ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆಯುವಂತೆ ವಿದ್ಯಾರ್ಥಿನಿ ಓರ್ವಳಿಗೆ ಕ್ಷೇತ್ರ ಶಿಕ್ಷಣಾಧಿಕಾರಿ ಬುದ್ದಿವಾದ ಹೇಳಿದ್ದು, ಇದಕ್ಕೆ ತೀವ್ರ ಮಾನಸಿಕ ಒತ್ತಡ ಎದುರಿಸಿದ 10ನೇ ತರಗತಿಯ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಕಡೂರು ತಾಲೂಕಿನ ಯಳ್ಳಂಬಳಸೆ ಗ್ರಾಮದಲ್ಲಿ ನಡೆದಿದೆ.
ಕೆಲವು ದಿನಗಳ ಹಿಂದೆ ಕ್ಷೇತ್ರ ಶಿಕ್ಷಣಾಧಿಕಾರಿಗಳು (BEO) ವಿದ್ಯಾರ್ಥಿನಿ ಮನೆಗೆ ಭೇಟಿ ನೀಡಿದಾಗ, 500 ಅಂಕಗಳಲ್ಲಿ 93 ಅಂಕ ಪಡೆದಿದ್ದ ಆಕೆಯ “ನೀನು ಪಾಸ್ ಆಗುತ್ತೀಯಾ?” ಎಂಬ ಪ್ರಶ್ನೆಯಿಂದ ಅವಳ ಮೇಲೆ ಬುದ್ಧಿ ಹೇಳಲಾಗಿದ್ದು, ಇದರಿಂದ ಆಕೆಗೆ ತೀವ್ರ ಸಂಕಷ್ಟ ಎದುರಾಯಿತು.
ಜನವರಿ 28ರ ರಾತ್ರಿ, 2ನೇ ಪೂರ್ವ ಸಿದ್ಧತಾ ಪರೀಕ್ಷೆಯಲ್ಲಿ ಫೇಲ್ ಆಗುವ ಭಯದಿಂದ, ಮನೆಲ್ಲಿದ್ದ ಮಾತ್ರೆಗಳನ್ನು ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು. ತಕ್ಷಣ ಆಕೆಯನ್ನು ಕಡೂರು ಮತ್ತು ನಂತರ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಯಿತು, ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾಳೆ.ಕಡೂರು ಪೊಲೀಸ್ ಠಾಣೆ ಪ್ರಕರಣ ದಾಖಲಿಸಿಕೊಂಡಿದ್ದು, ತಾಯಿ-ತಂದೆ ಈ ವರೆಗೆ ದೂರು ಸಲ್ಲಿಸಿಲ್ಲ.


