ಸುದ್ದಿಬಿಂದು ಬ್ಯೂರೋ ವರದಿ
ಗೋಕರ್ಣ: ಉತ್ತರ ಕನ್ನಡ ಜಿಲ್ಲೆಯ ಗೋಕರ್ಣ ಮೇನ್ ಬೀಚ್‌ನಲ್ಲಿ ಈಜುತ್ತಿದ್ದ ಪ್ರವಾಸಿಗನೊಬ್ಬ ಸುಳಿಗೆ ಸಿಲುಕಿದ ಘಟನೆ ನಡೆದಿದ್ದು, ಕರ್ತವ್ಯ ನಿರತ ಜೀವ ರಕ್ಷಕ ಸಿಬ್ಬಂದಿಗಳ ಸಮಯಪ್ರಜ್ಞೆಯಿಂದ ಪ್ರವಾಸಿಗನ ಜೀವ ಉಳಿದಿದೆ.

ಮೈಸೂರು ಜಿಲ್ಲೆಯ ಮಧು (23) ಎಂಬಾತನನ್ನ ರಕ್ಷಣೆ ಮಾಡಲಾಗಿದೆ.. ಮೈಸೂರಿನಿಂದ 10 ಮಂದಿ ಸ್ನೇಹಿತರು ಗೋಕರ್ಣಕ್ಕೆ ಪ್ರವಾಸಕ್ಕೆ ಬಂದಿದ್ದು, ಈ ವೇಳೆ ಗೋಕರ್ಣ ಮೇನ್ ಬೀಚ್‌ನಲ್ಲಿ ಈಜುತ್ತಿದ್ದಾಗ ಮಧು ಅಚಾನಕ್ ಸುಳಿಗೆ ಸಿಲುಕಿದ್ದಾನೆ ಎನ್ನಲಾಗಿದೆ.

ಸ್ಥಳದಲ್ಲೇ ಕರ್ತವ್ಯದಲ್ಲಿದ್ದ ಜೀವ ರಕ್ಷಕ ಸಿಬ್ಬಂದಿಗಳು ಹಾಗೂ ಗೋಕರ್ಣ ಮೇನ್ ಬೀಚ್ ವಾಟರ್ ಸ್ಪೋರ್ಟ್ಸ್ ಸಿಬ್ಬಂದಿಗಳು ತಕ್ಷಣ ಸ್ಪಂದಿಸಿ, ಮಧುವನ್ನು ಸುರಕ್ಷಿತವಾಗಿ ದಡಕ್ಕೆ ಕರೆತರುವಲ್ಲಿ ಯಶಸ್ವಿಯಾಗಿದ್ದಾರೆ. ಸಮಯಕ್ಕೆ ಸರಿಯಾಗಿ ಕೈಗೊಂಡ ಕ್ರಮದಿಂದ ಭಾರೀ ಅನಾಹುತ ತಪ್ಪಿದಂತಾಗಿದೆ.ಈ ಘಟನೆ ಗೋಕರ್ಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಂಭವಿಸಿದ್ದು, ಪ್ರವಾಸಿಗರು ಸಮುದ್ರದಲ್ಲಿ ಈಜುವ ವೇಳೆ ಅಗತ್ಯ ಎಚ್ಚರಿಕೆ ವಹಿಸಬೇಕಿದೆ.

ಇದನ್ನೂ ಓದಿ/ಟೆಂಪೊ ಟ್ರಾವಲರ್ ಪಲ್ಟಿ: ಮೆಡಿಕಲ್ ವಿದ್ಯಾರ್ಥಿಗಳಿಗೆ ಗಂಭೀರ ಗಾಯ