ಬಿಗ್‌ಬಾಸ್‌ ಕನ್ನಡ ಸೀಸನ್‌ 12ರ ಫಿನಾಲೆ ಸಂಭ್ರಮ ಆರಂಭವಾಗುತ್ತಿದ್ದಂತೆಯೇ ಪ್ರೇಕ್ಷಕರಿಗೆ ದೊಡ್ಡ ಅಚ್ಚರಿ ಎದುರಾಗಿದೆ. ಯಾರೂ ಊಹಿಸಿರದ ರೀತಿಯಲ್ಲಿ ಪ್ರಭಲ ಸ್ಪರ್ಧಿಯೊಬ್ಬರು ಸ್ಪರ್ಧೆಯಿಂದ ಹೊರಬಿದ್ದಿದ್ದಾರೆ.

ಈ ಸೀಸನ್‌ನಲ್ಲಿ ‘ಟೋಸ್ಟ್ ಮಾಸ್ಟರ್’ ಎಂದೇ ಖ್ಯಾತಿ ಪಡೆದಿದ್ದ ಧನುಷ್ ಗೌಡ ಫಿನಾಲೆ ಹಂತದಲ್ಲಿ ದೊಡ್ಮನೆಯಿಂದ ಹೊರನಡೆಯಬೇಕಾಯಿತು. ಆರಂಭದಿಂದಲೂ ಆತಂಕವಿಲ್ಲದೆ ಆಟ ಆಡುತ್ತಿದ್ದ ಅವರು ಟಾಪ್‌ ಸ್ಪರ್ಧಿಗಳ ಪೈಕಿ ಒಬ್ಬರಾಗಿದ್ದರು.
ಫಿನಾಲೆಗೆ ಪ್ರವೇಶಿಸಿದ ಆರು ಮಂದಿ ಪೈಕಿ ಧನುಷ್ ಗೌಡ ಕೂಡ ಇದ್ದು, ಕಪ್ ಗೆಲ್ಲುವ ಭರವಸೆಯ ಅಭ್ಯರ್ಥಿ ಎಂದೇ ಪರಿಗಣಿಸಲಾಗಿತ್ತು.

ಆದರೆ ಪ್ರೇಕ್ಷಕರ ಮತದಾನ ಆಧಾರಿತ ನಿರ್ಣಯದಲ್ಲಿ ಅವರು ಎಲಿಮಿನೇಟ್ ಆಗಿದ್ದು, ಅಭಿಮಾನಿಗಳಿಗೆ ನಿರಾಸೆ ಮೂಡಿಸಿದೆ.ಸಾಮಾಜಿಕ ಜಾಲತಾಣಗಳಲ್ಲಿ ಧನುಷ್ ಹೊರನಡೆಯುತ್ತಿದ್ದಂತೆ ಅಭಿಮಾನಿಗಳ ಪ್ರತಿಕ್ರಿಯೆಗಳು ವೈರಲ್ ಆಗುತ್ತಿದ್ದು, ಅವರ ಆಟದ ಶೈಲಿಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಇದನ್ನೂ ಓದಿ/ಬಡವರ ಅನ್ನಕ್ಕೆ ಕನ್ನ ಹಾಕಿದ ಅಕ್ಕಿ ಕಳ್ಳ..! ಭಟ್ಕಳದಲ್ಲಿ ಅಕ್ರಮ ಸಾಗಾಟ ಪತ್ತೆ