ಸುದ್ದಿಬಿಂದು ಬ್ಯೂರೋ
ಕಾರವಾರ (ಗೋವಾ) : ಕರ್ನಾಟಕ ಹಾಗೂ ಗೋವಾ ಗಡಿಯಲ್ಲಿ ಇರುವ ದೂದ್ ಸಾಗರ್ ಜಲಪಾತ ನೋಡಲು ಹೋಗಿದ್ದ ನೂರಾರು ಕನ್ನಡಿಗರಿಗೆ ಗೋವಾ ಪೊಲೀಸರು ಟಾರ್ಚರ್ ನೀಡಿ ಲಾಠಿ ಬಿಸಿದ್ದು ಮಾನವಹಕ್ಕು ಉಲ್ಲಂಘನೆಯಾಗಿದೆ ಎಂದು ಕನ್ನಡಪರ ಸಂಘಟನೆಗಳು ಆಕ್ರೋಶ ಹೊರಹಾಕಿದ್ದು, ಕನ್ನಡಿಗರ ಮೇಲಿನ ದೌರ್ಜನ್ಯದ ವಿರುದ್ಧ ಹೋರಾಟಕ್ಕೆ ಕನ್ನಡಪರ ಸಂಘಟನೆ ಮುಂದಾಗಿದೆ.
ಉತ್ತರ ಕರ್ನಾಟಕ (Uttara Karnataka) ಸೇರಿದಂತೆ ರಾಜ್ಯದ ನಾನಾಕಡೆಯಿಂದ ಸಾವಿರಾರು ಪ್ರವಾಸಿಗರು ಪ್ರೇಕ್ಷಣಿಯ ಜಲಪಾದವಾಗಿರುವ ದೂದ್ ಸಾಗರ್ ವೀಕ್ಷಣೆಗಾಗಾಗಿ ಬೆಳಗಾವಿ, ಬಾಗಲಕೋಟೆ,ಅನೇಕ ಕಡೆಗಳಿಂದ ಪ್ರವಾಸಿಗರು ಆಗಮಿಸಿದ್ದರು. ಈ ವೇಳೆ ಜಲಪಾತದ ಸಮೀಪ ಇದ್ದ ಗೋವಾ ಪೊಲೀಸರು ಕನ್ನಡಿಗರನ್ನ ತಡೆದು, ಅವರ ಮೇಲೆ ಲಾಠಿ ಬಿಸಿ ನಂತರ ನೂರಾರು ಕನ್ನಡರಿಗರನ್ನ ಭಾರೀ ಮಳೆಯಲ್ಲಿಯೇ ನಿಲ್ಲಿಸಿ ಬಸ್ಕಿ ಹೊಡಿಸಿ ಕಳುಹಿಸಿದ್ದಾರೆ.
ಗೋವಾ ಪೊಲೀಸರು (Goa Police,)ಜಲಪಾತ ವೀಕ್ಷಣೆಗೆ ಹೋಗಿದ್ದ ಕನ್ನಡಿಗರನ್ನ ಯಾವರೀತಿಯಲ್ಲಿ ನಡೆಸಿಕೊಂಡಿದ್ದಾರೆ.ಎನ್ನುವುದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೋ ಸಾಕ್ಷಿ..
ಕನ್ನಡ ಪರ ಸಂಘಟನೆ ಕೆಂಡಾಮಂಡಲ
ದೂದ್ ಸಾಗರ್ ಜಲಪಾತ ವೀಕ್ಷಣೆಗೆ ಹೋಗಿದ್ದ ನಮ್ಮ ಕನ್ನಡಿಗರ ಮೇಲೆ ಗೋವಾ ಪೊಲೀಸರು ದೌರ್ಜನ್ಯ ನಡೆಸಿದ್ದಾರೆ. ಗೋವಾ ಸರಕಾರ ಪ್ರವಾಸಿಗರಿಗೆ ಜಲಪಾತ ವೀಕ್ಷಣೆಗೆ ಅವಕಾಶ ನೀಡಿಲ್ಲವಾದರೆ. ತಿಳಿಸಿ ಹೇಳಿ ವಾಪಸ್ ಕಳುಹಿಸಬುದಾಗಿತ್ತು. ಆದರೆ ನಮ್ಮ ಕನ್ನಡಿಗರನ್ನ ಮಳೆಯಲ್ಲಿ ನಿಲ್ಲಿಸಿ ಅವರಿಂದ ಬಸ್ಕಿ ಹೊಡೆಸಿ, ಲಾಠಿ ಬಿಸಿರುವುದು ಸರಿಯಲ್ಲ. ಇದು ಮಾನವಹಕ್ಕು ಉಲ್ಲಂಘನೆಯಾಗಿದೆ. ಗೋವಾ ಸರಕಾರ ಪದೆ ಪದೆ ಕನ್ನಡಿಗರ ಮೇಲೆ ದೌರ್ಜನ್ಯ ನಡೆಸುವ ಕೆಲಸ ಮಾಡುತ್ತಿದೆ. ಇದನ್ನ ನಾವುಗಳು ಸಹಿಕೊಳ್ಳಲು ಸಾಧ್ಯವಿಲ್ಲ..ಹೀಗಾಗಿ ನಾವು ಗೋವಾ ಪೊಲೀಸರು ಕನ್ನಡಿಗರನ್ನ ನಡೆಸಿಕೊಂಡ ರೀತಿಯನ್ನ ಖಂಡಿಸುತ್ತೇವೆ ಎಂದು ರಾಜ್ಯದ ನಾನಾ ಕನ್ನಡ ಪರ ಸಂಘಟನೆಗಳು ಎಚ್ಚರಿಕೆ ನೀಡಿದೆ.