Kumara Bangarappa Name Proposed for Uttara Kannada
suddibindu.in
ಬೆಂಗಳೂರು:ರಾಜ್ಯದ ಯಾವ ಕ್ಷೇತ್ರದಿಂದ ಯಾವ ಅಭ್ಯರ್ಥಿಗಳ ಕಣಕ್ಕೆ ಇಳಿಬೇಕು ಎನ್ನುವ ಬಗ್ಗೆ ಚರ್ಚೆ ನಡೆಯುತ್ತಿದೆ. ಜಾತಿ ಲೆಕ್ಕಾಚಾರದಲ್ಲಿ ಪಕ್ಷಗಳು ರಣತಂತ್ರಗಳನ್ನ ಮಾಡುತ್ತಿದೆ.ಹಿಂದೂಳಿದ ವರ್ಗಗಳ ಲಾಭ ಸಿಗುವ ಲೆಕ್ಕಾಚಾರದಲ್ಲಿ ಕಾಂಗ್ರೆಸ್ ಇದೆ. ಅಲ್ಲದೆ ಕುಮಾರ ಬಂಗಾರಪ್ಪ ಅವರನ್ನ ಕಾಂಗ್ರೆಸ್ಗೆ ಸೆಳೆಯಬೇಕು ಎನ್ನುವ ಚರ್ಚೆ ಕಾಂಗ್ರೆಸ್ ವಲಯದಲ್ಲಿ ನಡೆಯುತ್ತಿದೆ. ಅಲ್ಲದೆ ಉತ್ತರಕನ್ನಡ ಲೋಕಸಭಾ ಕ್ಷೇತ್ರದಿಂದ ಕುಮಾರ ಬಂಗಾರಪ್ಪ ಅವರನ್ನ ಸ್ಪರ್ಧೆಗಿಳಸಬೇಕು ಎನ್ನುವ ಚರ್ಚೆ ಜೋರಾಗಿದೆ.
ಇನ್ನೂ ಕುಮಾರ ಬಂಗಾರಪ್ಪ ಕೂಡ ಬಿಜೆಪಿಯಿಂದ ಅಂತರವನ್ನ ಕಾಯ್ದುಗೊಂಡಿದ್ದಾರೆ. ಶಿವಮೊಗ್ಗದಲ್ಲೇ ಬಿಜೆಪಿ ಆಯೋಜಿಸಿದ ಈಡಿಗ ಸಮಾವೇಶದಿಂದ ಕುಮಾರ ಬಂಗಾರಪ್ಪ ದೂರ ಉಳಿದಿದ್ದಾರೆ. ಇದೇ ಅಂಶದಮೇಲೆ ಕಾಂಗ್ರೆಸ್ ಕುಮಾರ ಬಂಗಾರಪ್ಪ ಅವರ ಮೇಲೆ ಒಲವು ತೋರುತ್ತಿದೆ. ಉತ್ತರಕನ್ನಡ ಲೋಕಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ಕುಮಾರ ಬಂಗಾರಪ್ಪ ಅವರ ಹೆಸರನ್ನ ಪ್ರಸ್ತಾಪಿಸಿದೆ. ಅವರನ್ನ ಕರೆತಂದರೆ ಕಾಂಗ್ರೆಸ್ಗೆ ಹೆಚ್ಚಿನ ಲಾಭ ಇದೆ. ಹಿಂದೂಳಿದ ವರ್ಗದವರ ಲಾಭ ಸಿಗುವ ಲೆಕ್ಕಾ ಇದೆ.ಇದರಿಂದ ಶಿವಮೊಗ್ಗದಲ್ಲಿ ಗೀತಾ ಶಿವರಾಜ್ ಕುಮಾರ ಅವರಿಗೂ ಲಾಭವಾಗುವ ನಿರೀಕ್ಷೆ ಇದೆ.
- ಅಪಘಾತ ನಿಯಂತ್ರಣಕ್ಕೆ ಕುಮಟಾದಲ್ಲಿ ಬಿಗ್ ಆಕ್ಷನ್ : ನಿಯಮ ಮೀರಿ ವಾಹನ ಓಡಿಸಿದ್ರೆ ಕಾನೂನು ಕ್ರಮ
- ಸುಗಮವಾಗಿ ಗಣೇಶೋತ್ಸವ ಆಚರಣೆಗೆ ಅವಕಾಶ ಕಲ್ಪಿಸಲು ಎಸ್ಪಿಗೆ ರೂಪಾಲಿ ನಾಯ್ಕ ಮನವಿ
- ದಿನಕರ ಶೆಟ್ಟಿ ಮೇಲೆ ಹಲ್ಲೆ ಮಾಡಿದ್ದ ಆರೋಪಿ ಬಂಧನ
ಅದರೆ ಕುಮಾರ ಬಂಗಾರಪ್ಪ ಅವರನ್ನ ಕಾಂಗ್ರೆಸ್ಗೆ ಕರೆತರಲು ಸಹೋದರ ಮಧು ಬಂಗಾರಪ್ಪ ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎನ್ನಲಾಗಿದೆ.ಈ ನಡುವೆ ಕಾಂಗ್ರೆಸ್ ಹೈಕಮಾಂಡ ಮಧುಬಂಗಾರಪ್ಪ ಅವರ ಮನವೊಲಿಸುವ ಬಗ್ಗೆ ಪ್ರಯತ್ನ ನಡೆಸುತ್ತಿದೆ ಎನ್ನಲಾಗಿದೆ.