ಸುದ್ದಿಬಿಂದು ಬ್ಯೂರೋ ವರದಿ

ಹೊನ್ನಾವರ: ಮೀನುಗಾರಿಕೆಗೆ ಹೋಗಿದ್ದ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ಸಮುದ್ರದಲ್ಲಿ ಬಿದ್ದು ನಾಪತ್ತೆಯಾಗಿದ್ದ ಮೀನುಗಾರ ಯುವಕನ ಶವ ಶರಾವತಿ ನದಿಯ ರೈಲ್ವೆ ಸೇತುವೆ ಕೆಳಭಾಗದಲ್ಲಿ ಪತ್ತೆಯಾಗಿದೆ.

ಮೃತ ಯುವಕ  ಬರ್ಗಿ ಗ್ರಾಮದ ಉಮೇಶ ಈಶ್ವರ ಹರಿಕಾಂತ (28) ಎಂದು ಗುರುತಿಸಲಾಗಿದೆ. ಈತ ಕಳೆದ ಎರಡು ದಿನಗಳ ಹಿಂದಷ್ಟೆ  ಹೊನ್ನಾವರ ತಾಲೂಕಿನ ಟೊಂಕಾ ಬಳಿ ಸಮುದ್ರದಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ಸಮುದ್ರಕ್ಕೆ ಬಿದ್ದು ನಾಪತ್ತೆಯಾಗಿದ್ದ. ಘಟನೆ ನಡೆದ ಬಳಿಕ ಮೀನುಗಾರರು ಹಾಗೂ ಸ್ಥಳೀಯರು ಸಾಕಷ್ಟು ಹುಡುಕಾಟ ನಡೆಸಿದರೂ ಯುವಕನ ಸುಳಿವು ಸಿಕ್ಕಿರಲಿಲ್ಲ. ಇದೀಗ ಶುಕ್ರವಾರ ಹೊನ್ನಾವರದ ಶರಾವತಿ ನದಿಯ ರೈಲ್ವೆ ಸೇತುವೆ ಸಮೀಪ ಮೃತದೇಹ ಪತ್ತೆಯಾಗಿದೆ.