ಸುದ್ದಿಬಿಂದು ಬ್ಯೂರೋ ವರದಿ
ಕಾರವಾರ : ಕೇಂದ್ರ ಕಾರಾಗೃಹದಲ್ಲಿ ಮತ್ತೆ ಗಲಾಟೆ ನಡೆದಿದ್ದು, ಮಂಗಳೂರಿನ ಮೂಲದ ಆರು ಮಂದಿ ಆರೋಪಿಗಳು ಜೈಲಿನಲ್ಲೇ ದಾಂಧಲೆ ನಡೆಸಿರುವ ಘಟನೆ ನಡೆದಿದೆ..
ಇಂದು ಸಹ ಬಿಸ್ಕೇಟ್ ಬಾಕ್ಸ್ ನಲ್ಲಿ ಮಾದಕ ವಸ್ತುಗಳು ಕೂಡ ಇತ್ತು ಎನ್ನಲಾಗಿದೆ. ಅದನ್ನ ತಪಾಸಣೆ ಮಾಡಿದ ಅಲ್ಲಿನ ಸಿಬ್ಬಂದಿಗಳು ಆ ಬಾಕ್ಸ್ ಪರಿಶೀಲನೆ ಮಾಡಿದ ಸಮಯದಲ್ಲಿ ಬಾಕ್ಸ್‌ನಲ್ಲಿ ಮಾದಕ ವಸ್ತುಗಳು ಪತ್ತೆಯಾಗಿದೆ ಎನ್ನಲಾಗಿದೆ. ಈ ವೇಳೆ ಸಿಬ್ಬಂದಿಗಳು ಬಿಸ್ಕೇಟ್ ಬಾಕ್ಸ್ ಮಾತ್ರ ಆರೋಪಿಗಳಿಗೆ ತಲುಪಿಸಿದ್ದಾರೆನ್ನಲಾಗಿದ್ದು, ಈ ವೇಳೆ ಅಲ್ಲಿನ ಆರೋಪಿಗಳು ಬಾಕ್ಸ್‌ಲ್ಲಿ ಇರುವ ಆ ವಸ್ತುಗಳನ್ನ ಯಾಕೆ ಕೊಟ್ಟಿಲ್ಲ ಎಂದು ತಕರಾರು ತೆಗೆದು ಗಲಾಟೆ ಮಾಡಿದ್ದಾರೆನ್ನಲಾಗಿದೆ.
ಮಂಗಳೂರು ಮೂಲದ ಆರೋಪಿಗಳು ಜೈಲಿನಲ್ಲಿದ್ದ ಟಿವಿ ಸೇರಿದಂತೆ ಹಲವು ವಸ್ತುಗಳನ್ನು ನಾಶಪಡಿಸಿದ್ದು, ಪರಿಸ್ಥಿತಿ ಕೆಟ್ಟದ್ದರಿಂದ ಕಾರವಾರ ನಗರ ಠಾಣೆ ಪೊಲೀಸರು ತುರ್ತಾಗಿ ಜೈಲಿಗೆ ದೌಡಾಯಿಸಿದ್ದಾರೆ. ಇತ್ತೀಚೆಗೆ ಜೈಲಿನಲ್ಲಿ ಮಾದಕ ವಸ್ತುಗಳನ್ನು ಬಿಗಿಯಾಗಿ ಪರಿಶೀಲನೆ ನಡೆಸಿದ ಹಿನ್ನೆಲೆಯಲ್ಲಿ,ಮಂಗಳೂರು ಮೂಲದ ಮೊಹ್ಮದ್ ಅಬ್ದುಲ್ ಫಯಾನ್, ಕೌಶಿಕ ನಿಹಾಲ್ ಮತ್ತಿತರ ಆರೋಪಿಗಳು ಜೈಲರ್ ಕಲ್ಲಪ್ಪ ಗಸ್ತಿ ಸೇರಿದಂತೆ ಮೂವರು ಸಿಬ್ಬಂದಿಗಳ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದರು.
ಡಕಾಯಿತಿ ಸೇರಿ 12ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಆರೋಪಿ ರೌಡಿಗಳಾಗಿರುವ ಈ ತಂಡ,ಮಂಗಳೂರು ಜೈಲಿನಲ್ಲಿ ಹೆಚ್ಚುವರಿ ಭದ್ರತೆಯಡಿ ಇರಿಸಲಾಗಿತ್ತು. ಪರಿಸ್ಥಿತಿ ನಿಯಂತ್ರಣಕ್ಕೆ ಬರದೆ ಅವರನ್ನು ಕೆಲವು ದಿನಗಳ ಹಿಂದೆ ಕಾರವಾರ ಜೈಲಿಗೆ ಶಿಫ್ಟ್ ಮಾಡಲಾಗಿತ್ತು.
ಮೊನ್ನೆಯ ಹಲ್ಲೆ ಘಟನೆಯ ಬೆನ್ನಲ್ಲೇ ಇಂದು ಅವರ ಉಳಿದ ಸಹಚರರೂ ಜೈಲಿನಲ್ಲಿ ದಾಂಧಲೆ ನಡೆಸಿದ್ದು, ಜೈಲು ವಾತಾವರಣ ಮತ್ತೊಮ್ಮೆ ಉದ್ವಿಗ್ನಗೊಂಡಿದೆ
ಇದನ್ನೂ ಓದಿ ನಾನು ಕಾಂಗ್ರೆಸ್‌ಗೆ ಹೋಗುವುದಾದರೆ, ಹೇಳಿ ಹೋಗತ್ತೇನೆ, ಕದ್ದು ಹೋಗುವುದಿಲ್ಲ : ಶಿವರಾಮ ಹೆಬ್ಬಾರ್


