suddibindu.in
Kumta: ಕುಮಟಾ : ತಾಲೂಕಿನ ಬಾಡ ಗ್ರಾಮದ ಮಾದರಿ ರಸ್ತೆಯಲ್ಲಿ ಮನೆಗೊಳಗೆ ನುಗ್ಗಿ ಓರ್ವನ ಮೇಲೆ ಹಲ್ಲೆ ಮಾಡಿ ಜನತೆಯಲ್ಲಿ ಆತಂಕ ಸೃಷ್ಟಿಸಿದ ಚಿರತೆಯನ್ನ ಅರಣ್ಯ ಇಲಾಖೆಯ ಅಧಿಕಾರಿಗಳಿ 24ಗಂಟೆ ನಂತರ ಅರವಳಿಕೆ ನೀಡುವ ಮೂಲಕ ಸೆರೆ ಹಿಡಿದಿದ್ದಾರೆ.
- Murder/200ರೂ ಕೂಲಿ ಹಣಕ್ಕೆ ಬೀದಿಯಲ್ಲಿ ಬಿತ್ತು ಹೆಣ : ಉತ್ತರ ಕನ್ನಡದಲ್ಲಿ ಭೀಕರ ಘಟನೆ
- ಕಡಲತೀರದಲ್ಲಿ ಜಿಂಕೆಯ ಮೃತದೇಹ ಪತ್ತೆ
- ಹಟ್ಟಿಕೇರಿಯಲ್ಲಿ ಗ್ರಾಮೀಣ ಕ್ರೀಡೆಗೆ ಜೀವ ತುಂಬಿದ ಕೇಸರುಗದ್ದೆ ಕ್ರೀಡಾಕೂಟ
ಉತ್ತರಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಬಾಡ ಗ್ರಾಮದ ಮಾದರಿ ರಸ್ತೆಯಲ್ಲಿ ನಿನ್ನೆ ಸಂಜೆ ರಾಜಾರೋಷವಾಗಿ ಬಂದ ಚಿರತೆ ಮಹಾಬಲೇಶ್ವರ ನಾಯ್ಕ ಅವರ ಮನೆ ಒಳಗೆ ಪ್ರವಾಸ ಮಾಡಿ ಅವರ ಮೇಲೆ ಹಲ್ಲೆ ಮಾಡಿತ್ತು. ಬಳಿಕ ಸುದ್ದಿ ತಿಳಿದ ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಚಿರತೆಯನ್ನ ಬೋನಿಗೆ ಕೆಡವಲು ಅದೆಷ್ಟೆ ಪ್ರಯತ್ನ ಮಾಡಿದರು ಸಾಧ್ಯವಾಗಿಲ್ಲ.ನಿನ್ನೆ ರಾತ್ರಿಯಿಂದ ಚಿರತೆ ಮಹಾಬಲೇಶ್ವರ ಅವರ ಮನೆಯ ಕೋಣೆಯೊಂದರೊಳಗೆ ಸೇರಿಕೊಂಡಿದೆ.
ಇದನ್ನೂ ಓದಿ
ಇನ್ನೂ ಕೋಣೆಗೆ ಹೊರಗಡೆಯಿಂದ ಬೀಗ ಹಾಕಲಾಗಿದ್ದು, ಕೋಣೆಯೊಳಗೆ ಇರುವ ಚಿರತೆಯ ಚಲನವಲನ ಗಮನಿಸಲು ಮನೆಯ ಗೋಡೆಗೆ ರಂಧ್ರಕೊರೆಯಲಾಗಿದೆ. ನಿನ್ನೆ ಸಂಜೆಯಿಂದಲ್ಲೆ ಶಿವಮೊಗ್ಗದಿಂದ ಅರವಳಿಕೆ ತಜ್ಞನರು ಆಗಮಿಸಲಿದ್ದಾರೆ ಎಂದು ಹೇಳುತ್ತಲೆ ಒಂದು ದಿನ ಕಳೆದಿದ್ದಯ ಅಂದು 24ಗಂಟೆ ಬಳಿಕ ಸ್ಥಳಕ್ಕೆ ಆಗಮಿಸಿದ ಅರವಳಿಕೆ ತಜ್ಞರ ಸಹಾಯದಿಂದ ಮನೆಯೊಳಗೆ ಇದ್ದ ಚಿರತೆಯನ್ನ ಸೆರೆ ಹಿಡಿಯಲಾಗಿದೆ
ಚಿರತೆ ಮನೆ ಒಳಗೆ ಇರುವುದರಿಂದ ಗ್ರಾಮದ ಜನತೆಯಲ್ಲಿ ಸಾಕಷ್ಟು ಆತಂಕ ಮನೆ ಮಾಡಿತ್ತು. ಯಾವ ವೇಳೆಯಲ್ಲಿ ಚಿರತೆ ಹೊರಬಂದು ಮತ್ತೆ ದಾಳಿ ಮಾಡಿ ಬಿಡಬಹುದು ಎಂಬ ಆತಂಕದಲ್ಲೆ ಅನೇಕರು ಮನೆಯಿಂದ ಹೊರ ಬರದೆ ಒಳಗೆ ಸೇರಿಕೊಡಿದ್ದರು, ಇನ್ನೂ ಚಿರತೆ ಸೆರೆಯಾಗುತ್ತಿದ್ದಂತೆ ನೂರಾರು ಸಂಖ್ಯೆಯಲ್ಲಿ ಸ್ಥಳಕ್ಕೆ ಆಗಮಿಸಿದ ಜನರು ಸೆರೆಯಾದ ಚಿರತೆಯನ್ನ ಕಂಡು ನಿಟ್ಟುಸಿರು ಬಿಡುವಂತಾಯಿತು..