ ಕಚೇರಿ ನಿರ್ಮಾಣ ಮಾಡಿ ಉದ್ಘಾಟನೆ ಕೂಡ ಆಗಿದೆ. ಆದರೆ ಹಳೆಯ ಕಚೇರಿಯಲ್ಲಿ ಎಲ್ಲಾ ಕಚೇರಿಗಳು ಹೊಸ ಕಟ್ಟಡಕ್ಕೆ ಸ್ಥಳಾಂತರವಾದರೂ ಜನರಿಗೆ ತೀರಾ ಅವಶ್ಯವಾಗಿರುವ ಸಬ್ ರಿಜಿಸ್ಟರ್ ಕಚೇರಿ ಇನ್ನೂ ಕತ್ತಲೆಯ ಕೋಣೆಯಲ್ಲೆ ತನ್ನ ಕಾರ್ಯನಿರ್ವಹಣೆ ಮಾಡುತ್ತಿದೆ.
ಇದನ್ನೂ ಓದಿ
- ಕಾಸರಗೋಡು ಬಳಿ ಪ್ಲೈವುಡ್ ಕಾರ್ಖಾನೆಯಲ್ಲಿ ಭಾರೀ ಸ್ಫೋಟ – ಓರ್ವ ಕಾರ್ಮಿಕ ಸಾವು, ಹಲವರಿಗೆ ಗಾಯ
- ಕರ್ನಾಟಕದಲ್ಲಿ ಬಿಜೆಪಿ ಹೊಸ ರಾಜಕೀಯ ಸಮೀಕರಣ: ಕುಮಾರಸ್ವಾಮಿ ಸುಪ್ರಿಂ
- ಹಳಿಯಾಳದಲ್ಲಿ ಕಬ್ಬು ಬೆಳೆಗಾರರ ಬೃಹತ್ ಪ್ರತಿಭಟನೆ — ಹೆದ್ದಾರಿ ತಡೆದು ಆಕ್ರೋಶ
ಹೊಸ ಕಟ್ಟಡದಲ್ಲಿ ಸಬ್ ರಿಜಿಸ್ಟರ್ ಕಚೇರಿಗಾಗಿ ಪ್ರತ್ಯೇಕ ಕೊಠಡಿಯನ್ನ ಮಾಡಿ ನಾಮಫಲಕ ಕೂಡ ಅಳವಡಿಸಲಾಗಿದೆ. ಆದರೆ ಈ ಕೊಠಡಿ ಸದಾ ಬೀಗ ಜಡಿದುಕೊಂಡೆ ಇದೆ.ಮೂಲಗಳ ಮಾಹಿತಿ ಪ್ರಕಾರಣ ಆ ಕೊಠಡಿಯಲ್ಲಿ ಹೆಚ್ಚಿನ ಬೆಳಕು ಇರುವ ಕಾರಣ ಹಳೆ ಕಚೇರಿಯಿಂದ ಹೊಸ ಕಟ್ಟಡಕ್ಕೆ ಬರಲು ಅಧಿಕಾರಿಗಳು ಮನಸ್ಸು ಮಾಡುತ್ತಿಲ್ಲ ಎನ್ನುವ ಆರೋಪವಿದೆ.ಸಬ್ ರಿಜಿಸ್ಟರ್ ಕಚೇರಿ ಮಾತ್ರ ಯಾಕೆ ಕತ್ತಲೆಯಿಂದ ಇರಬೇಕು ಎನ್ನುವುದನ್ನ ಸಾಮಾನ್ಯವಾಗಿ ಬಹುತೇಕ ಮಂದಿ ಅರ್ಥಮಾಡಿಕೊಂಡಿದ್ದಾರೆ.
ಈಗ ಇರುವ ಕಟ್ಟಡದಲ್ಲಿ ಈ ಕಚೇರಿ ಇರುವ ಕಾರಣ ಇಲ್ಲೆಗೆ ಬರುವ ವಿಕಲಚೇತನರು,ವೃದ್ಧರು ನೆಲಮಹಡಿಯಲ್ಲಿರುವ ಸಬ್ ರಿಜಿಸ್ಟರ್ ಕಚೇರಿಗೆ ಕೆಳಗೆ ಇಳಿದು ಹತ್ತುವುದು ದೊಡ್ಡ ಸಮಸ್ಯೆ ಆಗುತ್ತಿದೆ. ಇಷ್ಟೆಲ್ಲಾ ಸಮಸ್ಯೆಗಳು ಕಣ್ಮುಂದೆ ಕಾಣುತ್ತಿದ್ದರು ಸಬ್ ರಿಜಿಸ್ಟರ್ ಕಚೇರಿ ಹೊಸ ಕಟ್ಟಡ ಪ್ರವೇಶಕ್ಕೆ ಉಂಟಾಗಿರುವ ಸಮಸ್ಯೆಯ ಬಗ್ಗೆ ಹಿರಿಯ ಅಧಿಕಾರಿಗಳೆ ಉತ್ತರಿಸಬೇಕಿದೆ..ಈ ಬಗ್ಗೆ ಸ್ಥಳೀಯ ಜನಪ್ರತಿನಿಧಿಗಳು ಆದಷ್ಟು ಬೇಗ ಸಬ್ ರಿಜಿಸ್ಟರ್ ಕಚೇರಿ ಸ್ಥಳಾಂತರಕ್ಕೆ ಮುಂದಾಗಬೇಕಿದೆ







