suddibindu.in
ಖಾನಾಪುರ :ಉತ್ತರಕನ್ನಡ(uttarkannada) ಲೋಕಸಭಾ(Lok Sabha,)ಕ್ಷೇತ್ರದಲ್ಲಿ ಕಳೆದ ಮೂವತ್ತು ವರ್ಷಗಳಿಂದ ಬಿಜೆಪಿ ಅಧಿಕಾರ ನಡೆಸಿಕೊಂಡು ಬಂದಿದೆ. ಆದರೆ ಈ ಭಾರಿ ಅದನ್ನ ಹೊರಗೆ ಕಳುಹಿಸ್ತೀನಿ ಎಂದು ಕಾಂಗ್ರೆಸ್ ಅಭ್ಯರ್ಥಿ ಅಂಜಲಿ ನಿಂಬಾಳ್ಕರ್(Anjali Nimbalkar) ಹೇಳಿಕೆ ನೀಡಿದ್ದಾರೆ.
ಈ ಬಗ್ಗೆ ಖಾನಾಪುರದಲ್ಲಿ (Khanapur)ಮಾಧ್ಯಗಳಿಗೆ ಹೇಳಿಕೆ ನೀಡಿದ ಅಂಜಲಿ ನಿಂಬಾಳ್ಕರ್ ಅವರು ಈ ಭಾರಿ ಉತ್ತರಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲ್ಲುತ್ತದೆ ಎನ್ನುವ ಭರವಸೆ ಇದೆ. ಸ್ಥಳೀಯ ಶಾಸಕರು,ಉಸ್ತುವಾರಿ ಸಚಿವರು ಮತ್ತು ಆರ್ ವಿ ದೇಶಪಾಂಡೆ ಅವರು ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಿ ಕಾಂಗ್ರೆಸ್ (Congress) ಗೆಲ್ಲಿಸುತ್ತಾರೆ.ಈ ಕ್ಷೇತ್ರ ಬಿಜೆಪಿಯ ಭದ್ರಕೋಟೆಯಾದ್ರೂ ಇದು ವರೆಗೂ ಕ್ಷೇತ್ರದ ಅಭಿವೃದ್ಧಿಯಾಗಿಲ್ಲ.ಜನರ ವಿಶ್ವಾಸದೊಂದಿಗೆ ಖಂಡಿತವಾಗಿಯೂ ಈ ಭಾರೀ ನಮ್ಮ ಕ್ಷೇತ್ರ ಕಾಂಗ್ರೆಸ್ ಪಾಲಾಗಲಿದೆ ಅಂತಾ ಅಭ್ಯರ್ಥಿ ಅಂಜಲಿ ನಿಂಬಾಳ್ಕರ್ ವಿಶ್ವಾಸದ ಮಾತನಾಡಿದ್ದಾರೆ.
ಇದನ್ನೂ ಓದಿ
- ನೂರಾರು ಶವ ಹೂತಿಟ್ಟ ಪ್ರಕರಣ” ಧರ್ಮಸ್ಥಳಕ್ಕೆ ಎನ್ಎಚ್ಆರ್ಸಿ ‘ಏಂಟ್ರಿ’
- ಮೀನು ಹಿಡಿಯಲು ಹೋಗಿ ನಾಪತ್ತಯಾಗಿದ್ದ ಯುವಕನ ಶವ ಪತ್ತೆ : ಇನ್ನೋರ್ವನಿಗಾಗಿ ಮುಂದುವರೆದ ಶೋಧ
- Murder case/ಶರತ್ ಆಚಾರಿ ಹತ್ಯೆ ಪ್ರಕರಣ : ಇಬ್ಬರಿಗೆ ಜೀವಾವಧಿ ಶಿಕ್ಷೆ
ನಮ್ಮಕ್ಷೇತ್ರದ ಬಿಜೆಪಿ ಸಂಸದರಾಗಿದ್ದವರು ಜನರ ಯಾವ ಸಮಸ್ಯೆಗೂ ಸ್ಪಂಧಿಸಿಲ್ಲ. ಜನ ಸಮಸ್ಯೆಯನ್ನ ತೆಗೆದುಕೊಂಡು ಅವರ ಬಳಿ ಹೋದರೆ ಸರಿಯಾಗ ಸ್ಪಂಧನೆ ಮಾಡುತ್ತಿಲ್ಲ. ಇದೇಲ್ಲವೂ ಸಹ ಕ್ಷೇತ್ರದ ಮತದಾರರಿಗೆ ಗೊತ್ತಿದೆ. ನಾನು ಈ ಕ್ಷೇತ್ರದಿಂದ ಆಯ್ಕೆ ಆದ ಬಳಿಕ ಮೊದಲು ಇಲ್ಲಿರುವ ಪ್ರಮುಖ ಸಮಸ್ಯೆಯಾಗಿರುವ ಮೆಡಿಕಲ್ ಆಸ್ಪತ್ರೆ ನಿರ್ಮಾಣ ಕಾರ್ಯ ನಿರ್ಮಾಣ ಮಾಡತ್ತೇನೆ..ನಿರುದ್ಯೋಗ ಸಮಸ್ಯೆ ಇನ್ನೂ ಜೀವಂತವಾಗಿದೆ. ಪ್ರತಿನಿತ್ಯ ಸಾವಿರಾರು ಯುವಕ, ಯುವತಿಯರು ಉದ್ಯೋಗಕ್ಕಾಗಿ ಪಕ್ಕದ ಗೋವಾ ಹಾಗೂ ರಾಜ್ಯದ ಬೇರೆ ಬೇರೆ ಕಡೆ ಅಲೆದಾಡುತ್ತಿದ್ದಾರೆ. ಜಿಲ್ಲೆಯಲ್ಲಿಯೇ ಉದ್ಯೋಗ ಸೃಷ್ಠಿಸುವ ಗುರಿ ಹೊಂದಿದ್ದೇನೆ,
ಇನ್ನೂ ಸಿಬರ್ಡ್ ಹಾಗೂ ಕೊಂಕಣ ರೈಲ್ವೆ ಯೋಜನೆಯಿಂದಾಗಿ ನಿರಾಶ್ರಿತರಾದ ಅನೇಕ ಕುಟುಂಬಗಳಿಗೆ ಇನ್ನೂ ಕೂಡ ಸರಿಯಾದ ಪರಿಹಾರ ಸಿಕ್ಕಿಲ್ಲ ಎನ್ನುವುದು ನನ್ನ ಗಮನಕ್ಕಿದ್ದೆ, ಆ ಬಗ್ಗೆ ಪ್ರಯತ್ನ ಮಾಡುವ ಮೂಲಕ ಎಲ್ಲಾ ನಿರಾಶ್ರಿತರಿಗೂ ತಕ್ಷಣ ಪರಿಹಾರ ಒದಗಿಸುವ ಕೆಲಸ ಮಾಡಲಾಗುವು ಎಂದಿದ್ದಾರೆ. ಇನ್ನೂ ಜಿಲ್ಲೆಯ ಜನರ ಪ್ರಮುಖ ಸಮಸ್ಯೆಯಾಗಿರುವ ಅರಣ್ಯ ಅತಿಕ್ರಮಣದಾರರ ಸಮಸ್ಯೆ ಏನಿದೆ ಈ ಬಗ್ಗೆ ಕೇಂದ್ರದ ಮೇಲೆ ಒತ್ತಡ ತರುವ ಮೂಲಕ ದಶಕಗಳ ಸಮಸ್ಯೆಗೆ ಪರಿಹಾರ ನೀಡಲಾಗುವುದು ಎಂದಿದ್ದಾರೆ.