ಸುದ್ದಿಬಿಂದು ಬ್ಯೂರೋ ವರದಿ
ಕುಮಟಾ: ತಾಲೂಕಿನ ಸಮೀಪದ ಮಾನೀರ ಕ್ರಾಸ್ ಬಳಿ ಕೆಎಸ್ಆರ್ಟಿಸಿ ಬಸ್ ಹಾಗೂ ಬುಲೋರಾ ಪಿಕ್ಅಪ್ ವಾಹನ ನಡುವೆ ಭೀಕರ ಅಪಘಾತ ಸಂಭವಿಸಿ, ಪಿಕ್ಅಪ್ ವಾಹನ ಚಾಲಕನ ಗಂಭೀರ ಗಾಯಗೊಂಡ ಘಟನೆ ನಡೆದಿದೆ.
ಕುಮಟಾ ಕಡೆಯಿಂದ ಕಾರವಾರದತ್ತ ತೆರಳುತ್ತಿದ್ದ ಪಿಕ್ಅಪ್ ವಾಹನ ಹಾಗೂ ಗೋಕರ್ಣದಿಂದ ಕುಮಟಾಕ್ಕೆ ಬರುತ್ತಿದ್ದ ಕೆಎಸ್ಆರ್ಟಿಸಿ ಬಸ್ ನಡುವೆ ಡಿಕ್ಕಿ ಸಂಭವಿಸಿದ್ದು, ಅಪಘಾತದ ತೀವ್ರತೆಗೆ ಪಿಕ್ಅಪ್ ವಾಹನ ಹಾಗೂ KSRTC ಬಸ್ ಮುಂಭಾಗ ಸಂಪೂರ್ಣವಾಗಿ ನುಜ್ಜಾಗಿದೆ. ಗಂಭೀರವಾಗಿ ಗಾಯಗೊಂಡ ಚಾಲಕನನ್ನು ತಕ್ಷಣವೇ ಕುಮಟಾ ಸರಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಅಪಘಾತದ ಪರಿಣಾಮ ರಾಷ್ಟ್ರೀಯ ಹೆದ್ದಾರಿಯಲ್ಲಿ ಒಂದು ಗಂಟೆಗೂ ಅಧಿಕ ಕಾಲ ಸಂಚಾರ ಅಸ್ತವ್ಯಸ್ತಗೊಂಡು ಟ್ರಾಫಿಕ್ ಜಾಮ್ ಉಂಟಾಯಿತು. ಎರಡು ಕ್ರೇನ್ ಮೂಲಕ ಎರಡು ವಾಹನವನ್ನ ತೆರವುಗೊಳಿಸಿದ ಬಳಿಕ ಸಂಚಾರ ಕ್ರಮೇಣ ಸುಧಾರಿಸಿತು.
ಪಿಕ್ಅಪ್ ವಾಹನ ಚಾಲಕನ ನಿರ್ಲಕ್ಷ್ಯವೇ ಅಪಘಾತಕ್ಕೆ ಕಾರಣವಾಗಿರಬಹುದು ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಮಾಹಿತಿ ಪಡೆದ ತಕ್ಷಣ ಕುಮಟಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ಕುರಿತು ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ/ ದೇವರ ತಟ್ಟೆ ಹಣಕ್ಕೆ ಅರ್ಚಕರ ಕಿತ್ತಾಟ : ಭಕ್ತರ ಎದುರೇ ಗಲಾಟೆ, ವಿಡಿಯೋ ವೈರಲ್




