
ಸುದ್ದಿಬಿಂದು ಬ್ಯೂರೋ ವರದಿ
ಕಾರವಾರ: ಚಿತ್ರದುರ್ಗ ಜಿಲ್ಲೆಯ ಗೊರ್ಲತ್ತು ಕ್ರಾಸ್ ಬಳಿ ಸೀಬರ್ಡ್ ಬಸ್ ದುರಂತದಲ್ಲಿ ಸಿಲುಕಿದ್ದ ಉತ್ತರಕನ್ನಡ ಜಿಲ್ಲೆಯ ಕುಮಟಾ ನಿವಾಸಿ ಸೇಫ್ ಆಗಿದ್ದು, ಭಟ್ಕಳದ ರಶ್ಮಿ ಹಾಗೂ ಕುಮಟಾದ ಮೇಘರಾಜ ಅವರ ಸುಳಿವು ಇನ್ನೂ ಪತ್ತೆಯಾಗಿಲ್ಲ.
ವಿಜಯ್ ಭಂಡಾರಿ ಎಂಬುವವರು ಬೆಂಗಳೂರಿನಿಂದ ದುರಂತಕ್ಕೀಡಾಗಿರುವ. ಸಿಬರ್ಡ್ ಬಸ್‌ನಲ್ಲಿ 9U ಸೀಟ್ ನಲ್ಲಿದ್ದ ಕುಳಿತು ಪ್ರಯಾಣಿಸುತ್ತಿದ್ದರು.ಘಟನೆ ಬಳಿಕ ಇವರ ಮೊಬೈಲ್ ಸ್ವೀಚ್ ಆಪ್ ಆಗಿದ್ದು ಇದರಿಂದ ಕುಟುಂಬಸ್ಥರು ಆತಂಕಕ್ಕೆ ಒಳಗಾಗಿದ್ದರು.ಇದೀಗ ವಿಜಯ ಭಂಡಾರಿಯಬರು ಬೇರೆಯವರ ನಂಬರ್‌ನಿಂದ ಗೆಳೆಯರ ಮೊಬೈಲ್‌ಗೆ ಕರೆ ಮಾಡಿ ತಾನು ಸೇಫ್ ಇರೋದಾಗಿ ಹೇಳಿದ್ದು, ತಾನು ಬೇರೆ ವಾಹನದಲ್ಲಿ ಊರಿಗೆ ಬರುತ್ತಿರುವುದಾಗಿ ಗೆಳೆಯರಿಗೆ ತಿಳಿಸಿದ್ದಾರೆ.
ಇನ್ನೂ ಇದೆ ಬಸ್‌ನಲ್ಲಿ ಕುಮಟಾಕ್ಕೆ ಬರುತ್ತಿದ್ದ ಮೇಘರಾಜ್, ಹಾಗೂ ಗೆಳತಿಯರೊಂದಿಗೆ ಗೋಕರ್ಣಕ್ಕೆ ಬರುತ್ತಿದ್ದ ಭಟ್ಕಳ ರಶ್ಮಿ ಸಹ ಸಂಪರ್ಕಕ್ಕೆ ಸಿಕ್ಕಿಲ್ಲ. ರಶ್ಮಿ ಕುಟುಂಬಸ್ಥರು ಈಗಾಗಲೇ ಘಟನಾ ಸ್ಥಳಕ್ಕೆ ಭೇಟಿನೀಡಿದ್ದು, ಹುಡುಕಾಟ ನಡೆಸುತ್ತಿದ್ದಾರೆ.
ಇದನ್ನೂ ಓದಿ/ಸೀಬರ್ಡ್ ಬಸ್‌ಗೆ ಬೆಂಕಿ ಘಟನೆ : 8ಮೃತದೇಹ ಹೊರತೆಗೆಯಲಾಗಿದೆ, ಒಟ್ಟು 9 ಸಾವು–ಐಜಿಪಿ ರವಿಕಾಂತೇಗೌಡ




