ಸುದ್ದಿಬಿಂದು ಬ್ಯೂರೋ ವರದಿ
ಭಟ್ಕಳ : ನಗರದಲ್ಲಿ “ಗ್ಲೋಬಲ್ ಎಂಟರ್ಪ್ರೈಸಸ್” ಹೆಸರಿನಲ್ಲಿ ಗೃಹೋಪಯೋಗಿ ಸಾಮಾನುಗಳ ಅಂಗಡಿ ನಡೆಸುತ್ತಿದ್ದ ಮೂವರು ವ್ಯಕ್ತಿಗಳು 10ರಿಂದ 40% ಡಿಸ್ಕೌಂಟ್ ಸ್ಕೀಮ್ಗಳ ಹೆಸರಿನಲ್ಲಿ ನೂರಾರು ಜನರಿಗೆ ಲಕ್ಷಾಂತರ ರೂಪಾಯಿ ವಂಚಿಸಿದ ಪ್ರಕರಣವನ್ನು ಭಟ್ಕಳ ನಗರ ಪೊಲೀಸರು ಭೇದಿಸಿದ್ದು. ಮೂವರನ್ನ ಬಂಧಿಸಲಾಗಿದೆ.
ಎಂ. ಗಣೇಶನ್, ತ್ಯಾಗರಾಜನ್ ಹಾಗೂ ಮೈಯನಾದನ್ ಎಂಬುವವರನ್ನ ಬಂಧಿಸಲಾಗಿದೆ. ಬಂಧಿತರು ಕಾರ್ಶ್ಮೀಟ್ ರಸ್ತೆಯ ಮಿಸ್ಮಾ ಟವರ್ ಎದುರಿನ ಕಟ್ಟಡದಲ್ಲಿ ಅಂಗಡಿ ಆರಂಭಿಸಿ, ಆಕರ್ಷಕ ಡಿಸ್ಕೌಂಟ್ ಆಫರ್ಗಳ ಮೂಲಕ ಸಾರ್ವಜನಿಕರನ್ನು ನಂಬಿಸಿ ಹಣ ಸಂಗ್ರಹಿಸಿ, ಬಳಿಕ ಸಾಮಾನು ನೀಡದೆ ಅಂಗಡಿ ಬಂದ ಮಾಡಿ ಪರಾರಿಯಾಗಿದ್ದರು.
ಈ ಹಿನ್ನೆಲೆಯಲ್ಲಿ ಫಿರ್ಯಾದಿದಾರರಾದ ಮೊಹಮ್ಮದ ಸವೂದ (43) ಅವರು, ಅಜಾದ್ ನಗರ 2ನೇ ಕ್ರಾಸ್, ಭಟ್ಕಳ ನಿವಾಸಿಯಾಗಿದ್ದು, ತಮ್ಮಿಂದ ₹84,270 ಹಣ ಪಡೆದಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದರು. ತನಿಖೆಯಲ್ಲಿ ಆರೋಪಿತರು ಹಲವು ಜನರಿಂದ ಹಣ ಪಡೆದು ವಂಚಿಸಿರುವುದು ದೃಢಪಟ್ಟಿದೆ.
ಪೊಲೀಸರು ಭಟ್ಕಳ ಶಹರ ಠಾಣಾ ಕ್ರ.ಸಂ.149/2025ರಲ್ಲಿ ಭಾರತೀಯ ದಂಡ ಸಂಹಿತೆ ಕಲಂ 318(4) ಮತ್ತು The Banning of Unregulated Deposit Schemes Act, 2019 ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಉತ್ತರ ಕನ್ನಡ ಜಿಲ್ಲಾ ಪೊಲೀಸ ಅಧೀಕ್ಷಕ ದೀಪನ್ ಎಂ.ಎನ್. (ಐಪಿಎಸ್) ಅವರ ಮಾರ್ಗದರ್ಶನದಲ್ಲಿ, ಹೆಚ್ಚುವರಿ ಎಸ್ಪಿಗಳಾದ ಕೃಷ್ಣಮೂರ್ತಿ ಜಿ. ಜಗದೀಶ ನಾಯ್ಕ, ಉಪಾಧೀಕ್ಷಕ ಮಹೇಶ್ ಎಂ.ಕೆ., ಹಾಗೂ ಭಟ್ಕಳ ಶಹರ ಪೋಲಿಸ್ ಇನ್ಸ್ಪೆಕ್ಟರ್ ದಿವಾಕರ ಪಿ.ಎಮ್. ಅವರ ಮೇಲ್ವಿಚಾರಣೆಯಲ್ಲಿ ನಡೆದಿದೆ.
ಭಟ್ಕಳ ಪಿ.ಎಸ್.ಐ ನವೀನ್ ಎಸ್. ನಾಯ್ಕ ಅವರ ನೇತೃತ್ವದಲ್ಲಿ, ಪಿ.ಎಸ್.ಐ ತಿಮ್ಮಪ್ಪ ಎಸ್. ಮತ್ತು ಸಿಬ್ಬಂದಿಗಳಾದ ಸಿ.ಹೆಚ್.ಸಿ. ವಿನಾಯಕ ಪಾಟೀಲ್, ದೀಪಕ ನಾಯ್ಕ, ದಿನೇಶ್ ನಾಯ್ಕ, ದೇವು ನಾಯ್ಕ, ಸಿ.ಪಿ.ಸಿ. ಮಹಾಂತೇಶ ಹಿರೇಮಠ, ಕಾಶಿನಾಥ ಕೊಟಗೊಣಸಿ, ಸುರೇಶ ಮರಾಠಿ, ರೇವಣಸಿದ್ದಪ್ಪ ಮಾಗಿ, ಕಿರಣ ಪಾಟೀಲ್ ಮತ್ತು ಸಚಿನ್ ಪವಾರ ಮುಂತಾದವರು ಆರೋಪಿತರನ್ನು ಪತ್ತೆಹಚ್ಚಿದ್ದಾರೆ.
ಪೊಲೀಸರು ಆರೋಪಿತರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದು, ತನಿಖೆ ಮುಂದುವರಿಯುತ್ತಿದೆ.
Bhatkal: The Bhatkal Town Police have cracked a major fraud case involving three individuals who ran a household goods store under the name “Global Enterprises” in the city. The accused allegedly cheated hundreds of people out of several lakhs of rupees by luring them with promises of 10% to 40% discount schemes. All three accused have been arrested.
The arrested have been identified as M. Ganeshan, Thyagarajan, and Mayanadan. They had opened the store in a building opposite Misma Tower on Karshmeet Road, attracting the public through attractive discount offers. They collected large sums of money from customers and later shut down the shop without delivering any goods, fleeing the area.
A complaint was filed by Mohammad Savooth (43), a resident of Azad Nagar 2nd Cross, Bhatkal, stating that the accused had taken ₹84,270 from him. During the investigation, police confirmed that the accused had collected money from several others in a similar manner.
A case has been registered at Bhatkal Town Police Station (Crime No. 149/2025) under Section 318(4) of the Indian Penal Code and the Banning of Unregulated Deposit Schemes Act, 2019.
The investigation was carried out under the direction of Uttara Kannada Superintendent of Police Deepan M.N. (IPS), with supervision from Additional SPs Krishnamurthy G. and Jagadish Naik, Deputy SP Mahesh M.K., and Bhatkal Town Police Inspector Divakar P.M.
The operation to trace and arrest the accused was led by PSI Naveen S. Naik, assisted by PSI Thimmappa S. and staff members CHC Vinayak Patil, Deepak Naik, Dinesh Naik, Devu Naik, CPC Mahantesh Hiremath, Kashinath Kotagonasi, Suresh Marati, Revansiddappa Magi, Kiran Patil, and Sachin Pawar.
The police have taken the accused into custody for interrogation, and further investigation is in progress.
ಇದನ್ನೂ ಓದಿ/ಕಾರವಾರ ಪ್ರವಾಸೋದ್ಯಮ ಇಲಾಖೆಯಲ್ಲಿ “ಹೊಸ ಟೂರಿಸಂ ಯೋಜನೆ” ಸರ್ಕಾರಿ ವಾಹನವೇ ಮನೆಯ ಕ್ಯಾಬ್..!


